ಈಶ್ವರಪ್ಪನವರ ಪರ ಪ್ರಚಾರಕ್ಕೆ ಕರೆದವರ ಮೇಲೆ ಹಲ್ಲೆ , ಬೆದರಿಕೆ | ಇಬ್ಬರು ಮಹಿಳೆ ಸೇರಿ ನಾಲ್ವರ ವಿರುದ್ಧ FIR

Assault, threat on those who were called to campaign for Eshwarappa FIR against four including two women , KS Eshwarappa, Doddapete Police Station, Kamakshi Street

ಈಶ್ವರಪ್ಪನವರ ಪರ ಪ್ರಚಾರಕ್ಕೆ ಕರೆದವರ ಮೇಲೆ ಹಲ್ಲೆ , ಬೆದರಿಕೆ | ಇಬ್ಬರು ಮಹಿಳೆ ಸೇರಿ ನಾಲ್ವರ ವಿರುದ್ಧ FIR
KS Eshwarappa, Doddapete Police Station, Kamakshi Street

SHIVAMOGGA | MALENADUTODAY NEWS | Apr 24, 2024 | KS Eshwarappa, Doddapete Police Station, Kamakshi Street   

ಶಿವಮೊಗ್ಗದಲ್ಲಿ ಕೆಎಸ್‌ ಈಶ್ವರಪ್ಪ ನವರ ಪರ ಪ್ರಚಾರಕ್ಕೆ ಬಂದವರನ್ನ ನಿಂಧಿಸಿ ಹಲ್ಲೆ ಮಾಡಿದ ಆರೋಪ ಸಂಬಂಧ ಐಪಿಸಿ : IPC 1860 (U/s-504,506,323,34) ಅಡಿಯಲ್ಲಿ  ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. 

ಏನಿದು ಪ್ರಕರಣ? 

ಕಳೆದ 20 ನೇ ತಾರೀಖು ಕಾಮಾಕ್ಷಿ ಬೀದಿಯಲ್ಲಿ ಈಶ್ವರಪ್ಪನವರ ಪರ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಜನರನ್ನ ಸಂಘಟಿಸಬೇಕಿತ್ತು. ಈ ಜವಾಬ್ದಾರಿಯನ್ನ ಓರ್ವ ದಂಪತಿ ಹೊತ್ತಿದ್ದಾರೆ. ತಮ್ಮ ಜವಾಬ್ದಾರಿಯಂತೆ ಕಾಮಾಕ್ಷಿ ಬೀದಿಯಲ್ಲಿ ಜನರನ್ನ ಆಯೋಜಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಮನೆಮನೆಗೆ ತೆರಳಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕೇರಿಯ ಮಹಿಳೆಯೊಬ್ಬರು ಆಕ್ಷೇಪ ಎತ್ತಿದ್ದಾರೆ. ನಮ್ಮ ಮನೆಯ ಬಳಿ ಬಂದು ಈಶ್ವರಪ್ಪನವರ ಪರ ಏಕೆ ಪ್ರಚಾರ ಮಾಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಹಲ್ಲೆ ಮಾಡಿ, ನಿಂದಿಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಕೇಸ್‌ನ ತನಿಖೆ ನಡೆಸ್ತಿದ್ದಾರೆ.