ತೀರ್ಥಹಳ್ಳಿ | ಸೀದಾ ಬಂದು ಅಂಗಡಿ ಜಗಲಿಯಲ್ಲಿ ಉರುಳಿ ಪಲ್ಟಿಯಾದ ಕಾರು |

Tirthahalli | The car came straight and overturned in Agandi Jagali Tirthahalli Local News, Malenadu News, Malnad News, Shimoga Report, Wagon R Car

ತೀರ್ಥಹಳ್ಳಿ | ಸೀದಾ ಬಂದು ಅಂಗಡಿ ಜಗಲಿಯಲ್ಲಿ ಉರುಳಿ ಪಲ್ಟಿಯಾದ ಕಾರು |
Tirthahalli Local News, Malenadu News, Malnad News, Shimoga Report, Wagon R Car

SHIVAMOGGA | MALENADUTODAY NEWS | May 8, 2024  

 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ನಿನ್ನೆ ದಿನ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಅಂಗಡಿಯ ಜಗುಲಿಗೆ ಉರುಳಿ ಅಪಘಾತಕ್ಕೀಡಾಗಿದೆ. 

ಆಗುಂಬೆ ರಸ್ತೆಯಿಂದ ಬಂದ ವ್ಯಾಗನರ್‌ ಕಾರೊಂದು ತೀರ್ಥಹಳ್ಳಿ ಛತ್ರಕೇರಿಗೆ ಹೋಗುವ ಟರ್ನಿಂಗ್‌ ನಲ್ಲಿ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು, ಸೀದಾ ತಗ್ಗಿನಲ್ಲಿದ್ದ ಅಂಗಡಿ ಮುಂದಿನ ಪ್ಯಾಸೇಜ್‌ ಜಾಗದಲ್ಲಿ ಬಿದ್ದಿದೆ. ‌

ಅದೃಷ್ಟಕ್ಕೆ ಯಾರಿಗೂ ಏನೂ ಆಗಿಲ್ಲ. ಡ್ರೈವರ್‌ ಸಹ ಸೇಫ್‌ ಆಗಿದ್ದಾರೆ. ಘಟನೆಯಲ್ಲಿ ಕಾರು ಮಾತ್ರ ಪೂರ್ತಿ ಜಖಂ ಆಗಿದೆ. ಬಿದ್ದ ರಭಸಕ್ಕೆ ಕಾರು ತಲೆಕೆಳಕಾಗಿ ನಿಂತಿದೆ. 

ಇಲ್ಲಿನ ಕರ್ನಾಟಕ ಬ್ಯಾಂಕ್‌ ಕಟ್ಟಡದ ಬಳಿಯಲ್ಲಿ ಘಟನೆ ನಡೆದಿದ್ದು, ಹೇಗಾಯ್ತು ಇದೆಲ್ಲಾ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯು ಡ್ರೈವರ್‌ ಕಾರಣ ಅಂತಿದ್ದಾರೆ ಸ್ಥಳೀಯರು