ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ

A friendly meeting was held in Shimoga under the leadership of the minister in charge of the celebration of festivalsಶಿವಮೊಗ್ಗದಲ್ಲಿ ಹಬ್ಬಗಳ ಆಚರಣೆ ಸಂಬಂಧ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸೌಹಾರ್ದ ಸಭೆ ನಡೆಯಿತು

ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

ಈ ಸಲ ಗಣೇಶೋತ್ಸವದ ಮೆರವಣಿಗೆ ಹಾಗೂ ಈದ್ ಮಿಲಾದ್ ಒಂದೇ ದಿನ ಬರುವ ಸಾಧ್ಯತೆ ಇರುವುದರಿಂದ ಹಿಂದೆಂದಿಗಿಂತಲೂ ಹೆಚ್ಚುವರಿ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಿಕೊಳ್ತಿದೆ. ಪೊಲೀಸ್ ಇಲಾಖೆಯ ಪರಿಶ್ರಮಕ್ಕೆ ಸಾಥ್ ನೀಡುತ್ತಿರುವ ಜಿಲ್ಲಾಡಳಿತ ಮೇಲ್ವಿಚಾರಣೆ ನಡೆಸ್ತಿದೆ. ಇನ್ನೂ ಇದಕ್ಕೆ ಪೂರಕವಾಗಿ ಇವತ್ತು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮಧು ಬಂಗಾರಪ್ಪರವರ ನೇತೃತ್ವದಲ್ಲಿ ಹಬ್ಬಗಳ ಆಚರಣೆ ಸಂಬಂಧ ಸೌಹಾರ್ಧ ಸಭೆ ನಡೆಯಿತು. 

ಶಿವಮೊಗ್ಗ ನಗರ ಶಾಸಕರು ಹೇಳಿದ್ದೇನು?

ಸಭೆಯಲ್ಲಿ ಮಾತನಾಡಿದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎನ್.ಚನ್ನಬಸಪ್ಪರವರು, ಹಬ್ಬಗಳು ಬರುವುದು ಸಂತೋಷ ಹಾಗೂ ಸಂಭ್ರಮ ಪಡುವ ಸಲುವಾಗಿ, ಇಂತಹ ಸಂಭ್ರಮವನ್ನು ಒಟ್ಟಾಗಿ ಆಚರಿಸುವ ಅವಕಾಶ ಈಗ ಸಿಕ್ಕಿದೆ. ಸಮನ್ವಯತೆ ಸಮಬಾಳ್ವೆ ಎಂದು ಮಾತಲ್ಲಿ ಹೇಳುತ್ತೇವೆ. ಅದನ್ನು ಆಚರಣೆಗೆ ತರಲು ದೇವರೇ ಒಂದು ಅವಕಾಶ ನಿಡಿದ್ದು, ಒಟ್ಟಾಗಿ ಹಬ್ಬ ಮಾಡೋಣ ಎಂದು ಕರೆಕೊಟ್ಟರು. 

ಸಚಿವರು ಕೊಟ್ಟ ಸೂಚನೆ ಏನು?

ಇನ್ನೂ ಸಭೆಯ ನೇತೃತ್ವ ವಹಿಸಿದ್ದ ಸಚಿವ ಮಧು ಬಂಗಾರಪ್ಪರವರು ಎರಡು ಹಬ್ಬಕ್ಕೆ ತೊಂದರೆಯಾಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ. ಸಂಭ್ರಮದಿಂದ ಹಬ್ಬ ಆಚರಿಸೋಣ, ಜಿಲ್ಲೆಗೆ ಗೌರವ ತರೋಣ ಎಂದು ಸಲಹೆ ನೀಡಿದರು. ಅಲ್ಲದೆ ಹಬ್ಬದಲ್ಲಿ ಖುದ್ಧಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಎಸ್​ಪಿ ಮಿಥುನ್ ಕುಮಾರ್​ ಹೇಳಿದ್ದೇನು?

ಸಭೆಯಲ್ಲಿ ಮಾತನಾಡಿದ ಎಸ್​ಪಿ ಮಿಥುನ್ ಕುಮಾರ್, ಹಬ್ಬಗಳ ಹಿನ್ನೆಲೆ  40-50 ದಿನದಿಂದ ಸಿದ್ದತೆ ಮಾಡಿಕೊಂಡಿದ್ದೇವೆ. ಹಬ್ಬಗಳ ಸಂದರ್ಭ ಕಿಡಿಗೇಡಿಗಳು ಸಮಸ್ಯೆ ಮಾಡಲು ಮುಂದಾದರೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು 

ಇನ್ನಷ್ಟು ಸುದ್ದಿಗಳು