Tractor challenge | ಸವಾಲಿಗೆ ಸವಾಲು | ಶಿವಮೊಗ್ಗದಲ್ಲಿ ಟ್ರ್ಯಾಕ್ಟರ್‌ ಪಣಕ್ಕಿಟ್ಟ ಮತ್ತೊಬ್ಬ ರೈತ |

Tractor challenge | Challenge to Challenge | Another farmer risked his tractor in Shimoga Geeta Shivraj Kumar, Shimoga Elections, BY Raghavendra,

Tractor challenge |  ಸವಾಲಿಗೆ ಸವಾಲು | ಶಿವಮೊಗ್ಗದಲ್ಲಿ ಟ್ರ್ಯಾಕ್ಟರ್‌ ಪಣಕ್ಕಿಟ್ಟ ಮತ್ತೊಬ್ಬ ರೈತ |
Tractor challenge , Shimoga Geeta Shivraj Kumar, Shimoga Elections, BY Raghavendra,

SHIVAMOGGA | MALENADUTODAY NEWS | May 15, 2024  ಮಲೆನಾಡು ಟುಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಇದಕ್ಕೆ ಉತ್ತರ ಜೂನ್‌ ನಾಲ್ಕರಂದು ಸಿಗಲಿದೆ. ಇದರ ನಡುವೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಗೆಲ್ಲುವ ಅಭ್ಯರ್ಥಿಗಳ ನಡುವೆ ಟ್ರ್ಯಾಕ್ಟರ್‌ ಪಣಕ್ಕಿಡುವ ಚಾಲೆಂಜ್‌ ಮೇನಿಯಾ ಹೆಚ್ಚಾಗುತ್ತಿದೆ. 

ಮೊನ್ನೆ ಮೊನ್ನೆ ಕಲ್ಮನೆಯ ರವೀಂದ್ರ ಎಂಬವರು ವಿಡಿಯೋ ಹರಿಬಿಟ್ಟು ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ ಕುಮಾರ್‌ ಗೆಲ್ಲುತ್ತಾರೆ ನನ್ನ ಮಾತಿಗೆ ಸವಾಲಿದ್ದರೇ ಅವರ ವಿರುದ್ದ ಟ್ರ್ಯಾಕ್ಟರ್‌ ಪಣಕಿಟ್ಟು ಚಾಲೆಂಜ್‌ ಮಾಡಲು ನಾನು ಸಿದ್ಧ ಎಂದಿದ್ದರು. 

ಇದರ ಬೆನ್ನಲ್ಲೆ ಟ್ರ್ಯಾಕ್ಟರ್‌ ಚಾಲೆಂಜ್‌ (Tractor challenge) ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ, ಸವಾಲನ್ನ ಸ್ವೀಕರಿಸಿ ಹೊಸ ಟ್ರ್ಯಾಕ್ಟರ್‌ನ್ನೆ ಪಣಕ್ಕಿಡೋಣ ಎಂದಿದ್ದರು. 

ಇಷ್ಟೆಲ್ಲಾ ಬೆಳವಣಿಗೆ ಬಳಿಕ ಇದೀಗ ಶಿಕಾರಿಪುರದ ಇನ್ನೊಬ್ಬ ರೈತ ಬಿ ವೈ ರಾಘವೇಂದ್ರರವರ ಪರವಾಗಿ ಟ್ರ್ಯಾಕ್ಟರ್‌ ಚಾಲೆಂಜ್‌ ಹಾಕಿದ್ದಾರೆ. ಜಮೀನ್ದಾರ್‌ ಮಂಜುನಾಥ್‌ ಎಂಬವರು, ಶಿವಮೊಗ್ಗದಲ್ಲಿ ರಾಘವೇಂದ್ರರವರು ಗೆಲ್ಲುತ್ತಾರೆ. ಇದಕ್ಕಾಗಿ ಶಿಕಾರಿಪುರದ ಶ್ರೀಕ್ಷೇತ್ರ ಹುಚ್ಚರಾಯ ಸ್ವಾಮಿ ದೇವಾಸ್ಥಾನದ ಮುಂದೆ ಟ್ರ್ಯಾಕ್ಟರ್‌ ಕಿ ಕೊಟ್ಟು ಸವಾಲು ಹಾಕಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ.