ಮೆಗ್ಗಾನ್ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಉಡುಪಿಯ ಶಮ್ಮಿರಾಜ್ ಶೆಟ್ಟಿ ಕಾಣೆ

ಹಂಚಿಕೊಳ್ಳಿ
WhatsApp Facebook X Telegram
51-Year-Old Shammiraj Shetty Missing From Shivamogga
51-Year-Old Shammiraj Shetty Missing From Shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಉಡುಪಿ ಮೂಲದ ಶಮ್ಮಿರಾಜ್ ಶೆಟ್ಟಿ ಎಂಬವರು ಕಾಣೆಯಾದ ಬಗ್ಗೆ ನಿನ್ನೆ ದಿನ ವಾರ್ತಾ ಇಲಾಖೆಯ ಮೂಲಕ ಪೊಲೀಸ್ ಪ್ರಕಟಣೆಯನ್ನ ನೀಡಲಾಗಿದೆ. 51 ವರ್ಷದ ಈ ವ್ಯಕ್ತಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಟೆಂಡರ್ ಕೆಲಸ ಮಾಡಿಕೊಂಡಿದ್ದು, ಸೆಪ್ಟೆಂಬರ್ 01ರಿಂದ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಕಾಣೆಯಾಗಿರುವ ಶಮ್ಮಿರಾಜ್ ಶೆಟ್ಟಿ 5.7 ಅಡಿ ಎತ್ತರ, ದಪ್ಪ ಮೈಕಟ್ಟು ಹಾಗೂ ಗೋಧಿ ಮೈಬಣ್ಣ ಹೊಂದಿದ್ದಾರೆ. ದಪ್ಪ ಮೀಸೆ ಬಿಟ್ಟಿರುವ ಅವರು ಕನ್ನಡ, ತುಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ, ಅವರ ಸುಳಿವು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಶಮ್ಮಿರಾಜ್ ಶೆಟ್ಟಿ ಅವರ ಬಗ್ಗೆ ಯಾರಿಗಾದರೂ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08182-261414 ಅಥವಾ 9480803345 ಅನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಭಾರತ್ ಜೋಡೋ ಯಾತ್ರೆ 2.0
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor