ಕಪ್ಪೆ ಜೊತೆಗೆ ಮೂರು ಅಡಿ ಉದ್ದದ ಪ್ಲಾಸ್ಟಿಕ್‌ ನುಂಗಿದ ಹಾವು | ಮುಂದೆನಾಯ್ತು ನೀವೇ ನೋಡಿ |

The snake, which was struggling after consuming plastic, was rescued at Basaveshwara Circle in Bhadravathi taluk of Shivamogga district.

ಕಪ್ಪೆ ಜೊತೆಗೆ ಮೂರು ಅಡಿ ಉದ್ದದ ಪ್ಲಾಸ್ಟಿಕ್‌ ನುಂಗಿದ ಹಾವು | ಮುಂದೆನಾಯ್ತು ನೀವೇ ನೋಡಿ |
Basaveshwara Circle , Bhadravathi taluk ,Shivamogga district. , snake,rescued

SHIVAMOGGA | MALENADUTODAY NEWS | May 17, 2024  ಮಲೆನಾಡು ಟುಡೆ 

ಮನಸ್ಸೋ ಇಚ್ಚೆ ಸಿಕ್ಕಿದ್ದಕ್ಕೆಲ್ಲಾ ಪ್ಲಾಸ್ಟಿಕ್‌ ಬಳಸುವ ನಾವು ಅದರಿಂದ ಎಷ್ಟು ಅಪಾಯ ಆಗ್ತಿದೆ ಎನ್ನುವುದನ್ನ ಯೋಚಿಸುವುದುಕ್ಕೂ ಹೋಗುವುದಿಲ್ಲ. ಆದರೆ ಅಂತಹ ಪ್ಲಾಸ್ಟಿಕ್‌ನಿಂದ ಅಪಾಯಕಾರಿ ಸ್ಥಿತಿ ನಮಗೆ ಎದುರಾದರೇ ಸನ್ನಿವೇಶ ಹೇಗಿರಬಹುದು ಎಂಬುದಕ್ಕೆ ಮೂಕ ಪ್ರಾಣಿಯೊಂದು ಪ್ಲಾಸ್ಟಿಕ್‌ ಡೆಂಜರ್‌ನ ಡೆಮೋ ತೋರಿಸಿದೆ. 

ಇವತ್ತು .ಭದ್ರಾವತಿಯ ಬಸವೇಶ್ವರ ಸರ್ಕಲ್‌ನಲ್ಲಿ  ಹಾವೊಂದು ಲಾರಿಯಡಿಯಲ್ಲಿ ಉರುಳಾಡುತ್ತಾ ಒದ್ದಾಡುತ್ತಿತ್ತು. ಅದನ್ನ ನೋಡಿದವರಿಗೆ ಇದೇನೋ ನುಂಗಿ ಒದ್ದಾಡುತ್ತಿದೆ ಎಂಬುದು ಗೊತ್ತಾಗಿತ್ತು. ಹಾಗಾಗಿ ಹಾವಿನ ಸಂರಕ್ಷಕ ಪ್ರಹ್ಲಾದ್‌ ರಾವ್‌ರವರಿಗೆ ಸ್ಥಳೀಯರು ಕರೆ ಮಾಡಿದ್ದಾರೆ. ವಿಷಯದ ವಿವರ ಪಡೆದು ಸ್ಥಳಕ್ಕೆ ಬಂದ ಅವರು, ಸುರಕ್ಷಿತವಾಗಿ ಹಾವನ್ನ ಹಿಡಿದು, ಅದರ ಬಾಯಿಯಿಂದ ಹೊರಬರದೇ ಸಿಲುಕಿಕೊಂಡಿದ್ದ ಪ್ಲಾಸ್ಟಿಕ್‌ನ್ನ ಎಳೆದು ತೆಗೆಯಲು ಆರಂಭಿಸಿದ್ದಾರೆ. ಸುಮಾರು ಮೂರು ಅಡಿಯಷ್ಟು ಉದ್ದದ ಪ್ಲಾಸ್ಟಿಕ್‌ನನ್ನ ಪ್ರಹ್ಲಾದ್‌ ರಾವ್‌ ಎಳೆದು ತೆಗೆದಿದ್ದಾರೆ. ಪ್ಲಾಸ್ಟಿಕ್‌ ತೆಗೆಯುವಾಗ ಹಾವು ಇನ್ನಷ್ಟು ನರಳಾಡಿತ್ತಾದರೂ, ಪ್ಲಾಸ್ಟಿಕ್‌ ಅದರ ಹೊಟ್ಟೆಯಲ್ಲಿ ಇದ್ದಿದ್ದರೇ ಅದರ ಜೀವಕ್ಕೆ ಅಪಾಯವಿತ್ತು. 

ಇಷ್ಟಕ್ಕೂ ಏನಾಗಿತ್ತು

ತುಸು ಮಳೆಯಾಗುತ್ತಿದೆ. ಹೀಗಾಗಿ ಕಪ್ಪೆಗಳು ಹೊರಕ್ಕೆ ಬಂದು ಓಡಾಡುತ್ತಿವೆ. ಇದರ ನಡುವೆ ಕಪ್ಪೆ ತಿನ್ನಲು ಕರೆಗೊಡ್ಡು ಹಾವೊಂದು ಮುಂದಾಗಿದೆ. ಶಿಕಾರಿಯೇನೋ ಆಯ್ತು. ಆದರೆ ಕಪ್ಪೆಯ ಜೊತೆಗೆ ಸುತ್ತಿಕೊಂಡಿದ್ದ ಪ್ಲಾಸ್ಟಿಕ್‌ನ್ನ ಸಹ ಹಾವು ನುಂಗಿದೆ. ಅದಾದ ಮೇಲೆ ಹಾವಿಗೆ ನರಳಾಟ ಆರಂಭವಾಗಿ ಅದು ಲಾರಿಯಡಿಯಲ್ಲಿ ಲೇರಿಕೊಂಡಿತ್ತು. 

ಹಾವು ಕಪ್ಪೆ ಪ್ಲಾಸ್ಚಿಕ್ ನುಂಗಿದ್ದನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು ಉರುಗ ತಜ್ಞ ಪ್ರಹ್ಲಾದ್ ರಾವ್ ರವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪ್ರಹ್ಲಾದ್ ಹಾವಿನ ಹಾವಿನ ಹೆಲ್ತ್ ಕಂಡಿಷನ್ ನೋಡಿಕೊಂಡು ಬಾಯಗಲಿಸಿ ನುಂಗಿದ್ದ ಪ್ಲಾಸ್ಟಿಕ್ ನ್ನು ದಾರದಂತೆ ಎಳೆದು ಹೊರ ಹಾಕಿದರು ಆಳವಾಗಿ ಪ್ಲಾಸ್ಟಿಕ್ ನುಂಗಿದ್ದರಿಂದ ಅದನ್ನು ಹೊರ ತೆಗೆಯಲು ತುಸು ಪ್ರಾಯಾಸ ಪಡಬೇಕಾಯಿತು.