ಅಗೋಚರ ಮತಗಳಲ್ಲಿದೆ ಚುನಾವಣೆ ಭವಿಷ್ಯ | 3 ಪಕ್ಷಗಳಲ್ಲೂ ಸೀಕ್ರೆಟ್‌ ವೋಟ್ |‌ ಕೆ ಎಸ್‌ ಈಶ್ವರಪ್ಪ ಹೀಗೆ ಹೇಳಿದ್ದೇಕೆ ? |‌

The future of elections lies in invisible votes Why did KS Eshwarappa say that? | Last Word, KS Eshwarappa, Shikaripura, Invisible Votes, Shimoga Election, Malenadu Today Election News

ಅಗೋಚರ ಮತಗಳಲ್ಲಿದೆ ಚುನಾವಣೆ ಭವಿಷ್ಯ | 3 ಪಕ್ಷಗಳಲ್ಲೂ  ಸೀಕ್ರೆಟ್‌ ವೋಟ್ |‌ ಕೆ ಎಸ್‌ ಈಶ್ವರಪ್ಪ ಹೀಗೆ ಹೇಳಿದ್ದೇಕೆ ? |‌
KS Eshwarappa, Shikaripura, Invisible Votes, Shimoga Election, Malenadu Today Election News

SHIVAMOGGA | MALENADUTODAY NEWS | May 5, 2024 

ಶಿವಮೊಗ್ಗ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆಗೆ ಮುಕ್ತಾಯಗೊಳ್ಳಲಿದೆ. ಈ ನಿಟ್ಟಿನಲ್ಲಿ ಪಕ್ಷೇತರ ಅಭ್ಯರ್ಥಿ ಕೆಎಸ್‌ ಈಶ್ವರಪ್ಪನವರು ಕೊನೆಯ ಹಂತದ ಪ್ರಚಾರದಲ್ಲಿ ನಿರತರಾಗಿದ್ದಾರೆ. ನಿನ್ನೆಯಷ್ಟೆ ವಿಜಯದ ಕಡೆಗೆ ನಡಿಗೆ ಕೈಗೊಂಡ ಅವರು ಈ ಚುನಾವಣೆಯಲ್ಲಿ ನಾನು ನೂರಕ್ಕೂ ನೂರು ಗೆಲ್ಲುತ್ತೇನೆ ಎಂದಿದ್ದಾರೆ. 

ಜೂ.4ರಂದು ನನ್ನ ಪರವಾಗಿ ಫಲಿತಾಂಶ ಬರುತ್ತದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಅವರು,  ಯಾರಿಗೆ ಮತ ಕೊಡಬೇಕು ಎಂದು ಗೊಂದಲದಲ್ಲಿದ್ದವರು ನನ್ನ ಬೆಂಬಲಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಜನ ಬರುತ್ತಿರುವುದನ್ನು ಕಂಡು ಖಂಡಿತವಾಗಿಯೂ ನನಗೇ ವೋಟ್‌ ಹಾಕುತ್ತಾರೆ ಎಂದರು.

ನನ್ನನ್ನು ಸೋಲಿಸಲು ನನ್ನ ಹೆಸರಿನ ಇನ್ನೊಬ್ಬ ವ್ಯಕ್ತಿಯನ್ನು ನಿಲ್ಲಿಸಿದ್ದಾರೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಜೊತೆಗೆ ಈಶ್ವರಪ್ಪ ಎಂದರೆ ಬಿಜೆಪಿ, ಕಮಲ ಅವರ ಗುರುತು ಎಂಬ ಭಾವನೆ ಇನ್ನೂ ಅನೇಕರಲ್ಲಿದೆ. ಹೀಗಾಗಿ ಈ ಚುನಾವಣೆಯಲ್ಲಿ ಈಶ್ವರಪ್ಪ ಅವರದು ಕಮಲ ಗುರುತಲ್ಲ. ಅವರದ್ದು  ಕಬ್ಬಿನ ಜಲ್ಲೆ ಜೊತೆ ನಿಂತ ರೈತ ಚಿಹ್ನೆ ಎಂದು ಮತದಾರರಿಗೆ ಸ್ಪಷ್ಟವಾಗಿ ತಿಳಿಸಿ ಮತಹಾಕಿಸಬೇಕು ಎಂದು ತಿಳಿಸಿದರು. 

ಇನ್ನೂ ಸಾಗರದಲ್ಲಿ  ನಡೆದ ಮತಪ್ರಚಾರದಲ್ಲಿ ಮಾತನಾಡಿದ ಕೆಎಸ್‌ ಈಶ್ವರಪ್ಪ  ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರೂ ಎರಡೂ ಪಕ್ಷದವರೂ ನನ್ನ ಬೆಂಬಲಕ್ಕೆ ಪರೋಕ್ಷವಾಗಿ ನಿಂತಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿಯು ಒಂದು ಬಣ ನನ್ನನ್ನು ಬೆಂಬಲಿಸುತ್ತಿದೆ. ಚುನಾವಣೆಯಲ್ಲಿ ಅದೃಶ್ಯ ಮತದಾರರು ನನ್ನ ಕೈ ಹಿಡಿಯಲಿದ್ದು, ಗೆಲುವು ನಿಶ್ಚಿತ ಎಂದಿದ್ದಾರೆ.