ಹೊಸನಗರ ತಾಲ್ಲೂಕು ಈ ಗ್ರಾಮದಲ್ಲಿ ಶುರುವಾಯ್ತು ವ್ಯಾಘ್ರ ಭಯ | ಹುಲಿ ಹಿಡಿದಿದ್ದೇನು?

Tiger scare begins in this village in Hosanagara taluk | What did the tiger catch?

ಹೊಸನಗರ ತಾಲ್ಲೂಕು ಈ ಗ್ರಾಮದಲ್ಲಿ ಶುರುವಾಯ್ತು ವ್ಯಾಘ್ರ ಭಯ | ಹುಲಿ ಹಿಡಿದಿದ್ದೇನು?
Nittur, Shivamogga, Hosanagara News,

SHIVAMOGGA | MALENADUTODAY NEWS | May 24, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಸಮೀಪ ಇದೀಗ ಹುಲಿಯ ಭಯ ಹೆಚ್ಚಾಗಿದೆಯಂತೆ. ಜನರು ಹುಲಿಯೊಂದು ಈ ಭಾಗದಲ್ಲಿ ಓಡಾಡುತ್ತಿದ್ದು ಮನುಷ್ಯ ಮೇಲೆ ದಾಳಿ ಮಾಡಿದರೇ ಏನು ಮಾಡುವುದು ಎಂದು ಆತಂಕದಲ್ಲಿದ್ದಾರೆ. 

ತಾಲೂಕಿನ ನಿಟ್ಟೂರು ಸಮೀಪದ ಜಾಲ ಗ್ರಾಮದಲ್ಲಿ ಕಳೆದ ಮಂಗಳವಾರ ಹಸುವೊಂದು ನಾಪತ್ತೆಯಾಗಿತ್ತು. ಮಲೆನಾಡ ಕಾಡು ಬದಿಯಲ್ಲಿ ಹಸುಗಳು ಕಣ್ಮರೆ ಯಾದರೆ ಎಲ್ಲೊ ಹುಲಿ ಕಚ್ಕೊಂಡು ಹೋಗಿರಬಹುದು ಎನ್ನುವುದು ಸಾಮಾನ್ಯ ಮಾತು. ಆದಾಗ್ಯು ತಮ್ಮ ಹಸುವನ್ನ ಅದರ ಮಾಲೀಕ ಮಹೇಶ್‌ ಹುಡುಕಾಡಿದ್ದಾರೆ. ಹಾಗೂ ಹೀಗ ಸಿಕ್ಕ ಹಸುವಿನ ಬಾಲ ಹಾಗೂ ಕಿವಿಗಳನ್ನ ಹುಲಿಯೊಂದು ಕಚ್ಚಿದ್ದು ದನದ ಮೈತುಂಬಾ ಹುಲಿಯ ಉಗುರಿನ ಗುರುತುಗಳು ಕಂಡಿವೆ. ಪಶುವೈಧ್ಯರಿಂದ ಹಸುವಿಗೆ ಚಿಕಿತ್ಸೆ ಕೊಡಿಸಿದ ಅವರು, ಸ್ಥಳೀಯವಾಗಿ ತಮ್ಮ ಆತಂಕ ತೋಡಿಕೊಂಡಿದ್ದಾರೆ. 

ಇನ್ನೂ ಈ ಭಾಗದಲ್ಲಿ ಸಾಕು ನಾಯಿಯೊಂದು ಕಾಣೆಯಾಗಿದ್ದರ ಬಗ್ಗೆ ವರದಿಯಾಗಿದ್ದು ಹುಲಿಯೇ ಅದನ್ನು ಸಹ ಹಿಡಿದಿರಬಹುದು ಎಂದು ಜನರು ಶಂಕಿಸುತ್ತಿದ್ದಾರೆ. ಆದರೆ ಹಸುವಿನ ಮೇಲೆ ದಾಳಿ ಮಾಡಿದ್ದು ನಿಜಕ್ಕೂ ಹುಲಿಯೇನಾ? ಅಥವಾ ಬೇರೆ ಮೃಗವಾ ಎಂಬುದು ಅಧಿಕಾರಿಗಳೇ ಅಧಿಕೃತವಾಗಿ ತಿಳಿಸಬೇಕು.