ಲಾರಿಗೆ ಸಚಿವ ಮಧು ಬಂಗಾರಪ್ಪರವರ ಕಾರು ಡಿಕ್ಕಿ! ಸ್ವಲ್ಪದರಲ್ಲಿ ತಪ್ಪಿದ ಅಪಾಯ!

Malenadu Today

Dec 28, 2023  | ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರ ಕಾರು ಅಪಘಾತಕ್ಕೀಡಾಗಿದೆ. 

ಮಧು ಬಂಗಾರಪ್ಪ

 

ತುಮಕೂರು ಜಿಲ್ಲೆ ನಂದಿಹಳ್ಳಿ ಬಳಿ ಹೆದ್ದಾರಿಯಲ್ಲಿ ಇವತ್ತಿನ ಬೆಳಗ್ಗಿನ ಜಾವ ಘಟನೆ ಸಂಭವಿಸಿದೆ.   ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಪ್ರಯಾಣಿಸುತ್ತಿದ್ದ ಕಾರು ಮುಂದೆ ಹೋಗುತ್ತಿದ್ದ ಲಾರಿಗೆ ಗುದ್ದಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. 

READ : BREAKING NEWS | ಶಿವಮೊಗ್ಗದಲ್ಲಿ ಮತ್ತೆ ಪೊಲೀಸ್ ಫೈರ್! ವಲಂಗಾ ಕಾಲಿಗೆ ಗುಂಡು

ಅದೃಷ್ಟವಶಾತ್​ ಕಾರಿನಲ್ಲಿದ್ದ ಸಚಿವ ಮಧು ಬಂಗಾರಪ್ಪ ಸೇರಿದಂತೆ ಮೂವರು ಬಚಾವ್​ ಆಗಿದ್ದಾರೆ. ಯಾವುದೇ ಗಾಯಗಳಿಲ್ಲದೇ ಸಚಿವರು ಪಾರಾಗಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಲಾರಿಗೆ ಕಾರು ಡಿಕ್ಕಿಯಾಗಿದ್ದು ಕಾರಿನ ಬ್ಯಾನೆಟ್​ಗೆ ಹಾನಿಯಾಗಿದೆ.

ಘಟನೆ ಬೆನ್ನಲ್ಲೆ ಸಚಿವರು ಬದಲಿ ವಾಹನದಲ್ಲಿ ಬೆಂಗಳೂರು ತೆರಳಿದ್ದಾರೆ. ಸಚಿವರ ಮೂಲಗಳಲ್ಲಿ ಈ ಬಗ್ಗೆ ಮಲೆನಾಡು ಟುಡೆ ತಂಡ ವಿಚಾರಿಸಿದಾಗ, ಸಚಿವರಿಗೆ ಯಾವುದೇ ಅಪಾಯವಾಗಿಲ್ಲ. ಸಣ್ಣದೊಂದು ಘಟನೆ ಸಂಭವಿಸಿತ್ತು. ಅದೃಷ್ಟವಶಾತ್ ಯಾರಿಗೂ ಏನೂ ಸಹ ಆಗಿಲ್ಲ. ಹೀಗಾಗಿ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ

Share This Article