ಬಿಜೆಪಿಯಲ್ಲಿ ಕಾಣ್ತಿಲ್ಲ! ಕಾಂಗ್ರೆಸ್​​ಗಿನ್ನೂ ಬಂದಿಲ್ಲ! ಸಾಗರ ಸಮಾವೇಶದಲ್ಲಿ ಮಿಸ್​ ಆದ ಕುಮಾರ್ ಬಂಗಾರಪ್ಪ! ಸಹೋದರಿಗೆ ಜೈ ಅಂತಾರಾ?

Did Kumar Bangarappa, who missed the Sagar conference, say 'Jai' to his sister?

ಬಿಜೆಪಿಯಲ್ಲಿ ಕಾಣ್ತಿಲ್ಲ! ಕಾಂಗ್ರೆಸ್​​ಗಿನ್ನೂ ಬಂದಿಲ್ಲ! ಸಾಗರ ಸಮಾವೇಶದಲ್ಲಿ ಮಿಸ್​ ಆದ ಕುಮಾರ್ ಬಂಗಾರಪ್ಪ! ಸಹೋದರಿಗೆ ಜೈ ಅಂತಾರಾ?
Kumar Bangarappa, Madhu Bangarappa, Geetha Shivarajkumar, Shivarajkumar, ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್, ಶಿವರಾಜ್ ಕುಮಾರ್,

Shivamogga Mar 6, 2024  ನಿನ್ನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಣಪತಿ ಕೆರೆಯ ಸಮೀಪ ಈಡಿಗ ಸಮುದಾಯದ ಸಮಾವೇಶ ನಡೆದಿತ್ತು. ಬಹುತೇಕ ಬಿಜೆಪಿ ಮಯವಾಗಿದ್ದ ಸಮಾವೇಶದಲ್ಲಿ ಕುತೂಹಲ ಮೂಡಿಸಿದ್ದು ಕುಮಾರ ಬಂಗಾರಪ್ಪನವರ ಅನುಪಸ್ಥಿತಿ.. 

ಕುಮಾರ್ ಬಂಗಾರಪ್ಪ ನವರು ಕಾಂಗ್ರೆಸ್​ ಹೋಗ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಬಿಜೆಪಿಯಿಂದಲೂ ಅವರು ದೂರವಿರುವುದರಂತೂ ಸತ್ಯ. ಇದರ ನಡುವೆ ಮೊನ್ನೆ ಮೊನ್ನೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕುಮಾರ್ ಬಂಗಾರಪ್ಪನವರನ್ನ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ಹಗ್ಗಹಾಕಿ ಕಟ್ಟಿ ಹಿಡಿದುಕೊಂಡಿದ್ದಾರೆ. ಆದರೂ ಅವರು ಕಾಂಗ್ರೆಸ್​ಗೆ ಬರುತ್ತಾರೆ ಎಂದು ಸಣ್ಣದಾಗಿ ಹೇಳಿದ್ದರು.. 

ಇದರ ಬೆನ್ನಲ್ಲೆ ಸಾಗರದಲ್ಲಿ ನಡೆದ ಸಮಾವೇಶದಲ್ಲಿ ಹರತಾಳು ಹಾಲಪ್ಪ ರವರ ಉಸ್ತುವಾರಿ ಕಂಡು ಬಂತೆ ವಿನಃ ಕುಮಾರ್ ಬಂಗಾರಪ್ಪನವರ ಸುಳಿವು ಕಾಣಲಿಲ್ಲ. ವಿಶೇಷವಾಗಿ   ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿ ನಡೆಸಿದ 26 ಒಳಪಂಗಡಗಳ ಶಕ್ತಿಸಾಗರ ಸಂಗಮದ ಕಾರ್ಯಕ್ರಮದ ಫ್ಲೆಕ್ಸ್​ಗಳಲ್ಲಿ ಕುಮಾರ್ ಬಂಗಾರಪ್ಪರವರು ಮಿಸ್ಸಿಂಗ್ ಆಗಿದ್ದರು.. ಅವರು ಸ್ವತಃ ಕಾರ್ಯಕ್ರಮಕ್ಕೂ ಬರದೇ ಅನುಪಸ್ಥಿತಿಯನ್ನು ಪ್ರದರ್ಶಿಸಿದ್ದರು. ಯಾಕೆ ಎಂಬ ಪ್ರಶ್ನೆಯು ಹೆಚ್ಚಾಗಿ ಅಲ್ಲಿ ಉದ್ಭವವಾಗಲಿಲ್ಲ. ಯಾಕಾಗಿ ಎನ್ನುವುದಕ್ಕೂ ಉತ್ತರ ಅಲ್ಲಿ ಸ್ಪಷ್ಟವಾಗಿ ಸಿಗಲಿಲ್ಲ. ಮೇಲಾಗಿ ಮಾಜಿ ಸಚಿವ ಪ್ರಸ್ತಾಪವೂ ಆಗಲಿಲ್ಲ ಅನ್ನುವುದು ನೆರದವರು ಆಡಿಕೊಳ್ಳುತ್ತಿರುವ ಮಾತು. 

 

ಇನ್ನೂ ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ  ಯಾರಾಗ್ತಾರೆ ಎಂಬುದಕ್ಕೆ ಹೆಚ್ಚುಕಮ್ಮಿ ಉತ್ತರ ಸಿಕ್ಕಾಗಿದೆ. ಮಧು ಬಂಗಾರಪ್ಪ ರವರ ಹುಟ್ಟುಹಬ್ಬದ ದಿನ ಶಿವಮೊಗ್ಗಕ್ಕೆ ಬಂದ  ಬೆನ್ನಲ್ಲೆ  ಗೀತಾ ಶಿವರಾಜ್ ಕುಮಾರ್ ರವರ ಹೆಸರು ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊದಲಿಗಿದೆ ಎಂಬ ಮಾತು ಸ್ಪಷ್ಟವಾಗಿತ್ತು. ಆ ನಿಟ್ಟಿನಲ್ಲಿ ಪಕ್ಷ ಹಾಗೂ ಸರ್ಕಾರದ ಕಾರ್ಯಕ್ರಮಕ್ಕಾಗಿ ಅವಿರತ ಶ್ರಮ ಹಾಕುತ್ತಿರುವ ಮಧು ಬಂಗಾರಪ್ಪರವರ ಒತ್ತಡವೂ ಸ್ಪಷ್ಟವಾಗಿದೆ. 

ಈ ನಡುವೆ ಕುಮಾರ್ ಬಂಗಾರಪ್ಪನವರನ್ನ ಕಾಂಗ್ರೆಸ್ ಗೆ ಕರೆದುಕೊಂಡು ಬಂದು ಬಿಜೆಪಿ ವಿರುದ್ಧ ಶಿವಮೊಗ್ಗದಲ್ಲಿ ನಿಲ್ಲಿಸಬೇಕು ಎಂಬ ಪ್ರಯತ್ನಗಳು ಕಾಂಗ್ರೆಸ್​ನಲ್ಲಿ ನಡೆಯುತ್ತಲೇ ಇದೆ. ಕೆಪಿಸಿಸಿಯೊಳಗೆ ನಡೆಯುತ್ತಿರುವ ಈ ಆಟದಲ್ಲಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಮಧು ಬಂಗಾರಪ್ಪವರ ಕೈ ಮೇಲಾಗಿದೆ ಎಂಬುದು ಸದ್ಯಕ್ಕೆ ಸ್ಪಷ್ಟ.

ಹಾಗಾಗರ  ಕುಮಾರ್ ಬಂಗಾರಪ್ಪರವರು ಕಾಂಗ್ರೆಸ್​ಗೆ ಏಕೆ ಬರುತ್ತಾರೆ ಎಂಬುದು ಸಹ ಪ್ರಶ್ನೆಯಾಗುತ್ತದೆ. ಇದಕ್ಕೆ ಸಿಗುವ ಮೂಲಗಳ ಉತ್ತರ ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಫಲಾನುಭವಿಗಳ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್  ನಾವು ಒಂಬತ್ತು ವರ್ಷ ಇನ್ನೂ ಅಧಿಕಾರದಲ್ಲಿ ಇರುತ್ತೇವೆ ಎಂದಿದ್ದಾರೆ. ಅರ್ಥಾತ್​ ಕುಮಾರ್ ಬಂಗಾರಪ್ಪನವರು ಕಾಂಗ್ರೆಸ್​ಗೆ ಬಂದರೆ ಅವರಿಗೆ ಯಾವುದೋ ರೂಪದಲ್ಲಿ ಅಧಿಕಾರವಂತೂ ಸಿಗುವ ಸಾಧ್ಯತೆ ಇದೆಯಂತೆ. 

ಈ ನಿಟ್ಟಿನಲ್ಲಿ ಕುಮಾರ್ ಬಂಗಾರಪ್ಪನವರ ನಡೆ ಇನ್ನೂ ಸಹ ನಿಗೂಢವಾಗಿದೆಯಾದರೂ ಸಹ, ಕೆಪಿಸಿಸಿ ಮೂಲಗಳಲ್ಲಿ ಪರೋಕ್ಷವಾಗಿ ಅಥವಾ ನೇರವಾಗಿ ಸಹೋದರಿಯ ಜೊತೆಗೆ ನಿಂತು ಸಹೋದರರು ಚುನಾವಣೆ ಅಖಾಡದಲ್ಲಿ ಕಾಣಿಸಿಕೊಳ್ಳುವ ಸಾದ್ಯತೆ ಇದೆ ಎನ್ನುವ ರೂಮರ್ ಇದೆ. ಇನ್ನೊಂದೆಡೆ ತಮ್ಮ ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ಕುಮಾರ್ ಬಂಗಾರಪ್ಪರವರು ಯೋಚಿಸುತ್ತಿದ್ದು ಮುಂಬರುವ ದಿನಗಳ ನಡೆ ಅದರ ಮೇಲೆ ನಿಕ್ಕಿಯಾಗಲಿದೆ ಎನ್ನುವ ಮಾತು ಸಹ ಕೇಳಿಬರುತ್ತಿದೆ.

ರಾಜಕಾರಣದಲ್ಲಿ ಏನೂ ಸಹ ಸಾಧ್ಯವಿದೆ. ಸದ್ಯಕ್ಕಿಷ್ಟು ಸುದ್ದಿ ಹರಿದಾಡುತ್ತಿದೆ. ವದಂತಿಗಳು, ಒಳಮಾತುಗಳು, ಚರ್ಚೆಗಳು ಹಾಗೂ ತಂತ್ರಗಾರಿಕೆಗಳು ಹೇಗೂ ಸಹ ಬದಲಾಗಬಹುದು..ಏಕೆಂದರೆ ಶಿವಮೊಗ್ಗದ ತುಂಗಾನದಿಯಲ್ಲಿ ರಾಜಕಾರಣದ ಒಳಹರಿವು ನಿರಂತರವಾಗಿ ಅಚ್ಚರಿ ಮೂಡಿಸುತ್ತಾ ಬಂದಿದೆ.