ಶಿವಮೊಗ್ಗ ಚುನಾವಣೆ ದೊಡ್ಡ ಸುದ್ದಿ | ಪುರುಷರು, ಮಹಿಳೆಯರು | ಹೆಚ್ಚು ವೋಟು ಹಾಕಿದ್ಯಾರು ಗೊತ್ತಾ?

Shimoga election big news Men, Women | Do you know who voted more? . Shimoga Lok Sabha Election Statistics, Shimoga Lok Sabha Election, Byndur, Shimoga Rural, Shimoga, Bhadravathi, Shikaripura, Soraba, Sagar,

ಶಿವಮೊಗ್ಗ ಚುನಾವಣೆ ದೊಡ್ಡ ಸುದ್ದಿ | ಪುರುಷರು, ಮಹಿಳೆಯರು | ಹೆಚ್ಚು  ವೋಟು ಹಾಕಿದ್ಯಾರು ಗೊತ್ತಾ?
Shimoga election big news ,Shimoga Lok Sabha Election Statistics, Shimoga Lok Sabha Election, Byndur, Shimoga Rural, Shimoga, Bhadravathi, Shikaripura, Soraba, Sagar,

SHIVAMOGGA | MALENADUTODAY NEWS | May 8, 2024  

 

ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತ್ತೊಂದು ದೊಡ್ಡ ಮಾಹಿತಿ ಲಭ್ಯವಾಗಿದೆ. ಚುನಾವಣಾ ಆಯೋಗ ವಾರ್ತಾ ಇಲಾಖೆ ಮೂಲಕ ನೀಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಒಟ್ಟಾರೆ ಮತದಾನದ ಅಂಕಿ ಅಂಶಗಳಲ್ಲಿ ಮಹಿಳೆಯರೇ ಹೆಚ್ಚು ಮತದಾನ ಮಾಡಿರುವ ಬಗ್ಗೆ ತಿಳಿದು ಬಂದಿದೆ. 

ಇವತ್ತು ಲಭ್ಯವಾದ ಮಾಹಿತಿ ಪ್ರಕಾರ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ  78.33 % ರಷ್ಟು ಮತದಾನವಾಗಿದ್ದು  8,90,061 ಮಹಿಳಾ ಮತದಾರರ ಪೈಕಿ 6,92,402 ಮಹಿಳೆಯರು ಮತ ಚಲಾಯಿಸಿದ್ದಾರೆ. ಒಟ್ಟಾರೆ  8,62,789. ಮತಗಳನ್ನು ಹೊಂದಿರುವ ಪುರುಷರ ಪೈಕಿ ಅಂತಿಮವಾಗಿ  6,80,534 ಪುರುಷರ ಮತದಾನ ಮಾಡಿದ್ದಾರೆ. 

ಇನ್ನೂ ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ, ಬೈಂದೂರಿನಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚು ವೋಟ್‌ ಮಾಡಿದ್ದಾರೆ. ಇತ್ತ ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸೊರಬದಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಸಾಗರ ಕ್ಷೇತ್ರದಲ್ಲಿ ಪುರುಷರು ಹಾಗೂ ಮಹಿಳೆಯರು ಬಹುತೇಕ ಒಂದೆ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. 



ಅಸೆಂಬ್ಲಿ ಕ್ಷೇತ್ರ

ಪುರುಷರು

ಮಹಿಳೆಯರು

ಇತರರು

ಒಟ್ಟು ಮತದಾನ

ಶೇಕಡಾವಾರು

111- ಶಿವಮೊಗ್ಗ ಗ್ರಾಮಾಂತರ

92172

90683

2

182857

83.66

112-ಭದ್ರಾವತಿ

76395

79484

1

155880

71.89

113- ಶಿವಮೊಗ್ಗ

95147

97134

7

192288

70.2

114- ತೀರ್ಥಹಳ್ಳಿ

78181

79075

0

157256

82.24

115- ಶಿಕಾರಿಪುರ

85748

82862

0

168610

82.64

116- ಸೊರಬ

83145

80583

0

163728

82.82

117- ಸಾಗರ

84393

84180

0

168573

80.24

118-ಬೈಂದೂರು

85353

98401

3

183757

76.41

ಮೊತ್ತ

680534

692402

13

1372949

78.33