ನಿಮ್ಮ ಹತ್ತಿರ ಬೈಕ್‌ ಇದೆಯಾ? ಮನೆ ಮುಂದೆ ಬೈಕ್‌ ನಿಲ್ಲಿಸ್ತೀರಾ? ನಿಮ್ಮನ್ನೂ ಕಾಡಬಹುದು ಈ ಟೆನ್ಶನ್‌! ಏನ್‌ ಗೊತ್ತಾ?

Do you have a bike? Do you park your bike in front of your house? This tension may bother you too! Do you know what? bike theft

ನಿಮ್ಮ ಹತ್ತಿರ ಬೈಕ್‌ ಇದೆಯಾ? ಮನೆ ಮುಂದೆ ಬೈಕ್‌ ನಿಲ್ಲಿಸ್ತೀರಾ? ನಿಮ್ಮನ್ನೂ ಕಾಡಬಹುದು ಈ ಟೆನ್ಶನ್‌! ಏನ್‌ ಗೊತ್ತಾ?
bike theft

Shivamogga  Apr 16, 2024  ಪೊಲೀಸನೆಂದು ಮಿತ್ರನಲ್ಲ ಎಂದುಕೊಳ್ಳುವವರಿಗೆ ಈ ಸ್ಟೋರಿಯೊಂದನ್ನ ಹೇಳಬೇಕಾಗಿದೆ. ನಿನ್ನೆ ದಿನ ಬೆಳಗ್ಗೆ ಹಳೆ ಶಿವಮೊಗ್ಗದ ಏರಿಯಾವೊಂದರಲ್ಲಿ ಹೊಂಡಾ ಬೈಕ್‌ ಕಳ್ಳತನವಾಗಿತ್ತು. ಬೆಳಗ್ಗೆ ಬೆಳಗ್ಗೆ ಬಾಗಿಲು ತೆಗೆದು ಬೆಳಕಿನ ದೊರೆಗೊಂದು ಕೈ ಮುಗಿದು ಕೆಳಕ್ಕೆ ನೋಡುವಾಗ ಕವರ್‌ ಹಾಕಿ ಮುಚ್ಚಿಟ್ಟಿದ್ದ ಬೈಕ್‌ ಮಾಯವಾಗಿತ್ತು. ಅಯ್ಯೋ ದೇವರೇ ಎಲ್ಲೋಯ್ತು ಎಂದು ನೋಡಿದ ಅಲ್ಲಿನ ಯುವಕ ಹೌಹಾರಿದ್ದ. 

ಕಾಣೆಯಾದ ಬೈಕ್‌ಗಾಗಿ ಅರ್ಧ ಶಿವಮೊಗ್ಗ ಹುಡುಕಾಡಿ ಕೊನೆಗೆ ವಿಧಿಯಿಲ್ಲದೇ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದ್ದಾಯ್ತು. ಅಲ್ಲಿ ಅವತ್ತಿಡಿ ಡಿಪಾರ್ಟ್ಮೆಂಟ್‌ನವರು ಬಂದೋಬಸ್ತ್‌ನಲ್ಲಿ ಬ್ಯುಸಿ. ದಿನವಿಡಿ ಬಿಸಿಲಲ್ಲಿ ನಿಂತು ಡ್ಯೂಟಿ ಮಾಡ್ತಿದ್ದ ಪೊಲೀಸರಿಗೆ ಬೈಕ್‌ ಹುಡುಕಿಕೊಡಿ ಅನ್ನುವಾಗಲೇ ಇವತ್ತಿಗೆ ಬೈಕ್‌ ಸಿಗುತ್ತಾ ಎಂಬದು ಅನುಮಾನ ಮೂಡಿಸಿತ್ತು. ಹಾಗಿದ್ದರೂ ತನ್ನ ಸ್ನೇಹಿತನ ಜೊತೆಗೆ ಚೂರುಪಾರು ದೊಡ್ಡಸ್ತಿಕೆ ತೋರಿಸಿಕೊಂಡು ಬೆಳಗ್ಗೆಯಿಂದ ಮೂರು ಸಲ ಸ್ಟೇಷನ್‌ಗೆ ಓಡಾಡಿದ್ದ ಯುವಕನಿಗೆ ಬೇರೆಯದ್ದೆ ಲೋಕದ ದರ್ಶನವಾಗಿತ್ತು.  

ನಿನ್ನೆ ದಿನ ಹಳೆಯ ಶಿವಮೊಗ್ಗ ಭಾಗದಲ್ಲಿ ಎರಡು ಬೈಕ್‌ ಕಳ್ಳತನವಾಗಿತ್ತು. ಎರಡು ವಿಚಾರಗಳು ಅದಾಗಲೇ ಸ್ಟೇಷನ್‌ಗೆ ತಲುಪಿತ್ತು. ಹೀಗಾಗಿ ಕ್ರೈಂ ಸಿಬ್ಬಂದಿ ಅಲರ್ಟ್‌ ಆಗಿದ್ದರು. ಬೈಕ್‌ ಕಳ್ಳನೊಬ್ಬನ ಮೇಲೆ ಸಂಶಯ ಬಿದ್ದು ಆತನ ಬಗ್ಗೆ ವಿಚಾರಿಸುತ್ತಿದ್ದರು. ಅಷ್ಟರಲ್ಲಿ ಯುವಕ ತನ್ನ ಸ್ನೇಹಿತನನ್ನ ಕರೆದುಕೊಂಡು ಮೂರನೇ ಸಲ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ಗೆ ತೆರಳಿದ್ದ. ಅಲ್ಲಿ ಕ್ರೈಂ ಪೊಲೀಸ್‌ ವಿಭಾಗವನ್ನ ಸಂಪರ್ಕಿಸುತ್ತಲೇ ಅವರು ಕುಳಿತುಕೊಳ್ಳಿ ವಿಚಾರ ಗೊತ್ತಾಗಿದೆ ಎಂದರು. ಆನಂತರ ಹದಿನೈದರಿಂದ ಇಪ್ಪತ್ತು ನಿಮಿಷ ಕಳೆಯುವಷ್ಟರಲ್ಲಿ ಕ್ರೈಂ ಸಿಬ್ಬಂದಿ ಎಲ್ಲಿಗೋ ಹೋದರು. ಮತ್ತೊಂದು ಗಂಟೆ ಕಳೆಯುವಷ್ಟರಲ್ಲಿ ವಾಪಸ್‌ ಸ್ಟೇಷನ್‌ಗೆ ಬಂದಿದ್ದರು. ಹೋಗಿ ಬರುವದರ ನಡುವೆ ಕ್ರೈಂ ಸಿಬ್ಬಂದಿ ಕಳುವಾದ ಬೈಕ್‌ ನ್ನ ಸಹ ಸ್ಟೇಷನ್‌ಗೆ ತಂದಿದ್ದರು. ಅದನ್ನ ನೋಡುತ್ತಲೇ ಏನ್‌ ಸಾರ್‌.. ಸಿಕ್ಕಿಬಿಡ್ತಾ.. ಥ್ಯಾಂಕ್ಯು ಸರ್‌ ಎನ್ನುತ್ತಾ ಯುವಕ ಸಂಭ್ರಮಿಸಿದ್ದ.  

ಸದರಿ ಬೈಕ್‌ನ್ನ ಪತ್ತೆ ಮಾಡಿ ರಿಕವರಿ ಮಾಡಿಕೊಂಡು ಬಂದ ಪೊಲೀಸರ ಶ್ರಮ ಎಷ್ಟಿತ್ತು ಎಂಬುದನ್ನ ಹೇಳಲಾಗದು. ಅದು ಆಫ್‌ ದಿ ರೆಕಾರ್ಡ್‌.  ಆದರೆ ಈ ನಿಟ್ಟಿನಲ್ಲಿ ಪೊಲೀಸರ ಸ್ಪಂದನೆ ಶ್ಲಾಘನೀಯ. ಏಕೆಂದರೆ ಪೊಲೀಸರು ಬೈಕ್‌ ಟ್ರೇಸ್‌ ಮಾಡದಿದ್ದರೇ ಸದ್ಯಕ್ಕೆ ಅದು ಪತ್ತೆಯಾಗುವ ಲಕ್ಷಣ ಇರಲಿಲ್ಲ ಇದಕ್ಕಾಗಿ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಸಿಬ್ಬಂದಿಗೆ ಬಿಗ್‌ ಥ್ಯಾಂಕ್ಸ್‌! 

ಇನ್ನೂ ಬೈಕ್‌ ಕಳ್ಳತನವಾದ ಮೇಲೆ ಯೋಚಿಸುವುದಕ್ಕೂ ಮೊದಲು ಬೈಕ್‌ ಸವಾರರು ಖುದ್ದು ತಮ್ಮ ಬೈಕ್‌ಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ನಡೆದುಕೊಳ್ಳಬೇಕಿದೆ. 

ಎಲ್ಲಿಯಾದರೂ ಬೈಕ್‌ ನಿಲ್ಲಿಸಿ, ಆದರೆ ಬೈಕ್‌ನ ಕೀ ಸರಿಯಾಗಿದ್ಯಾ?ಲಾಕ್‌ ಬೇರೆ ಕೀಗಳಲ್ಲಿಯು ಓಪನ್‌ ಆಗ್ತಿದ್ಯಾ ಅಂತಾ ಆಗಾಗ ಪರಿಶೀಲಿಸಿ! 

ಲಾಕ್‌ಗಳು ವೀಕ್‌ ಆಗಿದ್ದರೇ ಅದು ಕಳ್ಳರಿಗೆ ಲಾಭ! ಅವರ ಕೈಯಲ್ಲಿರೋ ಯಾವುದೋ ಕೀಯನ್ನ ಬಳಸಿ ಬೈಕ್‌ ಕಳವು ಮಾಡುತ್ತಾರೆ. ಹೀಗಾಗಿ ನಿಮ್ಮ ಬೈಕ್‌ಗಳ ಲಾಕ್‌ಗಳ ಭದ್ರತೆ ಬಗ್ಗೆ ಆಗಾಗ ಪರಿಶೀಲಿಸಿ

ಹೊಸ ಲಾಕ್‌ ಹಾಕಿಸಬೇಕು ಮುನ್ನೂರು ರೂಪಾಯಿ ಆಗುತ್ತೆ ಅಂತಾ ಯೋಚಿಸುವ ಕೆಲಸ ಮಾಡದಿರಿ, ಏಕೆಂದರೆ ಬೈಕ್‌ ಕಳುವಾದರೆ ಹೊಸ ಬೈಕ್‌ ತೆಗೆದುಕೊಳ್ಳಲು ಕನಿಷ್ಠ ಲಕ್ಷ ರೂಪಾಯಿ ಬೇಕು.

ಇನ್ನೂ ವ್ಹೀಲ್‌ ಲಾಕ್‌ಗಳನ್ನ ಬಳಸುವುದು ಉತ್ತಮ ಏಕೆಂದರೆ ಹ್ಯಾಂಡಲ್‌ ಲಾಕ್‌ ಮುರಿದು ಬೈಕ್‌ ದೋಚುವ ಕಳ್ಳರೂ ಇದ್ದಾರೆ. ವ್ಹೀಲ್‌ ಲಾಕ್‌ ಬಳಸಿದರೆ ಇದನ್ನ ಸಹ ತಪ್ಪಿಸಬಹುದು. 

ಬೈಕ್‌ ಕೀ ಸವೆದು ಹೋದಂತಿದ್ದರೆ, ಅದರ ಲಾಕ್‌ ಕೂಡ ವೀಕ್‌ ಆಗಿದೆ ಎಂತಲೇ ಅರ್ಥ ಹಾಗಾಗಿ ಬೈಕ್‌ನ ಕೀ ಮತ್ತು ಲಾಕ್‌ ಎರಡು ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿದರೆ ಗಾಡಿ ಬಹುತೇಕ ಸೇಫ್‌. 

ಇಷ್ಟು ಮಾಡಿದರೇ ಬೈಕ್‌ ಕಳ್ಳತನ ತಪ್ಪಿಸಬಹುದು ಎಂದಲ್ಲ, ಆದರೆ ಬೈಕ್‌ ಕಳ್ಳತನದ ಪ್ರಕರಣ ಬಹತೇಕ ಕಡಿಮೆಯಾಗುತ್ತದೆ.