ಹುಣಸೋಡು ಸ್ಫೋಟದ ವಿಚಾರಕ್ಕೆ ಕೈ ಹಾಕಿದ ಮಧು ಬಂಗಾರಪ್ಪ! ಯಾರ ವಿರುದ್ಧ ತನಿಖಾಸ್ತ್ರ?

Malenadu Today

KARNATAKA NEWS/ ONLINE / Malenadu today/ Sep 17, 2023 SHIVAMOGGA NEWS

ಸಚಿವ ಮಧು ಬಂಗಾರಪ್ಪ, ಪ್ರಗತಿ ಪರಿಶಿಲನೆ ಸಭೆಯಲ್ಲಿ ಭರ್ಜರಿ ಆಟ ಪ್ರದರ್ಶನ ಮಾಡಿದ್ದಾರೆ. ಅಧಿಕಾರಿಗಳ ತಪ್ಪುಗಳನ್ನ ಪ್ರಶ್ನಿಸುವುದರ ಜೊತೆ ಬಿಜೆಪಿ ಅವಧಿಯಲ್ಲಿ ನಡೆದಿದ್ದ ಘಟನೆಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಈ ಸಂಬಂಧ ಸಿಎಂ ಜೊತೆ ಮಾತನಾಡಲು ತೀರ್ಮಾನಿಸಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಾವೆಲ್ಲಾ ವಿಚಾರಗಳು ತನಿಖೆಯ ಹಾದಿಯಲ್ಲಿ ಕೇಳಿ ಬಂತು ಎಂಬುದನ್ನ ನೋಡುವುದಾದರೆ,

ಸ್ಮಾರ್ಟ್​ ಸಿಟಿ ಕಾಮಗಾರಿ ತನಿಖೆ

ಶಿವಮೊಗ್ಗ ನಗರದಲ್ಲಿ ಸ್ಮಾಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ಷೇಪಣೆ ಕೇಳಿ ಬಂದಿದೆ. ಈ ಕಾರಣಕ್ಕೆ ನಿನ್ನೆ ಸಚಿವ ಮಧು ಬಂಗಾರಪ್ಪ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ನಿನ್ನೆ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ಸರಿಯಾಗಿದ್ದಲ್ಲಿ ಮಾತ್ರ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಿ ಎಂದು ಸ್ಮಾರ್ಟ್​ ಸಿಟಿ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ. 

ಸ್ಟಾರ್ಟ್‌ಸಿಟಿ ಯೋಜನೆ, ಪ್ರವಾಸೋದ್ಯಮ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿದ್ಯುತ್ ಹಾಗೂ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಗಳ ಪ್ರಗತಿ ಸಭೆಯಲ್ಲಿ ಪಾಲ್ಗೊಂಡ ಮಧು ಬಂಗಾರಪ್ಪ    ಎಲ್ಲಾ ಕಾಮಗಾರಿಗಳ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಹಾಗೂ ಸ್ಟಾರ್ಟ್ ಸಿಟಿ ವ್ಯವಸ್ಥಾಪಕ ಮಾಯಣ್ಣಗೌಡ ಅವರಿಗೆ ಸೂಚಿಸಿದರು.

ಮುದ್ದಣ್ಣನ ಕೆರೆ ಮಣ್ಣು ಅಗೆದವರ ಹೆಸರೇನು?

ಇನ್ನೂ ಇದೇ ವೇಳೆ  ಮುದ್ದಣ್ಣನ ಕೆರೆ ಮಣ್ಣು ಬಗೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಇದರ ಹಿಂದೆ ಇರುವ ಕಾಣದ ಕೈಗಳ ಕೈವಾಡವಿದೆ. ಇದನ್ನು ಕ್ಯಾಬಿನೇಟ್ ನಲ್ಲಿ ಚರ್ಚೆ ತರುತ್ತೇನೆ. ನನಗೆ ಮಾಹಿತಿ ಹೈಡ್ ಮಾಡುತ್ತಿದ್ದಾರೆ. ಆದ್ರೆ ನಾನು ಇಂತಹ ವಿಷಯಗಳಲ್ಲಿ ಡೀಪ್ ಆಗಿ ಹೋಗುತ್ತೇನೆ ಎಂದು ಮಧು ಬಂಗಾರಪ್ಪರವರು ಎಚ್ಚರಿಸಿದ್ರು. 

ಮುದ್ದಣ್ಣನ ಕೆರೆಯಲ್ಲಿ ಮಣ್ಣು ಎತ್ತಿರುವ ವಿಚಾರವನ್ನು ಸಚಿವರು ಗಂಭೀರವಾಗಿ ಪರಿಗಣಿಸಿದರೂ ಅಧಿಕಾರಿಗಳು ಸಚಿವರ ಪ್ರಶ್ನೆಗೆ ಉತ್ತರಿಸಲಿಲ್ಲ. ಈ ಮಧ್ಯೆ ಅಧಿಕಾರಿಯೊಬ್ಬರು  ಕೆರೆ ಮಣ್ಣು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಲೇಔಟ್ ಗೆ ಸರಬರಾಜು ಆಗಿದೆ. ಈ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ. ಸರ್ಕಾರಿ ಅಧಿಕಾರಿಯಿಂದ ನಿಯಮ ಉಲ್ಲಂಘನೆಯಾಗಿದೆ ಎಂದಾಗ. ಅಧಿಕಾರಿಯೊಬ್ವರು ಕೆಲವರ ಹೆಸರುಗಳನ್ನು ಹೇಳುವುದು ಕಷ್ಟವಾಗುತ್ತದೆ ಎಂದಾಗ ಮಧು ಬಂಗಾರಪ್ಪ ಅಚ್ಚರಿಗೊಂಡರು. ಅದನ್ನು ಕಡತದಲ್ಲಿ ದಾಖಲಿಸುವಂತೆ ಸೂಚಿಸಿದರು.

ಮತ್ತೆ ನೆನಪಾಯ್ತು ಹುಣಸೋಡು ಸ್ಫೋಟ

ಇನ್ನೂ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಸಂಭವಿಸಿದ್ದ ಹುಣಸೋಡು ಸ್ಪೋಟ ಪ್ರಕರಣದಲ್ಲಿ ಯಾರ ತಲೆದಂಡವೂ ಆಗಿರಲಿಲ್ಲ. ಈ ವಿಚಾರದಲ್ಲಿ ಇದೀಗ ಮಧು ಬಂಗಾರಪ್ಪ ಆಸಕ್ತಿ ತೋರಿದ್ದು, ಮತ್ತೆ ತನಿಖೆಗೆ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಆರು ಮಂದಿ ಸಾವನ್ನಪ್ಪಿದೆ ಎನ್ನಲಾಗಿದೆಯಾದರೂ ಇನ್ನೊಬ್ಬನ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ. ಆತನ ಶವವನ್ನು ಸ್ಫೋಟದ ರಭಸಕ್ಕೆ ಮಾಯವಾಗಿದೆ ಎಂದು ಉಲ್ಲೇಖಿಸಿಲಾಗಿದೆ.ಇನ್ನೂ ಪ್ರಕರಣದಲ್ಲಿ ಯಾವೊಬ್ಬ ಅಧಿಕಾರಿಯ ವಿರುದ್ಧವೂ ಕ್ರಮ ಕೈಗೊಳ್ಳಲಾಗಿರಲಿಲ್ಲ. ಸದ್ಯ ಈ ವಿಚಾರವೂ ಮಧು ಬಂಗಾರಪ್ಪರವರ ಗಮನ ಸೆಳೆದಿದೆ. 


ಇನ್ನಷ್ಟು ಸುದ್ದಿಗಳು 

 

 


 

 

Share This Article