ಬಿಎಸ್​ವೈ ವಿರುದ್ದ ಫೋಕ್ಸೋ ಕೇಸ್! ಯಡಿಯೂರಪ್ಪ , ಪರಮೇಶ್ವರ್, ಈಶ್ವರಪ್ಪ, ಮಧು ಬಂಗಾರಪ್ಪ, ಡಿಕೆ ಶಿವಕುಮಾರ್ ಹೇಳಿದ್ದೇನು?

POCSO case against BSY What did Yediyurappa, Parameshwara, Eshwarappa, Madhu Bangarappa and DK Shivakumar say?

ಬಿಎಸ್​ವೈ ವಿರುದ್ದ ಫೋಕ್ಸೋ ಕೇಸ್!  ಯಡಿಯೂರಪ್ಪ , ಪರಮೇಶ್ವರ್, ಈಶ್ವರಪ್ಪ, ಮಧು ಬಂಗಾರಪ್ಪ, ಡಿಕೆ ಶಿವಕುಮಾರ್ ಹೇಳಿದ್ದೇನು?
ediyurappa, Parameshwara, Eshwarappa, Madhu Bangarappa , DK Shivakumar,POCSO case against BSY

shivamogga Mar 15, 2024 : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ  ವಿರುದ್ಧ ಬೆಂಗಳೂರು ಸದಾಶಿವ ನಗರ ಪೊಲೀಸ್ ಸ್ಟೇಷನ್​ನಲ್ಲಿ ಫೋಕ್ಸೋ ಕೇಸ್ ದಾಖಲಾಗಿದೆ. ಈ ಸಂಬಂಧ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಯಾವ್ಯಾವ ನಾಯಕರು ಏನು ಹೇಳಿದರು ಎಂಬುದನ್ನ ನೋಡುವುದಾದರೆ, 

ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಕೆಎಸ್​ ಈಶ್ವರಪ್ಪ ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ಫೋಕ್ಸೋ ಕೇಸ್ ಬಂದಿರುವುದು ದುರಾದೃಷ್ಟ ಎಂದಿದ್ದಾರೆ. ಯಾರೋ ಮಾಡಿರುವ ಕುತಂತ್ರ, ಷಡ್ಯಂತ್ರ ರಾಜಕಾರಣ, ಅವರ ಜೊತೆಗೆ ಅನೇಕ ವರ್ಷಗಳಿಂದ ಇದ್ದೇನೆ. ಅಂತಹ ಕೆಲಸ ಮಾಡುವವರು ಬಿಎಸ್​​ವೈರಲ್ಲ. ಕಂಪ್ಲೆಂಟ್ ಕೊಟ್ಟವರು 53 ಜನರ ವಿರುದ್ಧ ಕಂಪ್ಲೆಂಟ್ ಮಾಡಿದ್ದಾರೆ ಎನ್ನಲಾಗಿದೆ. ಹಾಗಾದರೆ ಅಷ್ಟು ಮಂದಿಯವರ ಬಳಿ ಹೋಗಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಇದು ಷಡ್ಯಂತ್ರ. ಇದರಿಂದ ಬಿಎಸ್​ವೈ ಹೊರಬರುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ. 

ಈ ಬಗ್ಗೆ ಪ್ರಮುಖವಾಗಿ ಪ್ರತಿಕ್ರಿಯಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರವರು ಇದರಲ್ಲಿ ಯಾವುದೇ ರಾಜಕಾರಣದ ಕುತಂತ್ರ ಇರದು. ನಮಿಗಂತೂ ಇದರ ಬಗ್ಗೆ ಗೊತ್ತೆ ಇರಲಿಲ್ಲ. ಒಬ್ಬ ಹೆಣ್ಣು ಮಗಳು ಬಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕಂಪ್ಲೆಂಟ್​ ನ್ನು ಕಾನೂನು ಪ್ರಕಾರ, ಪೊಲೀಸರು ಪ್ರಕರಣ ರಿಜಿಸ್ಟರ್ ಮಾಡಿದ್ದಾರೆ. ಪ್ರಕರಣ ಸಂಬಂಧ ತನಿಖೆಯ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ಯಾರೋ ಬರೆದುಕೊಟ್ರು ಎಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದಿಲ್ಲ. ಪ್ರಾಥಮಿಕ ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ತನಿಖೆ ವೇಳೆ ಉದ್ದೇಶ ಅಥವಾ ದುರುದ್ದೇಶ ಅನ್ನುವುದು ಸಹ ಗೊತ್ತಾಗುತ್ತದೆ.ಕೆಲವರು ಅವರು ಮಾನಸಿಕ ಅಸ್ವಸ್ಥರು ಎಂದು ಹೇಳುತ್ತಿದ್ದಾರೆ. ತನಿಖೆಯ ನಂತರ ಎಲ್ಲವೂ ತಿಳಿದುಬರಲಿದೆ ಎಂದಿದ್ದಾರೆ. 

ಇದೇ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ. ಈ ವಿಚಾರವನ್ನು ಅನಗತ್ಯವಾಗಿ ರಾಜಕೀಯ ಷಡ್ಯಂತ್ರ ಅಂತಾ ನಾನು ಹೇಳುವುದಿಲ್ಲ. ಹೆಣ್ಣುಮಗಳೊಬ್ಬಳು ಕಂಪ್ಲೆಂಟ್ ಕೊಟ್ಟಿದ್ದಾರೆ ಅದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಹೆಣ್ಣುಮಗಳೊಬ್ಬಳು ಸಹಾಯ ಕೇಳಿಕೊಂಡು ಬಂದಿದ್ದರು. ಆನಂತರ ಅವರ ಮನವಿಗೆ ಸ್ಪಂದಿಸಿ ಪೊಲೀಸ್ ಕಮಿಷನರ್​ಗೆ ಫೋನ್ ಮಾಡಿಕೊಟ್ಟಿದ್ದೆ. ಆನಂತರ ನನ್ನ ಬಗ್ಗೆನೇ ಏನೇನೋ ಮಾತನಾಡಲು ಆರಂಭಿಸಿದ್ರು. ಹಾಗಾಗಿ ಇದ್ಯಾಕೋ ಆರೋಗ್ಯ ಮನುಷ್ಯನದ್ದು ಸರಿಯಿಲ್ಲ ಎಂದು ಗೊತ್ತಾಯ್ತು . ಅದರ ನಂತರವೇ ಪೊಲೀಸ್ ಕಮಿಷನರ್​ ಬಳಿ ಕಳುಹಿಸಿಕೊಟ್ಟೆ. ಆದರೆ ಇದೀಗ ಬೇರೆ ರೀತಿಯಲ್ಲಿ ಏನೋ ಆಗಿದೆ. ಕಾನೂನು ರೀತಿಯಲ್ಲಿ ಎದುರಿಸೋಣ ಎಂದಿದ್ದಾರೆ. ಅಲ್ಲದೆ ಒಬ್ಬರಿಗೆ ಉಪಕಾರ ಮಾಡಿದರೆ ಅಪಕಾರ ಮಾಡುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅವರಿಗೆ ಕಷ್ಟ ಇದೆ ಎಂದಿದ್ದಕ್ಕೆ ಸ್ವಲ್ಪ ಹಣವನ್ನು ಸಹ ಕೊಟ್ಟು ಕಳುಹಿಸಿದ್ದೇನೆ ಎಂದಿದ್ದಾರೆ. 

ಇದೇ ವಿಚಾರದಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್, ಪ್ರಕರಣ ಸೂಕ್ಷ್ಮ ವಿಚಾರವಾದ ಕಾರಣಕ್ಕೆ ಗೃಹಸಚಿವ ಪರಮೇಶ್ವರ್​ರವರೇ ಈ ಬಗ್ಗೆ ಮಾತನಾಡುತ್ತಾರೆ. ಪ್ರಕರಣದ ಬಗ್ಗೆ ವಿನಾಃ ಮಾತನಾಡುವ ಬದಲು ಸರ್ಕಾರದ ವಿಚಾರದಲ್ಲಿ ಗೃಹಸಚಿವರು ಈ ಬಗ್ಗೆ ಮಾತನಾಡುತ್ತಾರೆ. ಪ್ರತಿಯೊಬ್ಬರೂ ಇದರ ಬಗ್ಗೆ ರಿಯಾಕ್ಟ್ ಮಾಡುತ್ತಿದ್ದರೇ ಸರಿಯಾಗದು ಎಂದಿದ್ದಾರೆ 



ಇನ್ನೂ ಶಿವಮೊಗ್ಗದಲ್ಲಿ ಇದೇ ವಿಚಾರದ ಬಗ್ಗೆ ಮಾತನಾಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಪ್ರಕರಣದ ಸಂಬಂಧ ಕಾನೂನು ಇದೆ, ಈ ಬಗ್ಗೆ ನಾನು ಏನು ಮಾತಾನಾಡುವುದಿಲ್ಲ ಗೃಹ ಸಚಿವರು ಇದ್ದಾರೆ ಅವರು ನೋಡಿಕೊಳ್ತಾರೆ ಎಂದಷ್ಟೆ ಹೇಳಿದ್ದಾರೆ. ಇನ್ನೂ ಪ್ರಕರಣದ ತನಿಖೆಯ ಹೊಣೆಯನ್ನು  ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ.