ಮದುವೆ ಮಂಟಪಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ಶಾಕ್‌ | ಯಮನಾಗಿ ಬಂದ ಲಾರಿ |

While crossing the road to go to the wedding hall | Lorry who came as Yama Shivamogga District, Shikaripura News, Shimogga Road,

ಮದುವೆ ಮಂಟಪಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ಶಾಕ್‌ | ಯಮನಾಗಿ ಬಂದ ಲಾರಿ |

SHIVAMOGGA | MALENADUTODAY NEWS | Apr 30, 2024    ‌ 

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪೇಟೆಯಲ್ಲಿ  ಸಮುದಾಯ ಭವನವೊಂದರಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಲು ಬಂದಿದ್ದ ವ್ಯಕ್ತಿಯೊಬ್ಬರು ಕಲ್ಯಾಣಮಂಟಪದ ಎದುರು ರಸ್ತೆ ದಾಟುತ್ತಿದ್ದಾಗ ಲಾಡಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. 

ಘಟನೆ ವಿವರ 

ವೀರನಗೌಡ ಎಂಬವರು ಶಿಕಾರಿಪುರ ಪೇಟೆಯಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಲ್ಯಾಣ ಮಂದಿರ ಎದುರಿನ ರಸ್ತೆ ದಾಟುವಾಗ ಅವರಿಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಶಿಕಾರಿಪುರದ  ಶಿವಮೊಗ್ಗ  ರಸ್ತೆಯಲ್ಲಿ ಶನಿವಾರ ಘಟನೆ ನಡೆದಿದೆ. ನ್ಯಾಮತಿ ತಾಲೂಕು ಗುಡ್ಡಳ್ಳಿ ಗ್ರಾಮದ ವಾಸಿ ವೀರನಗೌಡ(45) ಮೃತಪಟ್ಟವರು.

ಪಟ್ಟಣದ ನೊಳಂಬ ವೀರಶೈವ ಸಮುದಾಯ ಭವನದಲ್ಲಿ ನಡೆದ ಮದುವೆಗೆ ಇವರು ಆಗಮಿಸಿದ್ದರು. ಇನ್ನೇನು ಕಲ್ಯಾಣಮಂಟಪಕ್ಕೆ ಹೋಗಬೇಕು ಎಂದು ರಸ್ತೆ ದಾಟುವಾಗ ಲಾರಿ ಡಿಕ್ಕಿಯಾಗಿದೆ. ಪರಿಣಾಮ ವೀರನಗೌಡರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಸಾರ್ವಜನಿಕರು ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.