ಶಿವಮೊಗ್ಗ ಫ್ರೀಡಂ ಪಾರ್ಕ್ ಬಳಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ! ನಾಲ್ಕು ಮಾತು

Malenadu Today

SHIVAMOGGA |  Jan 11, 2024  | ಬಿಜೆಪಿ ನಾಯಕರ ಕೆ.ಎಸ್. ಈಶ್ವರಪ್ಪ ಅವರು ಎರಡನೇ ಯತ್ನಾಳ್ ಆಗಿ ಬದಲಾಗಿದ್ದಾರೆ. ಪುತ್ರನಿಗೆ ಹಾವೇರಿ ಯಲ್ಲಿ ಬಿಜೆಪಿ: ಟಿಕೆಟ್ ಸಿಗುತ್ತೇ ಎಂದು ಯಡಿಯೂರಪ್ಪ ಪುತ್ರರೂ ಹಾಗೂ ರಾಜ್ಯಾಧ್ಯಕ್ಷರ ಬಗ್ಗೆ ಮೆದು ಧೋರಣೆ ಹೊಂದಿದ್ದಾರೆ ಟಿಕೆಟ್ ಸಿಗದಿದ್ದಲ್ಲಿ ಮತ್ತೆ ಗುಡುಗಲು ಆರಂಭಿ ಸುತ್ತಾರೆ. ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದ್ದಾರೆ. 

ಶಿವಮೊಗ್ಗ ಫ್ರೀಡಂ ಪಾರ್ಕ್ ಬಳಿ ಮಾತನಾಡಿದ ಅವರು, ಮೂವರು ಡಿಸಿಎಂ ನೇಮಕ ಮಾಡ ಬೇಕೆಂಬ ಅಭಿಪ್ರಾಯ ಕೆಲವರಲ್ಲಿ ಬಂದಿದೆ ಅಷ್ಟೇ, ಅದಕ್ಕೇ ಈಶ್ವರಪ್ಪ ಅವರು ಜಿಲ್ಲೆಗೊಂದು ಮಾಡಿ ಎಂಬ ಹೇಳಿಕೆ ನೀಡಿದ್ದಾರೆ. ಸುಮ್ಮನೇ ನಮ್ಮ ಸರಕಾರದ ಬಗ್ಗೆ ಟೀಕೆ ಮಾಡುತ್ತಾರೆ. ನಮ್ಮ ಸರಕಾರದ ಬಗ್ಗೆ ತನಾಡುವಾಗ ಅವರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ. 

ಬಿ.ವೈ ವಿಜಯೇಂದ್ರ ಅವರು ಅಪ್ಪನ ಆಶೀರ್ವಾದದಿಂದ ರಾಜ್ಯಾಧ್ಯಕ್ಷರಾಗಿದ್ದಾರೆ. ಹೀಗಾಗಿ ಆಕ್ಟಿವ್ ಆಗಿ ಮಾತನಾಡುತ್ತಿದ್ದಾರೆ ಎಂದ ಸಾಗರ ಶಾಸಕ ರಾಜ್ಯದಲ್ಲಿ 28 ಸ್ಥಾನ ಗೆಲ್ಲುತ್ತೇವೆ ಅಂತಾ ಹೇಳಿದ್ದಾರೆ. 28 ಸ್ಥಾನ ಬರದೇ, ಒಂದು ಸ್ಥಾನ ಕಡಿಮೆಯಾದ್ರೂ ಇವರು ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನಿಸಿದ್ದಾರ.ಎ 

ಕಾಂಗ್ರೆಸ್‌ನ ಹಿರಿಯ ಬಿ.ಕೆ.ಹರಿಪ್ರಸಾದ್‌ ಗೆ ಮಂಪರು ಪರೀಕ್ಷೆ ಮಾಡಬೇಕೆಂಬ  ಹೇಳಿಕೆಗೆ ಪ್ರತಿಕ್ರಿಯಿಸಿದ ಬೇಳೂರು ಗೋಪಾಲಕೃಷ್ಣರವರು.  ವಿಜಯೇಂದ್ರಗೆ ಮೊದಲು ಮಂಪರು ಪರೀಕ್ಷೆ ಮಾಡಿಸಬೇಕು. ಇವರು ಎಷ್ಟು ಹಣ ತಿಂದಿದ್ದಾರೆ ಎಂದು ಮಂಪರು ಪರೀಕ್ಷೆ ಮಾಡಬೇಕು. ನಾವು ಹರಿಪ್ರಸಾದ್ ಗೆ ಮಂಪರು ಪರೀಕ್ಷೆ ಮಾಡಿಸುತ್ತೀವಿ ನೀವು ರೆಡಿ ಇದ್ದೀರಾ. 40 ಸಾವಿರ ಕೋಟಿ ಹಣ ಸಂಬಂಧ ಇವರು ಪರೀಕ್ಷೆ ಮಾಡಿಸಿ ಕೊಳ್ತಾರಾ ಎಂದು ಸವಾಲು ಹಾಕಿದ್ದಾರೆ. 

Share This Article