ಶಿವಮೊಗ್ಗ ಏನಾಗುತ್ತೆ ? | ಬಿಎಸ್‌ವೈ ಹೇಳಿದ ಭವಿಷ್ಯವೇನು? | ಈಶ್ವರಪ್ಪರ ಬಗ್ಗೆ ಕೊನೆಯದಾಗಿ ಹೇಳಿದ್ದೇನು? |

What will happen to Shimoga? | What is the prediction of BSY? | What was the last thing said against Eshwarappa? |

ಶಿವಮೊಗ್ಗ ಏನಾಗುತ್ತೆ ? | ಬಿಎಸ್‌ವೈ ಹೇಳಿದ ಭವಿಷ್ಯವೇನು? | ಈಶ್ವರಪ್ಪರ ಬಗ್ಗೆ ಕೊನೆಯದಾಗಿ ಹೇಳಿದ್ದೇನು? |
BS Yeddyurappa, HD Deve Gowda, BY Raghavendra, Shimoga Lok Sabha Constituency, KS Eshwarappa,

SHIVAMOGGA | MALENADUTODAY NEWS | May 5, 2024  

ಶಿವಮೊಗ್ಗದಲ್ಲಿ ಮಾಜಿ ಸಿಎಂ‌ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.  ರಾಜ್ಯದಲ್ಲಿ ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿದಿದೆ , 28 ಲೋಕಸಭಾ ಕ್ಷೇತ್ರದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ಮುಗಿದಿದೆ.14 ಕ್ಷೇತ್ರದಲ್ಲಿ14 ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ.69 % ಮತದಾನ ಆಗಿದೆ, ಮಂಡ್ಯದಲ್ಲಿ ಹೆಚ್ಚು ಮತದಾನ ಆಗಿದೆ.ಇವೆಲ್ಲವೂ ನೋಡಿದಾಗ ಮೋದಿಯವರ ಮೇಲಿನ ಒಳ್ಳೆಯ ಅಭಿಪ್ರಾಯ ಬಗ್ಗೆ ತಿಳಿಯುತ್ತಿದೆ. ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ಮೇ.7 ರಂದು ನಡೆಯುತ್ತಿದೆ, ಮೋದಿಯವರು ಐದು ಸಾರ್ವಜನಿಕ ಸಭೆಯನ್ನ ಉದ್ದೇಶಿಸಿ ಮಾತಾಡಿದ್ದಾರೆ.ಅಮಿತ್ ಷಾ, ಅಣ್ಣಾಮಲೈ ಅವರು ಸಹ ಪ್ರಚಾರ ಮಾಡಿದ್ದಾರೆ. ಸಿದ್ದರಾಮಯ್ಯರವರು ವಿಧಾನ ಸಭಾ ಚುನಾವಣೆ ಗುಂಗಿನಿಂದ ಹೊರಬಂದಿಲ್ಲ. ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದು ಅವರು ಮರೆತಿದ್ದಾರೆ ಎಂದು ವ್ಯಂಗ್ಯವಾಡಿದ್ರು. 

  1. ಜನರನ್ನು ದಾರಿ ತಪ್ಪಿಸಿ ವಿವಾದ ಸೃಷ್ಟಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ನರೇಂದ್ರ ಮೋದಿಯವರ ಹತ್ತು ವರ್ಷದ ಸಾಧನೆ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ. ಆದರೆ ಕಾಂಗ್ರೆಸ್ ಸುಳ್ಳಿನ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ.  ಭಾರತ ವಿಶ್ವದಲ್ಲೇ ಬಲಿಷ್ಠ ದೇಶವಾಗಲಿದೆ. ಇದೇ ನಮ್ಮ ಸಂಕಲ್ಪ, ಬಿಜೆಪಿಯ ಸಂಕಲ್ಪ ಸ್ಪಷ್ಟವಾಗಿದೆ ಎಂದರು. 

  1. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಓಲೈಕೆಯಾಗಿದೆ. ಅದು ಸಂವಿಧಾನದ ವಿರೋಧಿ,ಅಂಬೇಡ್ಕರ್ ವಿರೋದಿ ಪ್ರಣಾಳಿಕೆ ಆಗಿದೆ,  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬಿಸಿ ಅವರಿಗೆ ಕಷ್ಟವಾಗಲಿದೆ ಎಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಳಿದವರ,ದಲಿತರ ಮೀಸಲು ಕಸಿದು ಮುಸ್ಲಿಮರಿಗೆ ಕೊಡುತ್ತದೆ ಎಂದು ದೂರಿದ ಬಿಎಸ್‌ವೈ, ಸರ್ಕಾರ ಎಸ್ಸಿ,ಎಸ್ಟಿ ಅನುದಾನವನ್ನು ನುಂಗಿ ನೀರು ಕುಡಿದಿದೆ ಎಂದಿದ್ದಾರೆ. 

  1. ಪ್ರಧಾನಿ ಯಾರು ಆಗಬೇಕು ಎಂಬುದೇ ಸ್ಪಷ್ಟವಿಲ್ಲದ ಒಕ್ಕೂಟದವರಿಗೆ ಅಧಿಕಾರ ನೀಡಬೇಕೆ ಎಂದು ಪ್ರಶ್ನಿಸಿದ ಬಿಎಸ್‌ವೈ ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನೇಹಾ ಹತ್ಯೆ ಸೇರಿ ಅನೇಕ ಪ್ರಕರಣಗಳು ಜನರಿಗೆ ಆತಂಕ ತಂದಿದೆ. ಪಿಎಫ್ಐ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ ನವರು ಸುಳ್ಳಿನ ಭಾಷಣ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ.ಕೋವಿಡ್ ಲಸಿಕೆ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಕಾಂಗ್ರೆಸ್ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌, ಮಲ್ಲಿಕಾರ್ಜುನ್‌ ಖರ್ಗೆ ಹೀಗೆ ಮೂರು ಬಣವಾಗಿ ಒಡೆದು ಚೂರಾಗಿದೆ ಎಂದರು. 

  1. ಇವತ್ತೆ ಫಲಿತಾಂಶ ಹೇಳುತ್ತಿದ್ದೇನೆ 28 ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ ಎಂದ ಯಡಿಯೂರಪ್ಪರವರು, ಗ್ಯಾರಂಟಿ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ .ಗ್ಯಾರಂಟಿಗಳ ಬಗ್ಗೆ ವಿಶ್ವಾಸ ಇಲ್ಲ ಎಂದರು. ಕಲ್ಪನೆಗೂ ಮೀರಿ ಈ ಬಾರಿ ಶಿವಮೊಗ್ಗದಲ್ಲಿ ಬೆಂಬಲ ಸಿಗುತ್ತಿದೆ, ಮಹಿಳೆಯರೇ ಹೆಚ್ಚು ಬರುತ್ತಿದ್ದಾರೆ ಇದೆ ನಮ್ಮ ಗೆಲುವಿಗೆ ಕಾರಣವಾಗಿದೆ ಎಂದರು. 

  1. ಈಶ್ವರಪ್ಪರವರ ಬಗ್ಗೆ ನಾನು ಏನು ಮಾತಾಡಲ್ಲ, ಹಾಗೆನೇ ಹೆಚ್‌ಡಿ ರೇವಣ್ಣ ಪ್ರಕರಣದಲ್ಲಿ ಕಾನೂನು ಕ್ರಮ ಕೂಗೊಳ್ಳುತ್ತದೆ ಎಂದ ಬಿಎಸ್‌ವೈ  ನಮ್ಮ ಮೈತ್ರಿಯಲ್ಲಿ ಏನು ಬದಲಾವಣೆ ಆಗಲ್ಲ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಬೇಗ ಆರೋಗ್ಯ ಸುಧಾರಿಸಿಕೊಳ್ಳಬೇಕು, ಈ ಘಟನೆಗಳ ಬಗ್ಗೆ ಅವರು ಗಮನಕೊಡದೇ ಆರೋಗ್ಯದ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.