ಶಿವಮೊಗ್ಗ | ನಿರ್ಬಂಧದ ನಡುವೆ ವೈರಲ್‌ ಆಯ್ತು ವಿಡಿಯೋ | ಏನ್‌ ಗುರು!

Shimoga | The video went viral amid the ban on mobile phones What Guru!Shimoga Election, Shimoga Lok Sabha Voting, Shimoga Voting.

ಶಿವಮೊಗ್ಗ | ನಿರ್ಬಂಧದ ನಡುವೆ ವೈರಲ್‌ ಆಯ್ತು ವಿಡಿಯೋ |  ಏನ್‌ ಗುರು!
Shimoga Election, Shimoga Lok Sabha Voting, Shimoga Voting.

SHIVAMOGGA | MALENADUTODAY NEWS | May 7, 2024  

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಬಹತೇಕು ಮುಕ್ಕಾಲು ಭಾಗಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಇದರ ನಡುವೆ ನಿಷೇಧವಿದ್ದರೂ ಚಲಾಯಿಸಿದ ವೋಟುಗಳ ವಿಡಿಯೋಗಳು ಹೊರಕ್ಕೆ ಬಂದಿವೆ. ಸದ್ಯ ಈ ಕುರಿತಾದ ಎರಡು ವಿಡಿಯೋಗಳು ವೈರಲ್‌ ಆಗುತ್ತಿವೆ. 

 

ಈ ಪೈಕಿ ಒಂದು ವಿಡಿಯೋ ಭದ್ರಾವತಿಯ ಮತಗಟ್ಟೆಯೊಂದರದ್ದು ಎನ್ನಲಾಗುತ್ತಿದ್ದು ವಿವಿಪ್ಯಾಟ್‌ನಲ್ಲಿ ಯಾರಿಗೆ ವೋಟು ಹಾಕಲಾಗಿದೆ ಎಂಬುದನ್ನ ವಿಡಿಯೋದಲ್ಲಿ ತೋರಿಸಲಾಗುತ್ತಿದೆ. ಅಲ್ಲದೆ ಇವಿಎಂ ಮಷೀನ್‌ನಲ್ಲಿ ಬಟನ್‌ ಒತ್ತಿದ ಬಳಿಕ ಹೊತ್ತಿಕೊಳ್ಳುವ ರೆಡ್‌ ಲೈಟ್‌ ಕೂಡ ಕಾಣುತ್ತಿದೆ. 

 

ಇನ್ನೊಂದು ವಿಡಿಯೋದಲ್ಲಿ ಇತ್ತೀಚೆಗೆ ಅತಿಹೆಚ್ಚು ವೈರಲ್‌ ಅಗಿರುವ ವೋಟು ಹಾಕುವ ದೃಶ್ಯದ ಅಂಶಗಳು ಕಾಣ ಸಿಗುತ್ತಿವೆ. ಯಾರೋ ಒಬ್ಬ ಅಭ್ಯರ್ಥಿಗೆ ವೋಟು ಹಾಕುವಂತೆ ಕೈಯನ್ನು ತೆಗೆದುಕೊಂಡು ಹೋಗಿ ಆನಂತರ ಅಸಭ್ಯವಾಗಿ ಬೆರಳು ತೋರಿಸಿ ಇನ್ನೊಬ್ಬ ಅಭ್ಯರ್ಥಿಗೆ ವೋಟು ಹಾಕುತ್ತಿರುವ ದೃಶ್ಯ ಇದಾಗಿದೆ ಇದೆಲ್ಲಿಯದು ಎಂಬುದು ಗೊತ್ತಾಗಿಲ್ಲ. ಮತಗಟ್ಟೆಯೊಳಗೆ ಮೊಬೈಲ್‌ ನಲ್ಲಿ ಮತದಾನವನ್ನು ಶೂಟ್‌ ಮಾಡಲು ಹೇಗೆ ಸಾಧ್ಯವಾಯ್ತು ಎಂಬುದು ಇದೀಗ ಕುತೂಹಲ ಮೂಡಿಸ್ತಿದೆ.