ನರೇಂದ್ರ ಮೋದಿ ಮತ್ತು ಮಹಾತ್ಮ ಗಾಂಧಿ | ಕಿಮ್ಮನೆ ರತ್ನಾಕರ್‌ ದೊಡ್ಡ ಮಾತು | ಪುಸ್ತಕ ಕಳಿಸ್ತೀನಿ ಎಂದಿದ್ದೇಕೆ?

Former Minister Kimmane Ratnakar criticized Prime Minister Narendra Modi for his comments on Mahatma Gandhi.

ನರೇಂದ್ರ ಮೋದಿ ಮತ್ತು ಮಹಾತ್ಮ ಗಾಂಧಿ | ಕಿಮ್ಮನೆ ರತ್ನಾಕರ್‌  ದೊಡ್ಡ ಮಾತು | ಪುಸ್ತಕ ಕಳಿಸ್ತೀನಿ ಎಂದಿದ್ದೇಕೆ?
Kimmane Ratnaka,Prime Minister Narendra Modi, Mahatma Gandhi

SHIVAMOGGA | MALENADUTODAY NEWS | May 30, 2024  ಮಲೆನಾಡು ಟುಡೆ

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ತಮ್ಮದೆ ಆದ ದಾಟಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಕುರಿತ ಓದದೇ ಇರುವ ಪ್ರಧಾನಿ ಇದ್ದರೆ, ಅದು ನರೇಂದ್ರ ಮೋದಿ ಮಾತ್ರ ಎಂದವರು ಟೀಕಿಸಿದ್ದಾರೆ. ಅಲ್ಲದೆ  ಇದು ದೇಶದ ಅತಿ ದೊಡ್ಡ ದುರಂತ ಎಂದಿದ್ಧಾರೆ. 

ಅಲ್ಲದೆ ಈ ನಿಟ್ಟಿನಲ್ಲಿ ಮಹಾತ್ಮ  ಗಾಂಧಿ ಬಗ್ಗೆ ಅಧ್ಯಯನ ನಡೆಸಲು ಶೀಘ್ರವಾಗಿ ನರೇಂದ್ರ ಮೋದಿಯವರಿಗೆ ಪುಸ್ತಕಗಳನ್ನು ಕಳುಹಿಸಿ ಕೊಡುವೆ.  ಪ್ರಧಾನಿ ನರೇಂದ್ರ ಮೋದಿಯವರು ನಾನು ಕಳುಹಿಸುವ ಪುಸ್ತಕಗಳನ್ನು ಅವರಿಗೆ ಅರ್ಥವಾಗುವ  ಭಾಷೆಗೆ ತರ್ಜುಮೆ ಮಾಡಿಕೊಂಡು ಓದಲಿ ಎಂದಿದ್ಧಾರೆ. 

ಸಿನಿಮಾ ನೋಡಿ ಗಾಂಧಿ ಬಗ್ಗೆ ತಿಳಿದುಕೊಂಡೆ ಎನ್ನುವ ಮೋದಿ ಅವರ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. ದೇಶದಲ್ಲಿ ಗಾಂಧಿ ಬಗ್ಗೆ ಕಲಿಸದ ಶಾಲೆಗಳು ಎಲ್ಲಿಯೂ ಇಲ್ಲ. ಗಾಂಧಿ ಮರಣ ಹೊಂದಿದಾಗ ಅದೇ ಮೊದಲ ಬಾರಿ ಅರ್ಧ ಬಾವುಟ ಹಾರಿಸಲಾಗಿತ್ತು. ಇದರ ಬಗ್ಗೆಯೂ ಮೋದಿಗೆ ಅರಿವಿಲ್ಲ. ಇಲ್ಲಿ ಗಾಂಧಿ ಬಗ್ಗೆ ಸರಿ ಸಮನಾದ ವ್ಯಕ್ತಿ ಮತ್ತೊಬ್ಬರಿಲ್ಲ. ಮುಂದಿನ ದಿನದಲ್ಲಾದರೂ ಮೋದಿ ಅವರು ಗಾಂಧೀಜಿ ಬಗ್ಗೆ ಅರಿಯಲಿ ಎಂದರು. ಇದೇ ವೇಳೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಿದರು. 

Former Minister Kimmane Ratnakar criticized Prime Minister Narendra Modi for his comments on Mahatma Gandhi.