ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆ | ಕುತೂಹಲ ಮೂಡಿಸಿದ ಬೇಳೂರು ಗೋಪಾಲಕೃಷ್ಣರ ನಾಮಿನೇಷನ್‌!

Shivamogga DCC Bank director elections are generating excitement with prominent figures contesting. the Chairman of the State Forest Industries Development Corporation MLA Belur Gopalakrishna, also  has filed his nomination for the director position.  Zilla Panchayat member Honagodu Ratnakar.  

ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆ | ಕುತೂಹಲ ಮೂಡಿಸಿದ ಬೇಳೂರು ಗೋಪಾಲಕೃಷ್ಣರ ನಾಮಿನೇಷನ್‌!
MLA Belur Gopalakrishna

SHIVAMOGGA | MALENADUTODAY NEWS | Jun 20, 2024  ಮಲೆನಾಡು ಟುಡೆ 

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆ ಸಖತ್‌ ಕುತೂಹಲ ಮೂಡಿಸಿದೆ. ಈ ಚುನಾವಣೆಯಲ್ಲಿ ಘಟಾನುಘಟಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ಇದರ ನಡುವೆ ಹೊಸ ಸುದ್ದಿಯೊಂದು ಬಂದಿದ್ದು ರಾಜ್ಯ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಶಾಸಕ ಗೋಪಾಲ ಕೃಷ್ಣ ಬೇಳೂರು ರವರು ಸಹ  ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

ಬೇಳೂರು ಗೋಪಾಲಕೃಷ್ಣ ರವರು ಸಾಗರ ತಾಲೂಕು ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧೆಗೆ ಅಸ್ತು ಎಂದು ಕಣಕ್ಕಿಳಿದಿದ್ದಾರೆ. ಇನ್ನೂ ಬೇಳೂರು ಗೋಪಾಲಕೃಷ್ಣರಿಗೆ ಸ್ಪರ್ಧಿಯಾಗಿದೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹೊನಗೋಡು ರತ್ನಾಕರ್‌  ನಾಮಪತ್ರ ಸಲ್ಲಿಸಿದ್ದಾರೆ.  

ಇದುವರೆಗೂ ಒಟ್ಟು  32 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಇವತ್ತೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಇನ್ನಷ್ಟು ನಾಮಪತ್ರ ಸಲ್ಲಿಕೆಯಾಗುವ ನಿರೀಕ್ಷೆಯಿದೆ. 