ಜಸ್ಟ್‌ ಎರಡು ಅಂಕದಲ್ಲಿ ಬದಲಾಯ್ತು Rank | ಶಿವಮೊಗ್ಗದ ಸಿಂಚನಾಗೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ

Rank changed by just two points, sinchana gets fourth place in state , karnataka examination authority,2nd puc result 2024

ಜಸ್ಟ್‌ ಎರಡು ಅಂಕದಲ್ಲಿ ಬದಲಾಯ್ತು Rank |  ಶಿವಮೊಗ್ಗದ ಸಿಂಚನಾಗೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ
karnataka examination authority,2nd puc result 2024

SHIVAMOGGA | MALENADUTODAY NEWS | Apr 27, 2024  

ದ್ವಿತೀಯ ಪಿಯುಸಿ ಪರೀಕ್ಷೆಯ ರಿಸಲ್ಟ್‌ನಲ್ಲಿ ಶಿವಮೊಗ್ಗಕ್ಕೆ ಹೆಮ್ಮೆ ತಂದ ವಿದ್ಯಾರ್ಥಿಗಳ ಬಗ್ಗೆ ಮಲೆನಾಡು ಟುಡೆಯಲ್ಲಿ ಓದಿರುತ್ತೀರಿ. ಇದೀಗ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಪರೀಕ್ಷೆಯಲ್ಲಿ ಬಂದಿದ್ದ ಅಂಕವನ್ನು ಮರು ಮೌಲ್ಯಮಾಪನಕ್ಕೆ ಕೋರಿದ್ದ ವಿದ್ಯಾರ್ಥಿನಿಯೊಬ್ಬರ ಫಲಿತಾಂಶ ಹೊರಬಿದ್ದಿದ್ದು, ವಿದ್ಯಾರ್ಥಿನಿಯು ರಾಜ್ಯಕ್ಕೆ ನಾಲ್ಕನೆ ರ್ಯಾಂಕ್‌ ಪಡೆದುಕೊಂಡಿದ್ದಾಳೆ. 

ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ಇಲ್ಲಿನ ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನ ಹೆಚ್ ಎಂ 600ಕ್ಕೆ 593 ಅಂಕಗಳಿಸಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾರೆ. ಇವರು ಶಿವಮೊಗ್ಗದ ಶಿಕ್ಷಕಿ ವಾಣಿ ಆರ್ ಜೇ ಹಾಗೂ ದಿ|| ಹಾಲೇಶ್ ಎನ್ ದಂಪತಿ ಪುತ್ರಿ. ಈಕೆ  ಎಸೆಸೆಲ್ಸಿ ಯಲ್ಲಿ ಶೇ. 92.3 ಅಂಕ ಪಡೆದಿದ್ದರು. 

ಈ ಮೊದಲು ಹೊರಬಿದ್ದ ರಿಸಲ್ಟ್‌ ನಲ್ಲಿ ಸಿಂಚನಾರಿಗೆ  600 ಕ್ಕೆ 591 ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6 ನೇ ರ‍್ಯಾಂಕ್‌ ಪಡೆದಿದ್ದರು. ಬಳಿಕ ಇತಿಹಾಸ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೇ ಹಾಕಿದ್ದರು. ಮರು ಮೌಲ್ಯಮಾಪನದ ಫಲಿತಾಂಶ ಹೊರಬಿದ್ದಿದ್ದು, ಇನ್ನೆರಡು ಅಂಕ ಹೆಚ್ಚಿಗೆ ಪಡೆದಿದ್ದಾರೆ.ಒಟ್ಟು 593 ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್‌ ಆಗಿ ಹೊರಹೊಮ್ಮಿದ್ದಾರೆ