ನಾನು ಬಾಡಿಗೆ ಮನೆಯಲ್ಲಿದ್ದುಕೊಂಡು ಚುನಾವಣೆ ಎದುರಿಸ್ತಿಲ್ಲ | ಏಕೆ ಹೀಗಂದ್ರು ಬಿ ವೈ ರಾಘವೇಂದ್ರ

I am not contesting elections in a rented house. Why did B.Y. Raghavendra say this?

ನಾನು ಬಾಡಿಗೆ ಮನೆಯಲ್ಲಿದ್ದುಕೊಂಡು ಚುನಾವಣೆ ಎದುರಿಸ್ತಿಲ್ಲ | ಏಕೆ ಹೀಗಂದ್ರು ಬಿ ವೈ ರಾಘವೇಂದ್ರ
B.Y. Raghavendra

SHIVAMOGGA | MALENADUTODAY NEWS | May 3, 2024    ‌ 

ಬಾಡಿಗೆ ಮನೆಯಲ್ಲಿ ಇದ್ದುಕೊಂಡು ನಾನು ಚುನಾವಣೆ ಎದುರಿಸುತ್ತಿಲ್ಲ. ನಿಮ್ಮೊಂದಿಗೆ 15 ವರ್ಷಗಳಿಂದ ಇದ್ದು ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಜನರಿಗಾಗಿ ಇನ್ನಷ್ಟು ಕೆಲಸ ಮಾಡುವ ಹಂಬಲ ಇದೆ ಅಂತಾ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ  (B.Y. Raghavendra)ಹೇಳಿದ್ದಾರೆ. 

ಕಳೆದ ವಾರದಲ್ಲಿ ಶಿವಮೊಗ್ಗದಲ್ಲಿ ಮನೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಶಿವಮೊಗ್ಗದಲ್ಲಿ ಬಾಡಿಗೆ ಮನೆ ಮಾಡಿದ್ದು ಅದನ್ನ ಚುನಾವಣೆ ಬಳಿಕ ಖಾಲಿ ಮಾಡಿಕೊಂಡು ಹೋಗುತ್ತಾರೆ ಅಂತಾ ಕುಮಾರ್‌ ಬಂಗಾರಪ್ಪ ಹೇಳಿದ್ದರು. ಇನ್ನೊಂದೆಡೆ ಇದಕ್ಕೆ ಕಾಂಗ್ರೆಸ್‌ ಮುಖಂಡರು ಮಾಜಿ ಸಚಿವರು ಈಗ ರೀಚಾರ್ಜ್‌ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದ್ದರು. 

ಇದೀಗ ಇದೇ ಮನೆ ವಿಚಾರದಲ್ಲಿ ಮಾತನಾಡಿರುವ ಬಿವೈ ರಾಘವೇಂದ್ರ  ಬೆಜ್ಜವಳ್ಳಿ, ದೇವಂಗಿ, ಮೇಗರವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡ್ತಾ ದುರುದ್ದೇಶದಿಂದ ಕೂಡಿದ ಜಾಹೀರಾತುಗಳನ್ನು ತೋರಿಸಿ ಕಾಂಗ್ರೆಸ್‌ ಪಕ್ಷ ಜನರ ಭಾವನೆ ಕೆರಳಿಸುತ್ತಿದೆ. ಶಾಸಕ ರಾಜು ಕಾಗೆ ‘ಮೋದಿ ತೀರಿದ ನಂತರ ಅಭ್ಯರ್ಥಿ ಇಲ್ಲವಾ’ ಎನ್ನುವ ಮೂಲಕ ಕಾಂಗ್ರೆಸ್‌ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದರು ಅಲ್ಲದೆ. ನಾನು ಬಾಡಿಗೆ ಮನೆಯಲ್ಲಿದ್ದುಕೊಂಡು ಚುನಾವಣೆ ಎದುರಿಸ್ತಿಲ್ಲ ಎಂದು ವ್ಯಂಗ್ಯವಾಡಿದರು