BREAKING NEWS | ಶಿವಮೊಗ್ಗದಲ್ಲಿ ಮತ್ತೆ ಪೊಲೀಸ್ ಫೈರ್! ವಲಂಗಾ ಕಾಲಿಗೆ ಗುಂಡು

BREAKING NEWS | Police firing in Shimoga again! Rowdy-sheeter Valanga shot in the leg

BREAKING NEWS |  ಶಿವಮೊಗ್ಗದಲ್ಲಿ ಮತ್ತೆ ಪೊಲೀಸ್ ಫೈರ್! ವಲಂಗಾ ಕಾಲಿಗೆ ಗುಂಡು

SHIVAMOGGA  |  Dec 28, 2023  |  ಶಿವಮೊಗ್ಗದ ಫ್ರೀಡಂಪಾರ್ಕ್​​ನಲ್ಲಿ ನಡೆದಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ವಲ್ಲು ಅಲಿಯಾಸ್ ವಲಂಗಾನ ಕಾಲಿಗೆ ಪೊಲೀಸ್ ಗುಂಡು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. 

READ : ಮತ್ತೆ ಆಕ್ಟೀವ್ ಆಯ್ತಾ ಶಿವಮೊಗ್ಗ ರೌಡಿಸಂ! ಫ್ರೀಡಂ ಪಾರ್ಕ್​ ಬಳಿ ಹಳೇ ರೌಡಿಗಳ ಕಿರಿಕ್​! ಓರ್ವನ ಮೇಲೆ ಹಲ್ಲೆ!

ರೌಡಿಶೀಟರ್ ಮಂಜುನಾಥ ಅಲಿಯಾಸ್ ವಲಂಗಾನ ಎಡ ಕಾಲಿಗೆ ಶಿವಮೊಗ್ಗ ಪೊಲೀಸರು ಫೈರ್ ಮಾಡಿದ್ದಾರೆ. ಶಿವಮೊಗ್ಗದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು ಜಯನಗರ ಪೊಲೀಸ್ ಸ್ಟೇಷನ್ ಇನ್​ಸ್ಪೆಕ್ಟರ್​ ಸಿದ್ದೇಗೌಡ ಸೋಮಿನಕೊಪ್ಪದ ಬಳಿಯಲ್ಲಿ ರೌಡಿಶೀಟರ್​ ಕಾಲಿಗೆ ಬುಲೆಟ್ ಫೈರ್ ಮಾಡಿದ್ದಾರೆ. 

READ : Permit ಇಲ್ಲದೆ ಆಟೋ ಚಲಾಯಿಸುತ್ತಿದ್ದ ಚಾಲಕನಿಗೆ ಬರೋಬ್ಬರಿ ಹತ್ತು ವರೆ ಸಾವಿರ ರೂಪಾಯಿ ದಂಡ

ಫ್ರೀಡಂಪಾರ್ಕ್​ನಲ್ಲಿ ಶಶಿ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ವಲ್ಲು ಅಲಿಯಾಸ್ ವಲಂಗಾ ಆಗಿದ್ದು ನೇಪಾಳಿ ಮಂಜನ ಜೊತೆ ಸೇರಿಕೊಂಡು ಶಶಿ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪವಿದೆ. 

ಇದೀಗ ಇವತ್ತು ಬೆಳಗ್ಗಿನ ಜಾವ ಆರೋಪಿ ಮಹಜರ್​ ಪ್ರಕ್ರಿಯೆ  ವೇಳೆ ವಲಂಗಾನ ಕಾಲಿಗೆ ಗುಂಡು ಬಿದ್ದಿದೆ.ಈ ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಸಹ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. 

ಇನ್ನೂ ಈ ಬಗ್ಗೆ ಎಸ್​ಪಿ ಮಿಥುನ್ ಕುಮಾರ್​ ರವರು ವಾಟ್ಸ್ಯಾಪ್​ ಮೆಸೇಜ್​ ಮೂಲಕ ಮಾಹಿತಿ ನೀಡಿದ್ದು, ಶಿವಮೊಗ್ಗ ನಗರದಲ್ಲಿ ಮೂರು ದಿನಗಳ ಹಿಂದೆ ನಡೆದ 307 ಪ್ರಕರಣ ದಾಖಲಾಗಿತ್ತು. 

ಈ ಸಂಬಂಧ  ಆರೋಪಿ ಮಂಜ ಅಲಿಯಾಸ್ ವಲಂಗ ಮಂಜನನ್ನು ನಿನ್ನೆ ಬಂಧಿಸಲಾಗಿದೆ. ಇಂದು ಬೆಳಿಗ್ಗೆ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವ ಸಮಯದಲ್ಲಿ, ಆತ  ಪೊಲೀಸ್​ ಸಿಬ್ಬಂದಿ ರವಿ ಮತ್ತು ಇನ್ನೋರ್ವ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ..

ಈ ವೇಳೆ  ಇನ್ಸ್ ಪೆಕ್ಟರ್ ಸಿದ್ದನಗೌಡ ಅವರು ಕತ್ತಿಯನ್ನು ಎಸೆಯುವಂತೆ ಎಚ್ಚರಿಕೆ ನೀಡಿದರೂ ವಲಂಗಾ ಹಲ್ಲೆಗೆ ಮುಂದಾಗಿದ್ದು, ಈ ವೇಳೆ  ಸಿಬ್ಬಂದಿ ರವಿ ಗಾಯಗೊಂಡಿದ್ದಾರೆ..ಹೀಗಾಗಿ ಆತ್ಮರಕ್ಷಣೆಗಾಗಿ ಮತ್ತು ನಮ್ಮ ಸಿಬ್ಬಂದಿಯ ರಕ್ಷಣೆಗಾಗಿ ಇನ್ಸ್ಪೆಕ್ಟರ್  ಆರೋಪಿಯ ಕಾಲಿಗೆ ಗುಂಡು ಹಾರಿಸಿ ನಂತರ ಆತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.