ಬಿಜೆಪಿ ಬಿಎಸ್‌ವೈ ಕುಟುಂಬದಿಂದ ಆಗಬೇಕು ಮುಕ್ತ..ಮುಕ್ತ! ಪ್ರಚಾರ ಆರಂಭಿಸಿದ ಈಶ್ವರಪ್ಪ ಆರಗ ಜ್ಞಾನೇಂದ್ರ ಸಂಧಾನಕ್ಕೆ ಹೇಳಿದ್ದೇನು?

BJP should be free from BSY family What did Eshwarappa say to Araga Jnanendra when he started his campaign?

ಬಿಜೆಪಿ ಬಿಎಸ್‌ವೈ ಕುಟುಂಬದಿಂದ ಆಗಬೇಕು ಮುಕ್ತ..ಮುಕ್ತ!  ಪ್ರಚಾರ ಆರಂಭಿಸಿದ ಈಶ್ವರಪ್ಪ ಆರಗ ಜ್ಞಾನೇಂದ್ರ ಸಂಧಾನಕ್ಕೆ ಹೇಳಿದ್ದೇನು?
Araga Jnanendra, Eshwarappa

shivamogga Mar 17, 2024  ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಕೆಎಸ್‌ ಈ‍ಶ್ವರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ. ಪೂರಕವಾಗಿ ಪ್ರಚಾರವನ್ನು ಆರಂಭಿಸಿರುವ ನಿನ್ನೆ ಸಾಗರ ತಾಲ್ಲೂಕಿಗೆ ಭೇಟಿಕೊಟ್ಟಿದ್ದರು. ಇದರ ನಡುವೆ ಅವರ ಮನೆಗೆ ರಾಜಕಾರಣಿಗಳು ಹಾಗೂ ವಿವಿಧ ಸ್ವಾಮೀಜಿಗಳು ಭೇಟಿ ನೀಡುತ್ತಿದ್ದಾರೆ. ಈ ಪೈಕಿ ಕೆಲವರು ಅವರಿಗೆ ಬೆಂಬಲ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಅವರ ಮನವೊಲಿಕೆ ಪ್ರಯತ್ನಗಳು ಸಹ ಮಾಡುತ್ತಿದ್ದಾರೆ. ಇವತ್ತು ಈ ಸಂಬಂಧ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿಕೊಟ್ಟಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಕೆಎಸ್‌ ಈಶ್ವರಪ್ಪ ಶಿವಮೊಗ್ಗ ದಲ್ಲಿನ ನಮ್ಮ ಕಾರ್ಯಕರ್ತರು ಸಭೆ ಮಾಡಿ ಅಭಿಪ್ರಾಯ ಪಡೆದು ಈ ತೀರ್ಮಾನಕ್ಕೆ ಬಂದಿದ್ದೇನೆ. ಸಭೆ ಅಷ್ಟು ಅದ್ದೂರಿಯಾಗಿ ನಡೆಯುತ್ತೆ ಅಂದುಕೊಂಡಿರಲಿಲ್ಲ, ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಅಂತ ಘೋಷಣೆ ಮಾಡಿದ್ದೇನೆ. ಚುನಾವಣೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ. 

ಆರಗ ಜ್ಞಾನೇಂದ್ರ ಅವರು ಮನೆಗೆ ಬಂದಿದ್ದರು, ಅವರಿಗೆ ಯಾಕೇ ನಾನು ಸ್ಪರ್ಧೆ ಮಾಡುತಿದ್ದೇನೆ ಎಂದು ತಿಳಿಸಿದ್ದೇನೆ. ಹಿಂದೂತ್ವವಾದಿಗಳಿಗೆ ಮೊಸ ಆಗಿದೆ, ಟಿಕೆಟ್ ತಪ್ಪಿಸುವ ಕೆಲಸ ಆಗಿದೆ, ಯಡಿಯೂರಪ್ಪ ನವರ ಕುಟುಂಬದ ಕೈಯಲ್ಲಿ ಪಾರ್ಟಿ ಸಿಲುಕಿಕೊಂಡಿದೆ. ಯಡಿಯೂರಪ್ಪರವರು ಹೇಳಿದ ಹಾಗೆ ವರಿಷ್ಠರು ಕೇಳುತ್ತಿದ್ದಾರೆ ಎಂದು ಆರೋಪಿಸಿದರು. 

ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಗೆದ್ದಿದ್ದು 6 ಸೀಟಷ್ಟೆ, ಆದರೆ ಕೇಂದ್ರದ ನಾಯಕರು ಅಂದುಕೊಂಡಿದ್ದಾರೆ ಯಡಿಯೂರಪ್ಪ ದೊಡ್ಡ ನಾಯಕ ಎಂದುಕೊಂಡಿದ್ದಾರೆ ಎಂದ ಈಶ್ವರಪ್ಪರವರು ಬಸವನಗೌಡ ಪಾಟೀಲ್‌ ಯತ್ನಾಳ್‌ಗೆ ಏಕೆ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿಲ್ಲ ಎಂದು ಪ್ರಶ್ನಿಸಿದ್ರು. 

ಇನ್ನೊಬ್ಬ ಲಿಂಗಾಯತ ನಾಯಕ ಬೆಳೆಯುವುದು ಬಿಎಸ್‌ ಯಡಿಯೂರಪ್ಪನವರಿಗೆ ಇಷ್ಟವಿರಲಿಲ್ಲ ಹಾಗಾಗಿ ಯತ್ನಾಳ್‌ರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿಲ್ಲ. ಇನ್ನೂ ಸಿಟಿ ರವಿ ಸಚಿವ ಸ್ಥಾನ ಬಿಟ್ಟು ಪಕ್ಷ ಸಂಘಟಿಸಿದರು, ಅವರನ್ನ ಬೇಕಾದರೂ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕಿತ್ತು. ಸಿಟಿ ರವಿ ಯಾವುದರಲ್ಲಿ ಕಡಿಮೆ ಇದ್ದರು ಎಂದು ಈಶ್ವರಪ್ಪ ಪ್ರಶ್ನಿಸಿದ್ರು. 

ಲಿಂಗಾಯತರು ಬೇಡ ಒಕ್ಕಲಿಗರು ಬೇಡ ಕೊನೆ ಪಕ್ಷ ನನ್ನ ಯಾಕೇ ರಾಜ್ಯಾಧ್ಯಕ್ಷ ಮಾಡಲಿಲ್ಲ. ಪಕ್ಷ ಹೇಳಿದಾ ಹಾಗೆ ನಾನು ಇಲ್ಲಿಯವರೆಗೆ ಕೇಳಿದ್ದೇನೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಕಪಿಮುಷ್ಠಿಯಿಂದ ಪಕ್ಷವನ್ನು ತಪ್ಪಿಸಲು ಸ್ಪರ್ಧೆ ಮಾಡುತ್ತಿದ್ದೇನೆ. ನೊಂದ ಕಾರ್ಯಕರ್ತರ ಧ್ವನಿಯಾಗಿ ನಾನು ಚುನಾವಣೆ ಸ್ಪರ್ಧಿಸುತ್ತೇನೆ. 

ಯಾರೇ ಬಂದು ಹೇಳಿದರು ನಾನು ಚುನಾವಣೆ ಎದುರಿಸುತ್ತೇನೆ ಎಂದ ಈಶ್ವರಪ್ಪ ಯಡಿಯೂರಪ್ಪ ಹಾಗೂ ಅವರ ಮಕ್ಕಳಿನಿಂದ ಪಕ್ಷ ಮುಕ್ತ ಆಗಬೇಕು.ಹಾಗಾಗಿ ಚುನಾವಣೆ ಸ್ಪರ್ಧೆ ಮಾಡುತ್ತೇನೆ. ಯಡಿಯೂರಪ್ಪ ನೇತೃತ್ವದಲ್ಲಿ ತುಂಬಾ ಸೀಟು ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ ವರಿಷ್ಠರಿಗೆ ಬಿಜೆಪಿಯಲ್ಲಿ ಆಗುತ್ತಿರುವ ಕೆಟ್ಟ ರಾಜಕಾರಣ ಕೇಂದ್ರದ ನಾಯಕರಿಗೆ ಗೊತ್ತಾಗಬೇಕು