ಸುದ್ದಿಯ ಸ್ಥಳ: Thirthahalli, Shivamogga, Karnataka
ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಕೌರಿಬೈಲಿನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿಯೊಂದು ಮೃತಪಟ್ಟಿರುವ ಘಟನೆ ಬಗ್ಗೆ ವರದಿಯಾಗಿದೆ. ಕುರುವಳ್ಳಿ ಪ್ರಮೋದ್ ಪೂಜಾರಿಯವರ ಮಾಹಿತಿ ಆಧರಿಸಿ ಹೇಳುವುದಾದರೆ, ರಸ್ತೆ ದಾಟುವ ಸಂದರ್ಭದಲ್ಲಿ ವಾಹನ ಡಿಕ್ಕಿ ಹೊಡೆದಿರಬಹುದು ಎನ್ನಲಾಗಿದೆ.
ಕೌರಿಬೈಲು ಹಾಗೂ ಸುತ್ತಮುತ್ತ ಚಿರತೆ ಬಹಳ ಇವೆ. ಆಗಾಗ ಅವು ರೋಡಿಗೆ ಬರುವುದನ್ನ ಹಲವು ಕಂಡಿದ್ದಾರೆ. ಅದೇ ರೀತಿ ರೋಡಿಗೆ ಬಂದಿದ್ದ ಚಿರತೆ ಯಾವುದೋ ವೆಹಿಕಲ್ ಡಿಕ್ಕಿಯಾಗಿಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಪರಿಶೀಲನೆ ನಡೆಸ್ತಿದೆ.
