ದನ ಖರೀದಿಗೆ ₹10 ಲಕ್ಷ ಸಾಲ ಕೊಡಿಸುವುದಾಗಿ ನಂಬಿಸಿ ರೈತನಿಗೆ ₹3.40 ಲಕ್ಷ ವಂಚನೆ

ಹಂಚಿಕೊಳ್ಳಿ
WhatsApp Facebook X Telegram
CEN police station shivamogga
CEN police station shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಪ್ರಧಾನ ಮಂತ್ರಿ ಜನ್‌ ಧನ್ ಯೋಜನೆ (ಪಿಎಂಜೆಡಿವೈ) ಅಡಿಯಲ್ಲಿ ದನ ಖರೀದಿಸಲು ₹10 ಲಕ್ಷ ಸಾಲ ನೀಡುವುದಾಗಿ ನಂಬಿಸಿ 57 ವರ್ಷದ ರೈತರೊಬ್ಬರಿಂದ ಅಪರಿಚಿತ ವ್ಯಕ್ತಿ ₹3,40,768 ವಂಚಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಖಲಾಗಿರುವ ಎಫ್​ಐಆರ್​ನ ಪ್ರಕಾರ, ಯೂಟ್ಯೂಬ್‌ನಲ್ಲಿ ಪಿಎಂಜೆಡಿವೈ ಗವರ್ನಮೆಂಟ್ ಎಂಬ ಪೋಸ್ಟರ್ ನೋಡಿದ್ದ ರೈತ, ಅದರಲ್ಲಿ ನೀಡಲಾಗಿದ್ದ ಅಪರಿಚಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಸರ್ಕಾರದ ಯೋಜನೆಯಡಿ ಸಾಲ ಸೌಲಭ್ಯ ದೊರೆಯುತ್ತದೆ ಎಂದು ನಂಬಿಸಿದ್ದಾನೆ.

ಹಸುಗಳನ್ನು ಖರೀದಿಸಲು ₹10 ಲಕ್ಷ ಸಾಲ ಬೇಕೆಂದು ರೈತ ತಿಳಿಸಿದಾಗ, (Cattle Loan Scam) ಸಾಲ ಮಂಜೂರು ಮಾಡುವುದಾಗಿ ಆ ಕಡೆಯಿಂದ ಹೇಳಲಾಗಿದೆ. ಆದರೆ ಸಾಲ ನೀಡುವ ಪ್ರಕ್ರಿಯೆಗೆ ಏರ್‌ಪೋರ್ಟ್ ವೆಚ್ಚ, ಲಾಡ್ಜ್ ಬಿಲ್, ಕಾರಿನ ವೆಚ್ಚ, ತೆರಿಗೆ ಸೇರಿದಂತೆ ವಿವಿಧ ಶುಲ್ಕಗಳಿಗಾಗಿ ಮೊದಲು ಹಣ ಪಾವತಿಸಬೇಕೆಂದು ತಿಳಿಸಲಾಗಿದೆ.

ಇದನ್ನು ನಂಬಿದ ರೈತ ಹಂತ ಹಂತವಾಗಿ ಒಟ್ಟು ₹3,40,768 ಹಣವನ್ನು ಸೂಚಿಸಲಾದ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಸಾಲದ ಕುರಿತು ವಿಚಾರಿಸಲು ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಆ ಸಂಖ್ಯೆಗಳು ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ.

ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದ ಬಳಿಕ ರೈತ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor