ಬಿಎಸ್​ ಯಡಿಯೂರಪ್ಪ, ಎಸ್​ ಬಂಗಾರಪ್ಪರವರ ಕಾರಿನ ಲಕ್ಕಿ ನಂಬರ್ ಮಕ್ಕಳ ಭವಿಷ್ಯ ಬರೆಯುತ್ತಾ? ಕಾರು ಪಾಲಿಟಿಕ್ಸ್ ಜೆಪಿ ಬರೆಯುತ್ತಾರೆ

Is the lucky number of BS Yediyurappa, S Bangarappa's car writing the future of children? Car Politics JP writes

ಬಿಎಸ್​ ಯಡಿಯೂರಪ್ಪ, ಎಸ್​ ಬಂಗಾರಪ್ಪರವರ  ಕಾರಿನ ಲಕ್ಕಿ ನಂಬರ್ ಮಕ್ಕಳ ಭವಿಷ್ಯ ಬರೆಯುತ್ತಾ? ಕಾರು ಪಾಲಿಟಿಕ್ಸ್ ಜೆಪಿ ಬರೆಯುತ್ತಾರೆ
BS Yediyurappa car, S Bangarappa car, loksaba election 2024

Shivamogga Mar 11, 2024  ಜಿಲ್ಲೆಯ ಇಬ್ಬರು ಮಾಜಿ ಸಿಎಂ ಗಳು ಬಳಸುತ್ತಿದ್ದ ಕಾರಿನ ಲಕ್ಕಿ ನಂಬರ್ ಅವರ ಮಕ್ಕಳುಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತಾ..ಏನಿದು ಕಾರಿನ ಲಕ್ಕಿ ನಂಬರ್ ಮರ್ಮಾ..ಜೆಪಿ ಬರೆಯತ್ತಾರೆ.

ರಾಜಕಾರಣಿಗಳು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಮೊರೆ ಹೋಗುವುದೇ ಜ್ಯೋತಿಷ್ಯಕ್ಕೆ, ಶತ್ರು ಭಾದೆ ಇರದಿರಲು ಸದಾ ಹೋಮ ಹವನ ಪೂಜೆ ಪುನಸ್ಕಾರ ಅಂತಲೇ ರಾಜಕಾರಣಿಗಳ ವೈಯಕ್ತಿಕ ದಿನಗಳು ಸಾಗಿಬಿಡುತ್ತೆ. ಅದರಲ್ಲೂ ತಮ್ಮ  ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ ಲಕ್ಕಿ ನಂಬರ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜವಾಗಿದೆ.

ಇದು ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಕಂಡುಬರುತ್ತದೆ.  ಶಿವಮೊಗ್ಗ ಜಿಲ್ಲೆಯ ಇಬ್ಬರು ಮಾಜಿ ಸಿಎಂ ಗಳಾದ ಸಾರೆಕೊಪ್ಪ ಬಂಗಾರಪ್ಪ ಮತ್ತು ಬಿ.ಎಸ್.ಯಡಿಯೂರಪ್ಪ ಇಬ್ಬರು ತಮ್ಮ ಕಾರಿಗೆ ಲಕ್ಕಿ ನಂಬರ್ ಗಳನ್ನು ಪರ್ಮನೆಂಟ್ ಆಗಿ ಬಳಸುತ್ತಿದ್ದರು. ಕಳೆದ ವಿಧಾನಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ತಂದೆ ಬಳಿಸಿದ ಅಂಬಾಸಿಡರ್ ಕಾರನ್ನು ಬಿ.ವೈ ವಿಜಯೇಂದ್ರ ಬಳಸಿದ್ದರು. ಕಾರನ್ನು ಏರಿ ರಾಜಠೀವಿಯಲ್ಲಿ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು

ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ತಮ್ಮ ಕಾರಿಗೆ ಲಕ್ಕಿ ನಂಬರ್ ಹಾಕಿಸಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಹೌದು ತಂದೆ ಎಸ್ ಬಂಗಾರಪ್ಪನವರು ತಮ್ಮ ಕಾರಿಗೆ ಪರ್ಮನೆಂಟ್ ಆಗಿ ಹಾಕಿಸಿಕೊಂಡಿದ್ದ 1179 ನಂಬರ್ ನ್ನು ತಮ್ಮ ಕಾರಿಗೆ ಹಾಕಿಕೊಂಡಿದ್ದಾರೆ. ಎಸ್ ಬಂಗಾರಪ್ಪನವರು ತಮ್ಮ ರಾಜಕೀಯ ಭವಿಷ್ಯದ ನಂಬಿಕೆ ಭಾಗವಾಗಿ 1179 ಅನ್ನು ಲಕ್ಕಿ ನಂಬರ್ ಎಂದೇ ಭಾವಿಸಿದ್ದರು. 

ಅವರು ತಮ್ಮ ಟಾಟಾ ಸಫಾರಿ ವಾಹನಕ್ಕೆ 1179 ನಂಬರ್ ಹಾಕಿಸಿಕೊಂಡಿದ್ದರು. ಈ ಲಕ್ಕಿ ನಂಬರ್ ಬಂಗಾರಪ್ಪನವರು ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕವಾಗುವಂತೆ ಮಾಡಿತ್ತು. ಪ್ರವಾಸಕ್ಕೆ ಮತ್ತು ಪ್ರಚಾರಕ್ಕೆ ಸಫಾರಿ ಕಾರನ್ನೇ ಬಳಸುತ್ತಿದ್ದರು. ಶಾಸಕರಿಂದ ಹಿಡಿದು ಸಿಎಂ ಆಗುವವರೆಗೆ ಕೈ ಹಿಡಿದಿತ್ತು. 

ಈಗ ಪುತ್ರಿ ಗೀತಾ ಶಿವರಾಜ್ ಕುಮಾರ್ ಗೆ ಕಾಂಗ್ರೇಸ್ ನಿಂದ ಟಿಕೇಟ್ ಘೋಷಣೆ ಯಾಗುತ್ತಿದ್ದಂತೆ ತಮ್ಮ ನೂತನ ಕಾರಿಗೆ 1179 ನಂಬರ್ ಹಾಕಿಸಿಕೊಂಡಿದ್ದಾರೆ. ಈ ನಂಬರ್ ಗೀತಾ ರವರಿಗೆ ಕೈ ಹಿಡಿದರೂ ಅಚ್ಚರಿಯಿಲ್ಲ

ಈಶ್ವರಪ್ಪನವರ ಪುತ್ರ ಕೆ.ಇ ಕಾಂತೇಶ್ ಗೆ ಹಾವೇರಿ ಗದಗ ಲೋಕಸಭಾ ಕ್ಷೇತ್ರಕ್ಕೆ ಟಿಕೇಟ್ ಸಿಗದೆ ಹೋದ್ರೆ, ಶಿವಮೊಗ್ಗ ಬಿಜೆಪಿ ರಾಜಕಾರಣದ ಲೆಕ್ಕಚಾರ ಏನು ಬೇಕಾದ್ರೂ ಆಗಬಹುದು. ಹಾಲಿ ಸಂಸದ ಬಿ.ವೈ ರಾಘವೇಂದ್ರಗೆ ಸುಗಮವಾಗಿದ್ದ ಗೆಲುವಿನ ಹಾದಿಗೆ ಬ್ರೇಕ್ ಹಾಕಬಹುದು ಎನ್ನಲಾಗುತ್ತಿದೆ. 

ಸಧ್ಯ ಬಿಜೆಪಿಯಲ್ಲಿನ ಹಾಟ್ ಅಂಡ್ ಹೀಟ್ ಕ್ಲೈಮೇಟ್ ಗೀತಾ ರವರ ಪಾಲಿಗೆ ಪ್ಲಸ್ ಎಂದೇ ಹೇಳಲಾಗುತ್ತಿದೆ. ಬಂಗಾರಪ್ಪನವರ ಆ ಲಕ್ಕಿ ನಂಬರ್ ಎದುರಾಳಿ ಸ್ಪರ್ದಾಳುಗಳ ರಾಜಕೀಯ ವಲಯದಲ್ಲಿ ಸಂಚಲವನ್ನ ಸೃಷ್ಟಿಸುತ್ತಿತ್ತು. 

ಅದೇ ರೀತಿ ಗೀತಾ ಶಿವರಾಜ್ ಕುಮಾರ್ ಕೂಡ ತಮ್ಮ ತಂದೆಯ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಬಂಗಾರಪ್ಪನವರಿಗೆ ಹಾಗು ಯಡಿಯೂರಪ್ಪನವರಿಗೆ ರಾಜಕೀಯ ಗೆಲುವನ್ನು ತಂದ ಕೊಟ್ಟ ಕಾರುಗಳನ್ನು ಅವರ ಮಕ್ಕಳು ಬಳಸುತ್ತಿರುವುದು ಅಚ್ಚರಿಯಾಗಿದೆ. ಯಡಿಯೂರಪ್ಪ ಕಾರಿನ ನಂಬರ್ ಸಿಕೆಆರ್ 45

ಇದು ಯಡಿಯೂರಪ್ಪನವರಿಗೆ ಲಕ್ಕಿ ನಂಬರ್. ಯಡಿಯೂರಪ್ಪನವರು ರಾಜ್ಯಧ್ಯಕ್ಷರಾದ ನಂತರ ಈ ಕಾರನ್ನು ಖರೀದಿಸಿದ್ದರು.. 

ಪ್ರತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಮನೆಯಿಂದ ಹೊರಡುವಾಗ ಇದೇ ಅಂಬಾಸಿಡರ್ ಕಾರಿನಲ್ಲಿ ಬಿಪಾರಂ ನೊಂದಿಗೆ ಚುನಾವಣಾ ಕಛೇರಿಗೆ ಬರುತ್ತಿದ್ದರು. ಇದೇ ಸಂಪ್ರದಾಯಕ್ಕೆ ಪುತ್ರ ಬಿ.ವೈ ವಿಜಯೇಂದ್ರ ನಾಂದಿ ಹಾಡಿದ್ದರು.  ತಂದೆಯಂತೆ ನಾನು ಕೂಡ ರಾಜಕೀಯ ಬದುಕಿನಲ್ಲಿ ಯಶಸ್ಸು ಕಾಣಬೇಕು ಎಂಬ ಮಹದಾಸೆ ವಿಜಯೇಂದ್ರ ಗೆ ಇತ್ತು. ಮತ್ತ ಅದರಲ್ಲಿ ಯಶಸ್ಸು ಸಾಧಿಸಿದ್ದರು. ಇದೀಗ ಗೀತಾ ಶಿವರಾಜ್ ಕುಮಾರ್ ಗೆ ಲಕ್ಕಿ ನಂಬರ್ ಕೈಹಿಡಿಯುತ್ತಾ ನೋಡಬೇಕಿದೆ.