ತುಂಗಾನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ಮನೆಗೆ ಹೋಗುತ್ತಿದ್ದ ಅರ್ಚಕರ ರಾಬರಿ!

SHIVAMOGGA  |  Jan 10, 2024  |  ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ರಾಬರಿ ಪ್ರಕರಣವೊಂದು ನಡೆದಿದೆ. ಈ ಸಂಬಂಧ ಕೇಸ್ ಸಹ ದಾಖಲಾಗಿದೆ. 

ತುಂಗಾನಗರ ಪೊಲೀಸ್ ಸ್ಟೇಷನ್

ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಮಲ್ಲಿಗೇನಹಳ್ಳಿ ಸಮೀಪ ಈ ಘಟನೆ ನಡೆದಿದೆ. ಕಳೆದ ಜನವರಿ 8 ರಂದು ಈ ಘಟನೆ ನಡೆದಿದ್ದು, ಇದೀಗ ಕಂಪ್ಲೆಂಟ್ ಆಗಿ ಕೇಸ್ ದಾಖಲಾಗಿದೆ. 

ಕೋಟೆಗಂಗೂರು ನಿವಾಸಿ ಅರ್ಚಕರೊಬ್ಬರು ನ್ಯೂ ಮಂಡ್ಲಿ ಯಲ್ಲಿನ ದೇವಸ್ಥಾನವೊಂದರಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ ಹೋಗುತ್ತಿದ್ದರು. ತಮ್ಮ ಜೊತೆಗೆ ಇನ್ನೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದರು. ಮಲ್ಲಿಗೇನ ಹಳ್ಳಿ ಇವರನ್ನ ಹಿಂಬದಿಯಿಂದ ಬಂದ ಬೈಕ್ ಸವಾರರು ಅಡ್ಡಗಟ್ಟಿದ್ದಾರೆ. 

ಅಲ್ಲದೆ  ಡ್ರ್ಯಾಗರ್​ ತೋರಿಸಿ ಅರ್ಚಕರ ಬಳಿಯಿದ್ದ ಚಿನ್ನ ಸರ ಹಾಗೂ ಇನ್ನೊಬ್ಬರ ಬಳಿ ಇದ್ದ ದುಡ್ಡನ್ನ ಕಿತ್ತುಕೊಂಡಿದ್ದಾರೆ. ಅಷ್ಟರಲ್ಲಿ ಪೊಲೀಸ್ ಪೊಲೀಸ್ ಎಂದು ಅರ್ಚಕರು ಕೂಗಿದ ಹಿನ್ನೆಲೆಯಲ್ಲಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು