ದೀಪಾವಳಿಯೊಳಗೆ ಪಾರ್ಕಿಂಗ್ ವ್ಯವಸ್ಥೆಗೆ ಡೆಡ್‌ಲೈನ್ ? ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಟ್ರಾಫಿಕ್​ ಪೊಲೀಸ್​ ವಾರ್ನಿಂಗ್!

ಹಂಚಿಕೊಳ್ಳಿ
WhatsApp Facebook X Telegram
Shivamogga Traffic Police Inspect Private Hospital Parking After Deadline Warning
Shivamogga Traffic Police Inspect Private Hospital Parking After Deadline Warning
dasrara add shivamogga

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಖಾಸಗಿ ಆಸ್ಪತ್ರೆಗಳ ವಾಹನ ನಿಲುಗಡೆ ಸಮಸ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಈಗಾಗಲೇ ಡೆಡ್​ಲೈನ್ ನೀಡಿದ್ದಾರೆ. ಇದರ ನಡುವೆ ಇದೀಗ ಆಸ್ಪತ್ರೆಗಳ ಪಾರ್ಕಿಂಗ್ ಸ್ಥಳಗಳ ನೇರ ಪರಿಶೀಲನೆ ಆರಂಭಿಸಿದ್ದಾರೆ.ದೀಪಾವಳಿ ಹಬ್ಬದೊಳಗೆ ಆಸ್ಪತ್ರೆಗಳ ಸೆಲ್ಲರ್‌ಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕೆಂದು ನವೆಂಬರ್ 3ರಂದು ನಡೆದ ಸಭೆಯಲ್ಲಿ ಸೂಚಿಸಿದ್ದ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ದೇವರಾಜ್, ನಿನ್ನೆ ದಿನ ಅಂದರೆ ನವೆಂಬರ್ 6ರಂದು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಪಾರ್ಕ್ ಬಡಾವಣೆಯ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅನುಮೋದಿತ ಕಟ್ಟಡ ನಕ್ಷೆಯ ಪ್ರಕಾರ ಪಾರ್ಕಿಂಗ್‌ಗೆ ಮೀಸಲಿಟ್ಟಿರುವ ಸ್ಥಳಗಳನ್ನು ಪರಿಶೀಲಿಸಿದ್ದಾರೆ.

shivamogga dasara add
dasrara add shivamogga
dasrara add shivamogga

ಪಾರ್ಕ್ ಬಡಾವಣೆ, ದುರ್ಗಿಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಸ್ಪತ್ರೆಗಳು ಸೇರಿದಂತೆ ನೂರಾರು ವೈದ್ಯಕೀಯ ಸೇವೆಗಳಿಗೆ ಸಂಬಂಧಿಸಿದ ಕಟ್ಟಡಗಳಿವೆ. ಈ ಪೈಕಿ ಕೆಲವು ಆಸ್ಪತ್ರೆಗಳು ತಮ್ಮ ಕಟ್ಟಡಗಳ ಸೆಲ್ಲರ್‌ಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸದೆ, ಬೇರೆ ಉದ್ದೇಶಗಳಿಗೆ ಬಳಸ್ತಿವೆ. ಹಾಗಾಗಿ ನಿನ್ನೆ ದಿನ, ಕಟ್ಟಡಗಳ ಅನುಮೋದಿತ ನಕ್ಷೆಯಲ್ಲಿ ವಾಹನ ನಿಲುಗಡೆಗೆ ಮೀಸಲಿಟ್ಟಿರುವ ಸ್ಥಳಗಳನ್ನು ಅದೇ ಉದ್ದೇಶಕ್ಕೆ ಬಳಸದೆ ಇರುವುದನ್ನ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

  • ಪರಿಶೀಲನೆ ಸಂದರ್ಭದಲ್ಲಿ ಬಿಲ್ಡಿಂಗ್ ಪ್ಲಾನ್ ಪಾರ್ಕಿಂಗ್‌ಗಾಗಿ ಮೀಸಲಿಟ್ಟಿರುವ ಸ್ಥಳದಲ್ಲಿ ಬೇರೆ ಏನೇನು ವ್ಯವಸ್ಥೆ ಕಲ್ಪಿಸಲಾಗಿದೆ? ಅನ್ಯ ಉದ್ದೇಶಕ್ಕೆ ಸ್ಥಳ ಬಳಸಲಾಗಿದೆಯಾ ಎಂಬಿತ್ಯಾದಿ ಅಂಶಗಳನ್ನ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
  • ಅಲ್ಲದೆ ಪ್ಲಾನ್ ಪ್ರಕಾರ, ಅಗತ್ಯ ಸ್ಥಳಾವಕಾಶ ಒದಗಿಸದ ಆಸ್ಪತ್ರೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ಪರಿಶೀಲನೆ ಸಂದರ್ಭದಲ್ಲಿ ತಿಳಿಸಲಾಗಿದೆ.

ಇನ್ನೂ ಇದಕ್ಕೂ ಮೊದಲು ಕಳೆದ ನವೆಂಬರ್ 3ರಂದು ಶಿವಮೊಗ್ಗ ಸಂಚಾರ ಪೊಲೀಸ್ ವೃತ್ತ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಎಂಜಿನಿಯರ್‌ಗಳು ಹಾಗೂ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮಾತನಾಡಿದ್ದ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ದೇವರಾಜ್, ಆಸ್ಪತ್ರೆಗಳಿಗೆ ಬರುವ ಸಾರ್ವಜನಿಕರು ಮತ್ತು ರೋಗಿಗಳ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕುರಿತು ಹಲವು ದೂರುಗಳು ಬಂದಿದ್ದು , ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಡೆಡ್​ಲೈನ್ ನೀಡಿದ್ದರು.

shivamogga dasara add
shivamogga dasara add
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor