ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರ ಫೋಟೋ ದುರ್ಬಳಕೆ ಆರೋಪ! ದಾಖಲಾಯ್ತು ದೂರು

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 7, 2024  | ವಿಜಯೇಂದ್ರ ಫೋಟೋದುರ್ಬಳಕೆ ಆರೋಪ ಸಂಬಂಧ ಬೆಂಗಳೂರು ಪೊಲೀಸ್ ಸ್ಟೇಷನ್ ಒಂದರಲ್ಲಿ ದೂರು ದಾಖಲಾಗಿದೆ. ಇಲ್ಲಿನ ಹೈಗ್ರೌಂಡ್ಸ್​ ಪೊಲೀಸ್ ಸ್ಟೇಷನ್​ನಲ್ಲಿ ಈ ಕಂಪ್ಲೆಂಟ್ ದಾಖಲಾಗಿದೆ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ /BJP state president B.Y. Vijayendra

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪಕ್ಷದ ಹಿರಿಯ ನಾಯಕರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಅವಹೇಳನಕಾರಿ ಹಾಗೂ ಸುಳ್ಳು ಸುದ್ದಿ ಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ ಈ ದೂರು ನೀಡಲಾಗಿದೆ. 

READ : ಸರ್ಕಾರದ ಸಹಾಯಧನದೊಂದಿಗೆ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆ ಮಾಡಿ ! ಇಲ್ಲಿದೆ ವಿವರ

ಫೇಸ್‌ಬುಕ್‌ಖಾತೆ ನಿರ್ವಹಣೆಕಾರರ ವಿರುದ್ಧ ಹೈಗೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರುದಾಖಲಾಗಿದೆ.ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ, ವಕೀಲ ಯೋಗೇಂದ್ರ ಗೌಡರವರು ದೂರನ್ನ ಆಧರಿಸಿ ತನಿಖೆ ಸಹ ಆರಂಭವಾಗಿದೆ. 

ಇನ್ನೂ ದೂರಿನಲ್ಲಿ  ಕಾಂಗ್ರೆಸ್‌ನ ಫೇಸ್‌ಬುಕ್‌ ಪೇಜ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಹಿರಿಯ ನಾಯಕರಾದ ಈಶ್ವರಪ್ಪ, ಸಿ.ಟಿ.ರವಿ, ಸುನೀಲ್ ಕುಮಾರ್, ಪ್ರತಾಪ್ ಸಿಂಹ ಅವರ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಅವಹೇಳನಕಾರಿ ಸುದ್ದಿ ಪ್ರಕಟಿಸಲಾಗಿದೆ ಎಂದು ಆರೋಪಿಸಲಾಗಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor