ಊರಿಗೆ ದೊಡ್ಡ ಹಬ್ಬ, ದೊಡ್ಡಪೇಟೆ ಪೊಲೀಸ್​ಗೆ ಹೆವಿ ಡ್ಯೂಟಿ! ಲಾಠಿ ಹಿಡಿದು ಸಿಬ್ಬಂದಿ ಜೊತೆ ಫೀಲ್ಡ್‌ಗಿಳಿದ ಇನ್‌ಸ್ಪೆಕ್ಟರ್ ಸತ್ಯನಾರಾಯಣ್!

ಹಂಚಿಕೊಳ್ಳಿ
WhatsApp Facebook X Telegram
Shivamogga Deepavali Rush Doddapete Police Patrol Crowded Areas Till Late Night
Shivamogga Deepavali Rush Doddapete Police Patrol Crowded Areas Till Late Night

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಸಿಟಿಯಲ್ಲಿ ನಿನ್ನೆ ಫುಲ್ ರಶ್, ದೀಪಾವಳಿ ಹಬ್ಬರ ಖರೀದಿಯ ಜೊತೆಜೊತೆಗೆ ವಿದ್ಯಾನಗರದಲ್ಲಿ ಗಣಪತಿ ವಿಸರ್ಜನೆ ಇವೆರಡರ ನಡುವೆ ಹಬ್ಬಕ್ಕೆ ಬರುವವರು ಮತ್ತವರು ಬರುತ್ತಿರುವವರ ವೆಹಿಕಲ್​ಗಳು.. ಇದರಿಂದಾಗಿ ಪೊಲೀಸರು ನಿನ್ನೆ ದಿನ ಫುಲ್​ ಸುಸ್ತು ಹೊಡೆದಿದ್ದರು. ಅದರಲ್ಲಿಯು ಟ್ರಾಫಿಕ್ ಪೊಲೀಸರಿಗೆ ಹರಸಾಹಸದ ಟಾಸ್ಕ್​ ಒಂದ್ಕಡೆ ಹಬ್ಬಕ್ಕೆ ಊರಿಗೆ ಹೋಗ್ತಿನಿ ಅನ್ನೋ ಮನೆಯವರನ್ನ ಬಿಟ್ಟುಬರಲು ಆಗದಿರೋವಷ್ಟು ತೊಂದರೆ ಕೊಟ್ಟಿತ್ತು. ಇನ್ನೊಂದು ಕಡೆ ದೊಡ್ಡಪೇಟೆ ಪೊಲೀಸರಿಗೆ ಹಬ್ಬದ ಬಂದೋಬಸ್ತ್​ ಪಜೀತಿ, ಊರಿನವರಿಗೆ ಹಬ್ಬ ಮಾಡೋದಕ್ಕೆ ಬಿಟ್ಟು, ನಾವು ಬೀದಿ ಕಾಯೋದಾಯ್ತಲ್ಲ ಅಂತಾ ಅನಿಸುವಂತೆ ಮಾಡಿತ್ತು. ಹಾಗಿದ್ದರೂ ಖಾಕಿ ತೊಟ್ಟಾಗಿದೆ ಬಿಡುವಂತಿಲ್ಲ, ಮನೆ ಸಂಸಾರ ಅಂತಾ ನೋಡುವುದಕ್ಕು ಮೊದಲು ಸಾಮಾಜಿಕ ಶಾಂತಿ ಸುವ್ಯವಸ್ಥೆಯೇ ಮುಖ್ಯ ಅದ್ಕೊಂಡು ಸಾಯಿಕುಮಾರ್​ ರೇಂಜಿಗೆ ಸಮಾಧಾನ ತಗೊಂಡು ಡ್ಯೂಟಿ ಮಾಡುತ್ತಿದ್ದರು.

ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಡ್ಯೂಟಿ ಅಂದರೆ ಸುಮ್ಮನೇನಾ

ಹೇಳಿಕೇಳಿ ದೊಡ್ಡಪೇಟೆ ಪೊಲೀಸ್​ ಸ್ಟೇಷನ್​ ದೊಡ್ಡಪೇಟೆಯೆ ಸರಿ. ಎಲ್​ ಆಂಡ್ ಓ ಇಲ್ಲಿನ ಸಮಸ್ಯೆಯಲ್ಲ. ಸೂಕ್ಷ್ಮತೆಯೇ ಇಲ್ಲಿಯ ಬಿಗ್​ ಬಾಸ್​ನ ಪ್ಲಾಬ್ಲಮ್​ ಹಾಗಾಗಿ ಪ್ರತಿದಿನವೂ ಇಲ್ಲಿನ ಇನ್​​ಸ್ಪೆಕ್ಟರ್​ನಿಂದ ಹಿಡಿದು ಸೆಂಟ್ರಿಯವರೆಗೂ ಮನಸ್ಸಲ್ಲಿ ಎಕ್ಟ್ರಾ ಬ್ಯಾಟ್ರಿ ಚಾರ್ಜ್​ ಇಟ್ಕೊಂಡು ಕೆಲಸ ಮಾಡುತ್ತಾರೆ. ಹಬ್ಬದ ಕಾರಣಕ್ಕೆ ನಿನ್ನೆ ಈ ಡ್ಯೂಟಿ ದೊಡ್ಡಪೇಟೆ ಪೊಲೀಸರಿಗೆ ತ್ರಿಬಲ್​ ಆಗಿತ್ತು. ಹಾಗಾಗಿ ಸಿಬ್ಬಂದಿ ಜೊತೆಗೆ ಖುದ್ದು ಫೀಲ್ಡಿಗೆ ಇಳಿದ ದೊಡ್ಡಪೇಟೆ ಇನ್​ಸ್ಟೆಕ್ಟರ್​ ಸತ್ಯನಾರಾಯಣ್​ ತಮ್ಮ ಸ್ಟೇಷನ್​ ವ್ಯಾಪ್ತಿಯಿಡಿ ಸುತ್ತಾಡಿ ಗಸ್ತು ಮಾಡಿದ್ರು. ಲಾಠಿ ಹಿಡಿದೆ ಫೀಲ್ಡ್​ ನಲ್ಲಿ ಓಡಾಡಿದ ಇನ್​ಸ್ಪೆಕ್ಟರ್​ ಹಾಗೂ ಸಿಬ್ಬಂದಿ ಜನರ ರಶ್​ ನಡುವೆ ಅನುಮಾನಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಿದ್ದರು. ಅದರಲ್ಲಿಯು ಮೊಬೈಲ್ ಕಳ್ತನ ವಿಪರೀತ ಆಗುವ ಸಾಧ್ಯತೆ ಇದ್ದಿದ್ದರಿಂದ ಏರಿಯಾದೆಲ್ಲೆಡೆ ಬೀಟ್ ಹಾಕುತ್ತಲೇ ಇದ್ದರು.
ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ, ಪ್ರೈವೇಟ್ ಬಸ್ ಸ್ಟಾಪ್, ಗಾಂಧಿ ಬಜಾರ್, ಅಮಿರ್ ಅಹಮದ್ ಸರ್ಕಲ್ ಹೀಗೆ ಪ್ರತಿ ಏರಿಯಾದಲ್ಲಿಯು ಓಡಾಡಿದ ದೊಡ್ಡಪೇಟೆ ಪೊಲೀಸರು ರೂಟ್ ಮಾರ್ಚ್​ ನಡೆಸಿದ್ರು. ತಡರಾತ್ರಿ ರಶ್​ ಕಳೆದು, ಹಬ್ಬದ ವಹಿವಾಟು ಮುಗಿವರೆಗೂ ಬಂದೋಬಸ್ತ್​ ನೋಡಿಕೊಂಡ ದೊಡ್ಡಪೇಟೆ ಪೊಲೀಸರು, ಯಾವುದೆ ಅಚಾತುರ್ಯಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದಾಗ್ಯು ತಂಟೆ ಮಾಡುವ ಸ್ಟಂಟ್​ ಮ್ಯಾನ್​ಗಳಿಗೆ ಅಲ್ಲಲ್ಲೆ ವಾರ್ನಿಂಗ್​ ಕೊಡುವುದನ್ನ ಸಹ ತಪ್ಪಿಸಲಿಲ್ಲ.
ದೊಡ್ಡ ಹಬ್ಬ ದೀಪಾವಳಿ,ಈ ಸಂಭ್ರಮದ ಕಳೆಯಲ್ಲಿ ಚೂರು ಕಲೆಯಾಗಬಾರದೆಂದು ತಮ್ಮ ಮನೆಯ ಸಡಗರ ಬಿಟ್ಟು ಡ್ಯೂಟಿ ಮಾಡಿದ ದೊಡ್ಡಪೇಟೆಯ ಪೊಲೀಸರಿಗೊಂದು ಸೆಲ್ಯೂಟ್.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor