ರಣರಂಗದಲ್ಲಿ ಹಿಂಜರಿಯದೆ ನಿಂತ ಕೆ.ಎಸ್‌.ಈಶ್ವರಪ್ಪ | ಬಿಎಸ್‌ ಯಡಿಯೂರಪ್ಪ ಉತ್ತರವೇನು? | ಸಿದ್ದರಾಮಯ್ಯರಿಗೆ ಸವಾಲ್

K. S. Eshwarappa contested in the Lok Sabha elections What is BS Yeddyurappa's answer? |Siddaramaiah

ರಣರಂಗದಲ್ಲಿ ಹಿಂಜರಿಯದೆ ನಿಂತ ಕೆ.ಎಸ್‌.ಈಶ್ವರಪ್ಪ | ಬಿಎಸ್‌ ಯಡಿಯೂರಪ್ಪ  ಉತ್ತರವೇನು?  | ಸಿದ್ದರಾಮಯ್ಯರಿಗೆ ಸವಾಲ್
KS Eshwarappa‌,BS Yeddyurappa,Siddaramaiah

SHIVAMOGGA | MALENADUTODAY NEWS | Apr 22, 2024  

ಶಿವಮೊಗ್ಗದಲ್ಲಿ  ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ನವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆದಾಗ್ಯು ಕೆಎಸ್‌ ಈಶ್ವರಪ್ಪನವರ ವಿಷಯದಲ್ಲಿ ಮಾತ್ರ, ಒಂದೇ ಉತ್ತರ ಕೊಟ್ಟು ಮುಂದೆ ಮಾತನಾಡಲು ನಿರಾಕರಿಸಿದ್ದಾರೆ. 

ಇವತ್ತು ಜಿಲ್ಲೆಗೆ ಬಂದ ಯಡಿಯೂರಪ್ಪರವರನ್ನ ಮಾಧ್ಯಮಗಳು ಮಾತನಾಡಿಸಿದವು. ಈ ವೇಳೆ ಸಿದ್ದರಾಮಯ್ಯರವರು 20 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ನಿಮ್ಮ ಅಭಿಪ್ರಾಯವೇನು ಎಂದು ಬಿಎಸ್‌ವೈರನ್ನ ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ಮಾಜಿ ಸಿಎಂ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇದೆ ಕಾಂಗ್ರೆಸ್ ನಾಯಕರಾಗಿ ಅವರು ಸೋಲುತ್ತೇವೆ ಎಂದು ಹೇಳಲು ಬರುತ್ತದೆಯೇ ಎಂದು ಪ್ರಶ್ನಿಸಿದ್ರು. ಅಲ್ಲದೆ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಗೆಲ್ಲುವ ನಾಲ್ಕು ಕ್ಷೇತ್ರಗಳ ಹೆಸರನ್ನು ಹೇಳಲಿ ಎಂದು ಸವಾಲೆಸೆದರು. ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಯಾರೆಂದು ಹೇಳಲಿ ಎಂದು ಮರುಪ್ರಶ್ನೆ ಹಾಕಿದ ಬಿಎಸ್‌ವೈ ಮುಂದಿನ ಪ್ರಧಾನಿ ಯಾರು ಎಂಬ ಸ್ಪಷ್ಟತೆಯೇ ಅವರಲ್ಲಿ ಇಲ್ಲ ಎಂದರು.  

ಶಿವಮೊಗ್ಗದಲ್ಲಿ ನೂರಕ್ಕೆ 95 ರಷ್ಟು ಅಭಿವೃದ್ಧಿ ಕಾರ್ಯಗಳನ್ನು  ರಾಘವೇಂದ್ರರವರು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ. ಜೊತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆ ಎಲ್ಲೆಡೆ ಹರಡಿದೆ ರಾಜ್ಯದಲ್ಲಿಯು ಮೋದಿ ಪರವಾದ ಅಲೆಯಿದೆ ಎಂದರು.  

ಇನ್ನೂ ಕೆಎಸ್‌ ಈಶ್ವರಪ್ಪ ನಾಮಪತ್ರ ಹಿಂಪಡೆಯದ ವಿಚಾರ ಪ್ರಸ್ತಾಪಿಸಿದಾಗ ನಾನ್ಯಾಕಪ್ಪ ಅದರ ಬಗ್ಗೆ ಪ್ರತಿಕ್ರಿಯೆ ನೀಡಲಿ ಎಂದಷ್ಟೆ ಬಿಎಸ್‌ ಯಡಿಯೂರಪ್ಪ ಉತ್ತರಿಸಿದರು. ಅಲ್ಲದೆ ಆ ಬಗ್ಗೆ ಮುಂದಕ್ಕೆ ಮಾತನಾಡುವುದಿಲ್ಲ ಎಂಬುದನ್ನ ಸಹ ಸೂಚ್ಯವಾಗಿ ತಿಳಿಸಿದರು.  

ಇನ್ನೂ ಹುಬ್ಬಳ್ಳಿ  ನೇಹಾ  ಹಿರೇಮಠರವರ ಕೊಲೆ ಪ್ರಕರಣ ಸಿಓಡಿ ತನಿಖೆಗೆ ವಹಿಸಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸ್ವಾಗತಿಸ್ತೇನೆ ಎಂದ ಬಿಎಸ್‌ ಯಡಿಯೂರಪ್ಪರವರು ಯತೀಂದ್ರ ಸಿದ್ದರಾಮಯ್ಯರವರು ಮೋದಿ ವಿರುದ್ಧ ಟೀಕೆ ಮಾಡಿದ ವಿಚಾರದಲ್ಲಿ ವ್ಯಂಗ್ಯ ಮಾಡಿದರು. ಹಗುರವಾಗಿ ಮಾತನಾಡುವವರಿಗೆ ನಾನೇನು ಮಾತನಾಡಲು ಆಗುತ್ತೆ,  ರಸ್ತೆಯಲ್ಲಿ ಹೋಗುವರೆಲ್ಲ ಮಾತನಾಡಿದರೆ ಮೋದಿ ಅವರ ಗೌರವ ಕಡಿಮೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.