ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಸ್ಪರ್ಧೆ ನಿಕ್ಕಿ! ಪುತ್ರನಿಂದ ಪ್ರಚಾರ ಆರಂಭ? ಬಿಎಸ್​ವೈ ವಿರುದ್ಧ ಮತ್ತೊಂದು ಮಾತಿನ ಬಾಣ !

shivamogga Mar 15, 2024 : KS Eshwarappa  contest from Shivamogga  ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಮತ್ತೆ ಗುಡುಗಿದ್ದಾರೆ. ಅಲ್ಲದೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ದಲ್ಲಿ ಚುನಾವಣೆಗೆ ನಿಲ್ಲೋದು ನಿಕ್ಕಿಯಾಗಿದೆ. ಸಂಜೆ ಬೆಂಬಲಿಗರ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಪಕ್ಷೇತರ ಚುನಾವಣೆ ಯಲ್ಲಿ ನಿಂತು ಗೆದ್ರು ಕೂಡ ಮೋದಿ ಅವರಿಗೆ ಬೆಂಬಲ ನೀಡುತ್ತೇನೆ, ಸಂಸದ ಬಿ.ವೈ.ರಾಘವೇಂದ್ರರವರು ಗೆದ್ದರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್​ ಬಲಕುಂದಿದೆ. ಪಕ್ಷದಲ್ಲಿನ ಆಂತರಿಕ ಅವ್ಯವಸ್ಥೆಯ ಕುರಿತಾಗಿ ನಿಷ್ಟಾವಂತರ ಪರವಾಗಿ ನಾನು ಹೋರಾಡುತ್ತೇನೆ. ಚುನಾವಣೆ ಸ್ಪರ್ಧೆಯ  ಸಂಬಂಧ ಸಂಜೆಯ ಸಭೆಯಲ್ಲಿ ತೀರ್ಮಾನ ಹೊರಬೀಳಲಿದೆ ಎಂದಿದ್ದಾರೆ. 

ಬಿಎಸ್​ ಯಡಿಯೂರಪ್ಪನವರ ವಿರುದ್ಧ ಮಾತಿನ ಸಂಘರ್ಷ ಮುಂದುವರಿಸಿದ ಕೆಎಸ್ ಈಶ್ವರಪ್ಪ ಕೆಲ ನಾಯಕರ ವಿರುದ್ಧ ಯಡಿಯೂರಪ್ಪ, ವಿಜಯೇಂದ್ರ ಷಡ್ಯಂತ್ರ ಮಾಡಿದ್ದಾರೆ. ಹಾಗಾಗಿ ನನ್ನ ಮಗ, ಸಿ.ಟಿ.ರವಿ, ಸದಾನಂದ ಗೌಡ, ಪ್ರತಾಪ ಸಿಂಹ ಗೆ ಟಿಕೆಟ್ ಕೈ ತಪ್ಪಿದೆ. ನಾವೆಲ್ಲರೂ ಹಿಂದುತ್ವದ ಪರವಾಗಿ ಹೋರಾಟ ಮಾಡಿದವರು. ನಮಗೆ ಅನ್ಯಾಯ ವಾಗಿದೆ ಎಂದಿದ್ದಾರೆ. 

ಅಲ್ಲದೆ  ಯಡಿಯೂರಪ್ಪ ರವರು ಮಾತು ಕೊಟ್ಟಿದ್ರು ಆ ಮಾತು ತಪ್ಪಿದ್ದಾರೆ. ನಮಗೆ ಮೋಸ ಮಾಡಿದ್ದಾರೆ. ಪಕ್ಷವನ್ನ ಉಳಿಸೋಕೆ ನಾನು, ಸಿ.ಟಿ.ರವಿ, ಯತ್ನಾಳ್, ಸದಾನಂದ ಗೌಡ, ಪ್ರತಾಪ ಸಿಂಹ ಪ್ರಯತ್ನ ಮಾಡುತ್ತೇವೆ ಎಂದಿರುವ ಈಶ್ವರಪ್ಪನವರು ರಾಜ್ಯದಲ್ಲಿ ಬಿಜೆಪಿ ಪಕ್ಷ ಒಂದು ಕುಟುಂಬದ ಕೈ ಸೇರಿಕೊಂಡಿದೆ. ಯಡಿಯೂರಪ್ಪ ಅವರು ನಮ್ಮವರು ನಮ್ಮ ನಾಯಕರು ಅದರಲ್ಲಿ ಯಾವ ಅನುಮಾನ ಇಲ್ಲ, ಆದರೆ ಅವರು ಏಕೆ ನನಗೆ ಅನ್ಯಾಯ ಮಾಡಿದ್ರು. ಕೊನೆ ಕ್ಷಣದವರೆಗೂ ನಿಮಗೆ ಟಿಕೆಟ್ ಎಂದಿದ್ದರು. ಈ ರೀತಿ ಸುಳ್ಳು ಆಶ್ವಾಸನೆ ಏಕೆ ಕೊಟ್ಟರು ಎಂದು ಪ್ರಶ್ನಿಸಿದ್ದಾರೆ. 

ರಾಜ್ಯದಲ್ಲಿ ಅಸಮಾಧಾನ ಎಲ್ಲಾ ಕಡೆಯಲ್ಲಿಯು ಇದೆ. ದೊಡ್ಡವರು ಅಸಮಾಧಾನ ಸರಿ ಮಾಡ್ತಾರೆ. 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಆದಾಗ್ಯು ಇಡಿ ರಾಜ್ಯದಲ್ಲಿ ಪಕ್ಷ ಕಟ್ಟಿದವರು ನೋವು ಅನುಭವಿಸುತ್ತಿದ್ದಾರೆ. ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ಇದೆ ಅಂತಿದ್ದಾರೆ. ವಿಜಯೇಂದ್ರ‌ ಅವರು ರಾಜ್ಯಾಧ್ಯಕ್ಷ ಆದ ಬಳಿಕ ಯಾರನ್ನು ಕೇಳದೇ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ರು. ಆ ಸಂದರ್ಭದಲ್ಲಿ ಪ್ರಶ್ನೆ ಮಾಡಿದಾಗ ಕೇಂದ್ರ ನಾಯಕರು ತರಾತುರಿ ಮಾಡಿದ್ರು ಎಂದು ಹೇಳಿದ್ದರು. ಇಂತಹ ಸಾವಿರ ಉದಾಹರಣೆಗಳಿವೆ ಎಂದು ಅಸಮಾಧಾನವನ್ನು ಈಶ್ವರಪ್ಪನವರು ಹೊರಹಾಕಿದ್ದಾರೆ. 

ಇನ್ನೂ  18 ರಂದು ಮೋದಿ ಬರುತ್ತಿದ್ದಾರೆ ಕಾರ್ಯಕ್ರಮಕ್ಕೆ ಹೋಗ್ತೀನೋ ಇಲ್ವೋ ಎನ್ನುವ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡ್ತೇನೆ ಎಂದಿರುವ ಈಶ್ವರಪ್ಪನವರು, ತಮ್ಮ ಪುತ್ರನನ್ನ ಎಂಎಲ್ ಸಿ ಮಾಡ್ತೀನಿ‌ ಅಂತಾರೆ. ಆದರೆ ಅದನ್ನು ನಂಬುವ ಸ್ಥಿತಿಯಲ್ಲಿ ನಾನಿಲ್ಲ . ಈ‌ ಹಿಂದೆ ಎಂಎಲ್ ಎ ಮಾಡ್ತೀನಿ ಅಂದ್ರು, ಎಂಪಿ ಮಾಡ್ತೀನಿ ಅಂದ್ರು ಈಗ ಎಂಎಲ್ ಸಿ ಅಂತಾರೆ ಯಾವುದನ್ನು ನಂಬಲ್ಲ ಎಂದು ಗುಡುಗಿದ್ದಾರೆ. 

ಇನ್ನೂ ಮೂಲಗಳಲ್ಲಿ ಸಿಕ್ಕ ಮಾಹಿತಿ ಪ್ರಕಾರ, ಪಕ್ಷೇತರ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪನವರು ನಿಲ್ಲುತ್ತಿದ್ದು, ಅವರ ಪರವಾಗಿ ಪುತ್ರ ಕೆಇ ಕಾಂತೇಶ್ ಪ್ರಚಾರ ಸಹ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. 

Leave a Comment