BREAKING NEWS | ಮನೆಯಿಂದ ಕರೆಯಿಸಿ, ರೌಡಿಶೀಟರ್‌ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

A rowdy sheeter named Karthik alias Katte Karthik was assaulted with deadly weapons near the MRS Circle in Shivamogga. T

BREAKING NEWS  | ಮನೆಯಿಂದ ಕರೆಯಿಸಿ, ರೌಡಿಶೀಟರ್‌ ಮೇಲೆ ಮಾರಕಾಸ್ತ್ರದಿಂದ ಹಲ್ಲೆ
Karthik alias Katte Karthik , MRS Circle in Shivamogga

SHIVAMOGGA | MALENADUTODAY NEWS | Jun 23, 2024  ಮಲೆನಾಡು ಟುಡೆ

ಶಿವಮೊಗ್ಗದ ಎಂಆರ್‌ಎಸ್‌ ಸರ್ಕಲ್‌ ಸಮೀಪ ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಕಾರ್ತಿಕ್‌ ಅಲಿಯಾಸ್‌ ಕತ್ತೆ ಕಾರ್ತಿಕ್‌ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ನಿನ್ನೆ ಈತನನ್ನ ಮನೆಯಿಂದ ಕರೆಯಿಸಿಕೊಂಡು ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಹೊಸಮನೆ ನಿವಾಸಿಯಾಗಿರುವ ಕಾರ್ತಿಕ್‌ಗೆ ನಿನ್ನೆ ರಾತ್ರಿ ಕರೆ ಮಾಡಿದ ಕೆಲವರು ಬರುವಂತೆ ತಿಳಿಸಿದ್ದಾರೆ. ಆ ಬಳಿಕ ಈತನ್ನ ಕರೆದುಕೊಂಡು ಹೋದ ಕೆಲವರು ವಿದ್ಯಾನಗರದ ಎಂಆರ್‌ಎಸ್‌ ಬಳಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಕಾರ್ತಿಕ್‌ ಪುನಃ ತನ್ನ ಮನೆಗೆ ಹೋಗಿದ್ದಾನೆ. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದುಕೊಂಡು ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ. 

ಹಲ್ಲೆಗೆ ಕಾರಣ ಸ್ಪಷ್ಟವಾಗಿಲ್ಲ, ಕಾರ್ತಿಕ್‌ ಕೆಲವರ ಹೆಸರುಗಳನ್ನ ಹೇಳಿದ್ದು, ಅದರಂತೆ ಪ್ರಕರಣ ದಾಖಲಾಗಿದೆ. ಕೋಟೆ ಪೊಲೀಸ್‌ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.