ಹರತಾಳು ಹಾಲಪ್ಪ, ಟಿ.ಡಿ. ಮೇಘರಾಜ್​ ಸೇರಿದಂತೆ 43 ಮಂದಿ ವಿರುದ್ದ ಎಫ್ಐಆರ್​ !

FIR against 43 people including Harthalu Halappa and TD Meghraj! ಹರತಾಳು ಹಾಲಪ್ಪ ಹಾಗೂ ಟಿ.ಡಿ.ಮೇಘರಾಜ್, ಸೇರಿದಂತೆ 43 ಮಂದಿ ವಿರುದ್ದ ಎಫ್ಐಆರ್​ !

ಹರತಾಳು ಹಾಲಪ್ಪ, ಟಿ.ಡಿ. ಮೇಘರಾಜ್​  ಸೇರಿದಂತೆ 43  ಮಂದಿ ವಿರುದ್ದ ಎಫ್ಐಆರ್​ !

KARNATAKA NEWS/ ONLINE / Malenadu today/ Nov 9, 2023 SHIVAMOGGA NEWS

 

sagara |   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಮಾಜಿ ಎಂಎಲ್​ಎ ಹರತಾಳು ಹಾಲಪ್ಪ ಸೇರಿದಂತೆ 43 ಜನರ ವಿರುದ್ಧ ಕೇಸ್ ದಾಖಲಾಗಿದೆ. 10-07-2023 ರಂದು ನಡೆದ ಘಟನೆ ಸಂಬಂಧ ನ್ಯಾಯಾಲಯದ ಆದೇಶದಂತೆ ಕೇಸ್​ ದಾಖಲಾಗಿದೆ. IPC 1860 (U/s-141,143,147,148,441,447,427,504,506,149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,  ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್ ವಿರುದ್ಧವೂ ಆರೋಪ ನಮೂದಾಗಿದೆ.  

 

READ : ಶಿವಮೊಗ್ಗದಲ್ಲಿ ಸರ್ಕಾರದಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ? ವಿವರ ಇಲ್ಲಿದೆ !

 

ಏನಿದು ಪ್ರಕರಣ  

 

ಸಾಗರ ತಾ|| ಕಸಬಾ ಹೋಬಳಿ ಕೊತ್ವಾಲಕಟ್ಟೆ  ಸರ್ವೆ ನಂ.5/4 ರಲ್ಲಿ 13:12 ಗುಂಟೆ ಜಮೀನನ್ನು ದೂರುದಾರರು  ಖಡೀದಿಸಿದ್ದು ಖಾತೆ ಬದಲಾವಣೆ ಕೂಡ ಆಗಿದೆ.ಈ ವಿಚಾರದಲ್ಲಿ ತೊಂದರೆ ನೀಡಿದ ಆರೋಪ ಇದ್ದು, ಅವರು ತಮ್ಮ ಜಮೀನಿಗೆ ಬರದಂತೆ ದೂರುದಾರರು ಪ್ರತಿಬಂದಕಾದೇಶ ಪಡೆದುಕೊಂಡಿದ್ದರು. ಇದಕ್ಕೆ ವ್ಯತರಿಕ್ತವಾಗಿ ದಿನಾಂಕ: -10-07-2023 ರಂದು ಭೂ ಮಾಪನ ಅಧಿಕಾರಿಗಳು ಬಂದಾಗ ದೂರುದಾರರ  ಸ್ವತ್ತಿಗೆ ಅಕ್ರಮ ಪ್ರವೇಶ ಮಾಡಿ ಸತ್ತಿನಲ್ಲಿರುವ ಹಲಗೆ ಬೇಲಿಯನ್ನು ಮುರಿದು, ಪ್ರತಿಭಟನೆ ಮಾಡಿ,  ಅವಾಚ್ಯ ಶಬ್ದಗಳಿಂದ ಬೈದು, ಪ್ರತಿಭಟನೆ ಮಾಡಿ , ಜಾಗದಲ್ಲಿ, ಅಶಾಂತಿಯನ್ನು ಉಂಟುಮಾಡಿ ಹಲ್ಲೆಗೆ ಯತ್ನಿಸಿದ ಆರೋಪವನ್ನ ಮಾಡಲಾಗಿದೆ.ಇದೇ ವಿಚಾರವಾಗಿ ಸದ್ಯ ಎಫ್ಐಆರ್ ದಾಖಲಾಗಿದೆ.