ಎಲೆಕ್ಷನ್‌ ಮುಗಿದರೂ ತಣ್ಣಗಾಗದ ಕೆಎಸ್‌ ಈಶ್ವರಪ್ಪರ ಆಕ್ರೋಶ | ಬಿವೈಆರ್‌ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು | ಫಲಿತಾಂಶಕ್ಕೆ ತಡೆ?

KS Eshwarappas complaint to Election Commission against BYR An obstacle to the result?

ಎಲೆಕ್ಷನ್‌ ಮುಗಿದರೂ ತಣ್ಣಗಾಗದ ಕೆಎಸ್‌ ಈಶ್ವರಪ್ಪರ ಆಕ್ರೋಶ | ಬಿವೈಆರ್‌ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು | ಫಲಿತಾಂಶಕ್ಕೆ ತಡೆ?
KS Eshwarappa,Election Commission, BYR

SHIVAMOGGA | MALENADUTODAY NEWS | May 15, 2024  ಮಲೆನಾಡು ಟುಡೆ

ಶಿವಮೊಗ್ಗ ಲೋಕಸಭಾ ಚುನಾವಣೆ ಸಂಬಂಧ ಮತ್ತೆ ಕೆಎಸ್‌ ಈಶ್ವರಪ್ಪ ಕೆರಳಿದ್ದಾರೆ. ಚುನಾವಣೆಯಲ್ಲಿ ಆಡಿಯೋ ವಿಡಿಯೋ ರಿಲೀಸ್‌ ಮಾಡಿದ ಆರೋಪ ಸಂಬಂಧ ದೂರು ದಾಖಲಿಸಿರುವ ಅವರು,  ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಮ್ಮ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ. ಅವರ ವಿರುದ್ದ ಕ್ರಮಕೈಗೊಳ್ಳಬೇಕು ಹಾಗೂ ಶಿವಮೊಗ್ಗ ಲೋಕಸಭಾ ಚುನಾವಣೆಯ ಫಲಿತಾಂಶ ತಡೆಹಿಡಿಯಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ  ಬರೆದಿದ್ದಾರೆ. 

ಏನಂದ್ರು ಕೆಎಸ್‌ಇ

ಇನ್ನೂ ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಕೆಎಸ್‌ ಈಶ್ವರಪ್ಪ ಮತದಾನ ಹತ್ತಿರ ಇರುವಾಗ ನಾನು ಎಲೆಕ್ಷನ್‌ ಅಖಾಡದಿಂಧ  ಹಿಂದಕ್ಕೆ ಸರಿದಿರುವುದಾಗಿ ಹೇಳಿ ಆಡಿಯೋ ವಿಡಿಯೋ ಹರಿಬಿಡಲಾಗಿದೆ. ಬಿವೈ ರಾಘವೇಂದ್ರ ಅವರಿಗೆ ಮತ ಚಲಾಯಿಸುವಂತೆ ನಾನೇ ಮನವಿ ಮಾಡಿರುವುದಾಗಿ ನಕಲಿ ವಿಡಿಯೊ ಹರಿ ಬಿಡಲಾಗಿದೆ. ಇದನ್ನು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗವೇ ಹರಿಬಿಟ್ಟಿದೆ ಎಂದು ಆರೋಪಿಸಿದೆ. 2019ರ ಚುನಾವಣೆಯಲ್ಲಿ ಮಾಡಿದ್ದ ಪ್ರಚಾರ ಭಾಷಣವನ್ನು ತಿರುಚಿ ಚುನಾವಣಾ ಹೊತ್ತಿನಲ್ಲಿ ರಿಲೀಸ್‌ ಮಾಡಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧ ಶಿವಮೊಗ್ಗದ ಜಯನಗರ ಪೊಲೀಸ್‌ ಠಾಣೆಯಲ್ಲೂ ದೂರು ದಾಖಲಿಸಿದ್ದೇನೆ. ಇದರ ತನಿಖೆ ಪೂರ್ಣಗೊಳ್ಳುವವರೆಗೆ ಫಲಿತಾಂಶವನ್ನು ತಡೆ ಹಿಡಿಯಬೇಕು ಆಗ್ರಹಿಸಿದ್ರು