ಮತದಾನದ ಸಂದರ್ಭದಲ್ಲಿಯೇ ಡಿಸಿಗೆ ದೂರು ಕೊಟ್ಟ ಕೆಎಸ್‌ ಈಶ್ವರಪ್ಪ | ವಿಡಿಯೋ ಕೇಸ್‌

KS Eshwarappa complained to the DC during the voting Video case

ಮತದಾನದ ಸಂದರ್ಭದಲ್ಲಿಯೇ ಡಿಸಿಗೆ ದೂರು ಕೊಟ್ಟ ಕೆಎಸ್‌ ಈಶ್ವರಪ್ಪ | ವಿಡಿಯೋ ಕೇಸ್‌
Shimoga Lok Sabha Election, KS Eshwarappa

SHIVAMOGGA | MALENADUTODAY NEWS | May 7, 2024  

ಶಿವಮೊಗ್ಗ ಲೋಕಸಭಾ ಚುನಾವಣೆ ಮತದಾನ ದಿನವಾದ ಇಂದು ಪಕ್ಷೇತರ ಅಭ್ಯರ್ಥಿ ಕೆಎಸ್‌ ಈಶ್ವರಪ್ಪ ರವರ ಹಳೆಯ ವಿಡಿಯೋ  ಹಾಗೂ ಅವರು ತಟಸ್ತರಾಗಿದ್ದಾರೆ ಎಂಬಂತಹ ಪೇಪರ್‌ ಕಟಿಂಗ್‌ ರೀತಿಯ ಬರಹ ವೈರಲ್‌ ಆಗಿತ್ತು. 

ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕೆಎಸ್‌ ಈ‍ಶ್ವರಪ್ಪ ನನ್ನ ಗೆಲುವು ಶತಸಿದ್ಧ ಎಂದಿದ್ದರು. ಇದರ ಬೆನ್ನಲ್ಲೆ ವಿಡಿಯೋ ವೈರಲ್‌ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಯವರಿಗೆ ದೂರು ನೀಡಿದ್ದಾರೆ. ಸ್ವತಃ ಕೆಎಸ್‌ ಈಶ್ವರಪ್ಪ ಹಾಗೂ ರಾಷ್ಟ್ರಭಕ್ತ ಬಳಗ ಸದಸ್ಯರು ಜಿಲ್ಲಾಧಿಕಾರಿಗೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಅಲ್ಲದೆ ಈ ಕುರಿತಾಗಿ ಎಸ್‌ಪಿಯವರಿಗೂ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡುವುದಾಗಿ ತಿಳಿಸಿದ್ದಾರೆ. 

ಇನ್ನೂ ಈ ಬಗ್ಗೆ ಮಾತನಾಡಿರುವ ಅವರು ವಾಟ್ಸ್ಯಾಪ್‌ ಮೂಲಕ ಫೇಕ್‌ ವಿಡಿಯೋ ಹರಿಬಿಟ್ಟು ನನ್ನ ವಿರುದ್ಧ ಅಪಪ್ರಚಾರ ಮಾರಲಾಗ್ತಿದೆ. ಸೋಲುವ ಭಯದಿಂದ ಈ ರೀತಿ ಕೃತ್ಯವೆಸಗಲಾಗುತ್ತಿದ್ದು, ಇದರ ವಿರುದ್ದ ಕ್ರಮಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.