ಸರ್ಕಾರದ ಸಹಾಯಧನದೊಂದಿಗೆ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆ ಮಾಡಿ ! ಇಲ್ಲಿದೆ ವಿವರ

Karnataka Bharat Gaurav Dakshina Yatra with government subsidy! Here's the details

ಸರ್ಕಾರದ ಸಹಾಯಧನದೊಂದಿಗೆ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆ ಮಾಡಿ ! ಇಲ್ಲಿದೆ ವಿವರ
Karnataka Bharat Gaurav Dakshina Yatra with government subsidy! Here's the details

 

SHIVAMOGGA  |  Jan 7, 2024  | ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ಪ್ರವಾಸಿ ಯೋಜನೆ ಆರಂಭವಾಗಿದೆ. ಧಾರ್ಮಿಕ ದತ್ತಿ ಇಲಾಖೆಯಡಿ ಈ ಪ್ರವಾಸ ನಡೆಯಲಿದೆ.   'ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆ' ಹೆಸರಿನ ಯಾತ್ರೆ ಇದೇ  ಜನವರಿ 18ರಿಂದ ಆರಂಭವಾಗಲಿದೆ. 

 ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆ

6 ದಿನಗಳ ಯಾತ್ರೆಯಲ್ಲಿ ರಾಮೇಶ್ವರ, ಮದುರೈ, ಕನ್ಯಾಕುಮಾರಿ, ತಿರುವನಂತಪುರ ಕ್ಷೇತ್ರಗಳ ದರ್ಶನಕ್ಕೆ ಸರ್ಕಾರದಿಂದಲೇ ವ್ಯವಸ್ಥೆ ಮಾಡಲಾಗಿದೆ. ಮೊದಲ ಯಾತ್ರೆಯಲ್ಲಿ  ವಿಶೇಷ ರೈಲು  18/1/2024 ರಂದು ಹೊರಡಲಿದೆ   23/1/2024 ಹಿಂದಿರುಗಲಿದೆ.  ಇನ್ನೂ 30/1/2024 ಹೊರಡುವ ವಿಶೇಷ ರೈಲು 4/2/2024 ರಂದು ವಾಪಸ್ ಆಗಲಿದೆ. 

ರೈಲು ಹತ್ತುವ ಮತ್ತು ಇಳಿಯುವ ನಿಲ್ದಾಣಗಳು 

ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರದಲ್ಲಿ ಹತ್ತಬಹುದು . ಪ್ರತಿ ಯಾತ್ರಿಗೆ ಒಟ್ಟು 15 ಸಾವಿರ ರೂಪಾಯಿ ಖರ್ಚಾಗಲಿದೆ.  ಈ ಪೈಕಿ  ರಾಜ್ಯ ಸರ್ಕಾರವು 5 ಸಾವಿರ ರೂ. ಸಹಾಯಧನ ನೀಡಲಿದೆ. ಉಳಿದ 10 ಸಾವಿರ ರೂಪಾಯಿ ಯಾತ್ರಿಯೇ ಭರಿಸಬೇಕಿದೆ ಎಂದು ತಿಳಿಸಲಾಗಿದೆ 

ಆಸಕ್ತರು ಮುಂಗಡ ಟಿಕೆಟ್ ಕಾಯ್ದಿರಿಸಲು ಸಂಪರ್ಕಿಸಿ:8595931291,8595931292,8595931294, ಅಥವಾ ಸರ್ಕಾರ ನೀಡಿರುವ ಈ ಪೇಜ್​ನಲ್ಲಿರುವ ಸ್ಕ್ಯಾನ್​ ಕೋಡ್​ನ್ನ ಸ್ಕ್ಯಾನ್​ ಮಾಡಿ 

ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆ

ಕನ್ಯಾಕುಮಾರಿ ಶ್ರೀ ಭಗವತಿ ದೇವಾಲಯ, ಮಧುದೆ ಶ್ರೀ ಮೀನಾಕ್ಷಿ ದೇವಾಲಯ ಮತ್ತು ತಿರುವನಂತಪುರಂ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನಮಾಡಬಹುದಾಗಿದೆ