Permit ಇಲ್ಲದೆ ಆಟೋ ಚಲಾಯಿಸುತ್ತಿದ್ದ ಚಾಲಕನಿಗೆ ಬರೋಬ್ಬರಿ ಹತ್ತು ವರೆ ಸಾವಿರ ರೂಪಾಯಿ ದಂಡ

Malenadu Today

SHIVAMOGGA  |  Dec 27, 2023  |  ಪರ್ಮಿಟ್ ಇಲ್ಲದೆ ಆಟೋ ಓಡಿಸಿದ್ದಕ್ಕೆ  ಭದ್ರಾವತಿ ಕೋರ್ಟ್ ಆಟೋ ಚಾಲಕನಿಗೆ ಹತ್ತುವರೆ ಸಾವಿರ ರೂಪಾಯಿ ದಂಡ ವಿಧಿಸಿದ ಬಗ್ಗೆ ವರದಿಯಾಗಿದೆ. 

ಭದ್ರಾವತಿ ಕೋರ್ಟ್ 

Permit ಇಲ್ಲದೆ ಸಂಚರಿಸುತ್ತಿದ್ದ ಆಟೋವೊಂದರ ಕುರಿತಾಗಿ ಚನ್ನಗಿರಿ ರಸ್ತೆಯಲ್ಲಿ ಇಲ್ಲಿನ ಸಂಚಾರಿ ಪೊಲೀಸ್ ಸ್ಟೇಷನ್ ಎಸ್​ಐ ಶಾಂತಲಾರವರು ಕೇಸ್ ದಾಖಲಿಸಿದ್ದರು.  ಭಾರತೀಯ ಮೋಟಾರ್ ಕಾಯ್ದೆ 192(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಕೋರ್ಟ್​ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ರು. 

READ : ಕೆಎಸ್​ಆರ್​ಟಿಸಿ ಬಸ್​ಗಳನ್ನ ನಡುರಸ್ತೆಯಲ್ಲಿಯೇ ತಡೆದ ವಿದ್ಯಾರ್ಥಿಗಳು !ಕಾರಣ ಇಲ್ಲಿದೆ

ಈ ಸಂಬಂಧ ಭದ್ರಾವತಿ  ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಡಿ.26ರಂದು ವಿಚಾರಣೆ ನಡೆದು, ಆಟೋ ಚಾಲಕನಿಗೆ ಬರೋಬ್ಬರಿ 10,500 ರೂಪಾಯಿ ದಂಡವನ್ನು ನ್ಯಾಯಾಧೀಶರು ವಿಧಿಸಿದ್ದಾರೆ. 

2. 2.

Share This Article