ಶಾಹಿ ಗಾರ್ಮೆಂಟ್ಸ್‌ನಲ್ಲಿ ಅಣ್ಣಾ..ಅಣ್ಣಾ..ಶಿವಣ್ಣ | ಸೆಲ್ಪಿಗೆ ಮುಗಿಬಿದ್ದ ತಂಗಿಯರು |ಹೇಗಿತ್ತು ಇವತ್ತಿನ ಪ್ರಚಾರ

Anna..Anna..Shivanna at | How was today's campaign?

ಶಾಹಿ ಗಾರ್ಮೆಂಟ್ಸ್‌ನಲ್ಲಿ ಅಣ್ಣಾ..ಅಣ್ಣಾ..ಶಿವಣ್ಣ | ಸೆಲ್ಪಿಗೆ ಮುಗಿಬಿದ್ದ ತಂಗಿಯರು |ಹೇಗಿತ್ತು ಇವತ್ತಿನ ಪ್ರಚಾರ

SHIVAMOGGA | MALENADUTODAY NEWS | Apr 24, 2024  

ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಪ್ರಚಾರದ ರೀತಿ ಸಹ ಬದಲಾಗುತ್ತಿದೆ. ಪ್ರತಿಯೊಬ್ಬ ಅಭ್ಯರ್ಥಿಗಳು ತಮ್ಮದೆ ಆದ ಸ್ಟೈಲ್‌ನಲ್ಲಿ ಮತದಾರರನ್ನ ಹುಡುಕಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇವತ್ತು ಗೀತಾ ಶಿವರಾಜಕುಮಾರ್‌, ಶಿವಣ್ಣರ ಜೊತೆಯಲ್ಲಿ ಗಾರ್ಮೆಂಟ್ಸ್‌ ಕಾರ್ಖಾನೆಗೆ ಭೇಟಿಕೊಟ್ಟಿದ್ದರು. 

ತಮ್ಮನ್ನ ಭೇಟಿಯಾಗಲು ತಾವು ಕೆಲಸ ಮಾಡುವ ಗಾರ್ಮೆಂಟ್ಸ್‌ಗೆ ಶಿವಣ್ಣ ಬರುತ್ತಾರೆ ಅಂದರೆ ಏನು ಸುಮ್ಮನೇನಾ? ಮಹಿಳಾ ಕಾರ್ಮಿಕರೆಲ್ಲಾ ಶಿವಣ್ಣರನ್ನ ನೋಡಲೆಂದೆ ಕಾಯುತ್ತಿದ್ದರು. ಬಿ.ಎಸ್.ರಸ್ತೆಯಲ್ಲಿರುವ ಶಾಹಿ ಎಕ್ಸ್ ಪೋರ್ಟ್ ಪ್ರವೈಟ್ ಲಿಮಿಟೆಡ್ (ಶಾಹಿ ಗಾರ್ಮೆಂಟ್ಸ್) ಗೆ ಗೀತಾ ಹಾಗೂ ಶಿವರಾಜಕುಮಾರ್‌ ಭೇಟಿನೀಡುತ್ತಲೇ ಅಲ್ಲಿದ್ದ ಕಾರ್ಮಿಕರೆಲ್ಲಾ ಅವರನ್ನ ನೋಡಲು ಮುಗಿಬಿದ್ದರು.

shivanna



ನಮಸ್ತೆ, ನಮಸ್ಕಾರ ಶಿವಣ್ಣ ಅಂತಾ ಮಾತನಾಡಿಸ್ತಿದ್ದ ಮಹಿಳೆಯರು ಅಣ್ಣಾ ಒಂದು ಸೆಲ್ಫಿ ಎಂದು ಮುಗಿಬಿದ್ದರು. ಅವರ ಕಣ್ಣುಗಳಲ್ಲಿ ನಟನೊಬ್ಬನನ್ನ ಹತ್ತಿರದಿಂದ ನೋಡಿ ಮಾತಾಡಿಸಿದ ಖುಷಿಯವರಲ್ಲಿ ಕಾಣಿಸುತ್ತಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಮತಯಾಚನೆಗೆ ದಂಪತಿ ಬಂದಿದ್ದರೂ ಸಹ ಅಲ್ಲಿದ್ದವರು ಮಾತ್ರ ಶಿವಣ್ಣ ತಮ್ಮನ್ನೆ ನೋಡೋಕೆ ಬಂದಿದ್ದಾರೆ ಅಂತಾ ಅವರೊಂದಿಗೆ ಹರಟುತ್ತಾ, ಪ್ರಶ್ನಿಸುತ್ತಾ, ಕಿಚಾಯಿಸುತ್ತಾ ಮಹಿಳೆಯರು ಸಮಯ ಕಳೆದರು. 

shivanna

ಇನ್ನೂ ಇವತ್ತು ಗಾರ್ಮೆಂಟ್ಸ್‌ ಅಷ್ಟೆ ಅಲ್ಲದೆ ತಾಲ್ಲೂಕಿನ ಸಿದ್ಲೀಪುರ, ಸನ್ಯಾಸಿ ಕೊಡಮಗ್ಗಿ, ಮುಂಗೋಟೆ, ಆನವೇರಿ, ನಿಂಬೆಗೊಂದಿ, ಸೈದರ ಕಲ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೀತಾ ಹಾಗೂ ಶಿವರಾಜ್‌ ಕುಮಾರ್‌ ಪ್ರಚಾರ ನಡೆಸಿದರು