ಹೊಸನಗರದಲ್ಲಿ ಕಂದಕದಲ್ಲಿ ಬಿದ್ದಿತ್ತು ಈ ಅಪರೂಪದ ಪ್ರಾಣಿ! ಇದು ಬೆಕ್ಕಲ್ಲ! ಹಾಗಾದರೆ ಇದು ಯಾವ ಜೀವಿ ಗೊತ್ತಾ?

Malabar large-spotted civet (Viverra civettina) cat Punagubekku found in Hosanagar

ಹೊಸನಗರದಲ್ಲಿ ಕಂದಕದಲ್ಲಿ ಬಿದ್ದಿತ್ತು ಈ ಅಪರೂಪದ ಪ್ರಾಣಿ! ಇದು ಬೆಕ್ಕಲ್ಲ! ಹಾಗಾದರೆ ಇದು ಯಾವ ಜೀವಿ ಗೊತ್ತಾ?
Punagubekku

Shivamogga  Apr 3, 2024   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು  ಪುರಪ್ಪೆಮನೆ ಗ್ರಾಮದ ರಸ್ತೆ ಬದಿಯಲ್ಲಿ  Malabar large-spotted civet (Viverra civettina) cat  ಅಪರೂಪದ ಪುನುಗು ಬೆಕ್ಕು ಪತ್ತೆಯಾಗಿದೆ. ಇಲ್ಲಿನ ಸ್ಥಳೀಯರು ಇದನ್ನ ಗಮನಿಸಿ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಪುನುಗು ಬೆಕ್ಕನ್ನ ಸಂರಕ್ಷಿಸಿ ಶಿವಮೊಗ್ಗದಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ರವಾನಿಸಿದ್ದಾರೆ. ಅಲ್ಲಿ ಗಾಯಗೊಂಡಿದ್ದ ಪುನುಗುಬೆಕ್ಕಿಗೆ ಚಿಕಿತ್ಸೆ ನೀಡಲಾಯ್ತು

punugubekku

ಮೈಮೇಲೆ ದೊಡ್ಡ ಗಾತ್ರದ ಚುಕ್ಕೆಗಳನ್ನ ಹೊಂದಿರುವ ಈ ವಿಶೇಷ ಜಾತಿಯ ಪುನುಗುಬೆಕ್ಕು ದಟ್ಟ ಅರಣ್ಯಗಳಲ್ಲಿ ಮಾತ್ರ ಕಾಣಸಿಗುತ್ತವೆ. ಇವುಗಳನ್ನ  ಸಂರಕ್ಷಿತ ಜೀವಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. 

ಪುರಪ್ಪೆಮನೆ ಮತ್ತು ಗಡಿಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯ ಹಳ್ಳದಲ್ಲಿ ಸಿವೆಟ್ ಇದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ನಂತರ ಸಿಬ್ಬಂದಿ ಬಂದು ಪ್ರಾಣಿಯನ್ನು ರಕ್ಷಿಸಿದ್ದಾರೆ.



TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ  ಸುದ್ದಿ ಓದಿ,  ಲಿಂಕ್​ ಕ್ಲಿಕ್ ಮಾಡಿ

https://whatsapp.com/channel/0029Va9I91s3LdQVrdq7yl1h

ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ