ಆಷಾಢ ಅಮಾವಾಸ್ಯೆ! ಸಿಗಂದೂರು, ಹಣಗೆರೆ ಕಟ್ಟೆ ಫುಲ್​ ರಶ್​! ಬೆಟ್ಟದಲ್ಲಿಯು ಜನರ ಜಾತ್ರೆ

Ashadha Amavasya! cigandur full rush! A people's fair on the hill of Male Mahadeshwara

ಆಷಾಢ ಅಮಾವಾಸ್ಯೆ! ಸಿಗಂದೂರು, ಹಣಗೆರೆ ಕಟ್ಟೆ ಫುಲ್​ ರಶ್​! ಬೆಟ್ಟದಲ್ಲಿಯು ಜನರ ಜಾತ್ರೆ

KARNATAKA NEWS/ ONLINE / Malenadu today/ Jun 19, 2023 SHIVAMOGGA NEWS

ನಿನ್ನೆ ಆಷಾಢದ ಮೊದಲ ಅಮಾವಾಸ್ಯೆ ಹಾಗೂ ಭಾನುವಾರ, ಮಣ್ಣೇತ್ತಿನ ಅಮಾವಾಸ್ಯೆಯೆ ಎಂದು ಸಹ ಕರೆಯುತ್ತಾರೆ. ಈ ಹಿನ್ನೆಲೆ ಶಕ್ತಿ ಕೇಂದ್ರಗಳು ನಿನ್ನೆ ಭರ್ತಿಯಾಗಿದ್ದವು. ಅದರಲ್ಲಿಯು ಸರ್ಕಾರದ ಉಚಿತ ಟಿಕೆಟ್ನಿಂದಾಗಿ ಧರ್ಮಸ್ಥಳವೂ ಸೇರಿದಂತೆ ಧಾರ್ಮಿಕಕೇಂದ್ರಗಳಲ್ಲಿ ಕಾಲಿಡಲು ಸಾಧ್ಯವಿರದಷ್ಟು ರಶ್ ಆಗಿತ್ತು. 

ಸಿಗಂದೂರಿಗೆ ಹರಿದು ಬಂದ ಭಕ್ತರು

ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಸಿಗಂದೂರ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಇನ್ನೂ ದೇವಿ ದರ್ಶನಕ್ಕೆ ಭಕ್ತರ ದೊಂಡ ದಂಡೆ ಹರಿದುಬಂದಿತ್ತು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರು ಆಗಮಿಸಿದ್ದರು. ಇನ್ನೂ ನೀರು ಕಡಿಮೆಯಿರುವುದರಿಂದ ಲಾಂಚ್​ನಲ್ಲಿ ಜನರನ್ನಷ್ಟೆ ಕರೆದೊಯ್ಯಲಾಗುತ್ತಿದೆ. ಹೀಗಾಗಿ ವಾಹನಗಳ ವ್ಯವಸ್ಥೆ ಮಾಡಿಕೊಂಡ ಭಕ್ತರು ನಡೆಯುವುದು ಅನಿವಾರ್ಯವಾಯಿತು. 

 

ಹಣಗರೆ ಕಟ್ಟೆಯಲ್ಲಿ ಫುಲ್ ರಶ್​

ಇನ್ನೂ  ಹಣಗೆರೆ ಕಟ್ಟೆ  ಭೂತಾರಾಯ ಚೌಡೇಶ್ವರಿ ಹಾಗೂ ಹಜರತ್ ಸೈಯದ್ ಸಾದತ್ ದರ್ಗಾದಲ್ಲಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಜನರ ನೂಕುನುಗ್ಗಲು ಉಂಟಾಗಿತ್ತು. ಬರೋಬ್ಬರಿ 50 ಸಾವಿರಕ್ಕಿಂತಲೂ ಹೆಚ್ಚು ಮಂದಿ ನಿನ್ನೆ ದೇವಾಲಯಕ್ಕೆ ಭೇಟಿಕೊಟ್ಟಿದ್ದರು. ಮೇಲಾಗಿ ಸ್ಥಳದಲ್ಲಿ ಯಾವುದೇ ವ್ಯವಸ್ಥೆಗಳಿಲ್ಲದೇ ಭಕ್ತರು ಪರದಾಡಬೇಕಾಯ್ತು. 



 

ಮಾದಪ್ಪನ ಸನ್ನಿಧಿಯಲ್ಲಿಯು ಭಕ್ತ ಸಾಗರ 

ಚಾಮರಾಜನಗರದ ಪವಿತ್ರ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಎಂದಿಗಿಂತಲೂ ಐದಾರು ಪಟ್ಟು ಹೆಚ್ಚು ಮಂದಿ ಆಗಮಿಸಿದ್ದರು.  ಮಲೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ 2 ಲಕ್ಷ ಭಕ್ತರು ಭೇಟಿಕೊಟ್ಟಿದ್ದಾರೆ. ಜನರ ರಶ್​ ನೋಡಿ ದೇವಾಲಯದ ಸಿಬ್ಬಂದಿಗಳು ಪ್ರಯಾಸ ಪಡೆಬೇಕಾಗಿ ಬಂದಿತ್ತು.