SHIVAMOGGA | Dec 27, 2023 | ಶಿವಮೊಗ್ಗದ ಹೊಳೆಹೊನ್ನೂರು ಕೈಮರ ಸರ್ಕಲ್ ನಲ್ಲಿ ಇವತ್ತು ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ (KSRTC bus) ತಡೆದು ಪ್ರತಿಭಟನೆ ನಡೆಸಿದರು
ಕೆಎಸ್ಆರ್ಟಿಸಿ ಬಸ್
ಹೊಳೆಹೊನ್ನೂರು ಮಾರ್ಗದಲ್ಲಿ ಹಾದು ಹೋಗುವ ಸರ್ಕಾರಿ ಬಸ್ಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಇವತ್ತು ಬಸ್ಗಳನ್ನ ತಡೆದು ಪ್ರತಿಭಟನೆ ನಡೆಸಿದರು.
ಕೈಮರ ಸರ್ಕಲ್ನಲ್ಲಿ ನಡೆದ ಪ್ರತಿಭಟನೆ ವೇಳೆ ಕೆಎಸ್ಆರ್ಟಿಸಿ ಬಸ್ನಲ್ಲಿ ವಿದ್ಯಾರ್ಥಿಗಳನ್ನ ಹತ್ತಿಸಿಕೊಳ್ಳುತ್ತಿಲ್ಲ. ಬಸ್ಗಳನ್ನ ನಿಲ್ಲಿಸದೇ ಮುಂದಕ್ಕೆ ಸಾಗುತ್ತಾರೆ . ಹೀಗಾಗಿ ಕಾಲೇಜಿಗೆ ನಡೆದುಕೊಂಡೇ ಹೋಗಬೇಕಾದ ಸನ್ನಿವೇಶವಿದೆಯೆಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆಯನ್ನು ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಥಳಕ್ಕೆ ಬಂದು ಆಲಿಸಬೇಕು ಎಂದು ಪಟ್ಟು ಹಿಡಿದು ಬಸ್ಗಳನ್ನು ಮುಂದಕ್ಕೆ ಸಂಚರಿಸಲು ಅವಕಾಶ ನೀಡದೇ ಪ್ರತಿಭಟಿಸಿದರು.