ಶಿವಮೊಗ್ಗದ ಪತ್ರಿಕೆಗಳು ಸೇರಿದಂತೆ 50 ಮೀಡಿಯಾಗಳಿಗೆ ಸಮನ್ಸ್‌ | ಮಾನಹಾನಿ ಸುದ್ದಿಗೆ ಸ್ಟೇ ತಂದ ಕಾಂತೇಶ್‌ ಕೆಇ

Summons to 50 media including Shimoga newspapers Kantesh KE brought a stay to the defamation news

ಶಿವಮೊಗ್ಗದ ಪತ್ರಿಕೆಗಳು ಸೇರಿದಂತೆ 50 ಮೀಡಿಯಾಗಳಿಗೆ ಸಮನ್ಸ್‌ | ಮಾನಹಾನಿ ಸುದ್ದಿಗೆ ಸ್ಟೇ ತಂದ ಕಾಂತೇಶ್‌ ಕೆಇ
Shimoga newspapers, Kantesh KE, defamation news

SHIVAMOGGA | MALENADUTODAY NEWS | May 1, 2024  

ರಾಜ್ಯ ರಾಜಕಾರಣದಲ್ಲೀಗ ಪೆನ್‌ ಡ್ರೈವ್‌ ಭಯ ಆರಂಭವಾದಂತಿದೆ. ಪ್ರಜ್ವಲ್‌ ರೇವಣ್ಣರ ಸೆಕ್ಸ್‌ ಸ್ಕ್ಯಾಂಡಲ್‌ ಹೊರಬಿದ್ದ ಬೆನ್ನಲ್ಲೆ, ಶಿವಮೊಗ್ಗದಲ್ಲಿ ರಾಜಕಾರಣಿಯೊಬ್ಬರು ಮಾನಹಾನಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಪ್ರಸಾರ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಇಂಜೆಕ್ಷನ್‌ ಆರ್ಡರ್‌ ತಂದಿದ್ದಾರೆ.

ಐವತ್ತು ಮಾಧ್ಯಮಗಳ ಹೆಸರು ಉಲ್ಲೆಖಿಸಿ, ಫೇಸ್‌ಬುಕ್‌, ವಾಟ್ಸ್ಸಾಪ್‌ಗಳಲ್ಲಿ ಕೂಡ ಮಾನಹಾನಿಯಾಗುವಂತಹ ವಿಷಯಗಳನ್ನ ಪ್ರಸಾರ ಮಾಡದಂತೆ ಕೋರ್ಟ್‌ ಮೂಲಕ ತಡೆಯಾಜ್ಞೆ ತರಲಾಗಿದೆ. ಈ ಸಂಬಂಧ ಕೋರ್ಟ್‌ ಸ್ಟೇ ಪಾಸ್‌ ಮಾಡಿದ್ದು ಮುಂದಿನ ವಿಚಾರಣೆಗೆ ಏದುರು ಪಾರ್ಟಿಗಳಿಗೆ ಸಮನ್ಸ್‌ ನೀಡಲಾಗಿದೆ.

 

ಶಿವಮೊಗ್ಗದಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವ ಕೆಎಸ್‌ ಈಶ್ವರಪ್ಪರವರ ಪುತ್ರ ಕೆಇ ಕಾಂತೇಶ್‌ ಸದ್ಯ ಕೋರ್ಟ್‌ನಿಂದ ಸ್ಟೇ ತಂದಿರುವ ಮುಖಂಡರಾಗಿದ್ದಾರೆ. ಇವರ ಪರವಾಗಿ ವಕೀಲ ವಿನೋದ್‌ ಕುಮಾರ್‌ ಎಂಬವರು ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.  27 ನೇ ತಾರೀಖು ಕಾಂತೇಶ್‌ ಕೆಇ ಈ ಪಿಟಿಷನ್‌ ಸಲ್ಲಿಸಿದ್ದು 7-CCH11 VI ADDL. CITY CIVIL AND SESSIONS JUDGE ಕೋರ್ಟ್‌ ಮುಂದೆ ವಿಚಾರಣೆಗೆ ಬಂದಿದೆ. ಮುಂದಿನ ವಿಚಾರಣೆ  ಆಗಸ್ಟ್‌ ಮೂರಕ್ಕೆ ಹೋಗಿದೆ. ಇನ್ನೂ ಈ ನಡುವೆ ಮದ್ಯಂತರ ನಿರ್ಬಂಧಕಾಜ್ಞೆಯನ್ನು ಕೋರ್ಟ್‌ ನೀಡಿದೆ. 

 

ಪಬ್ಲಿಶರ್‌ & ಬ್ರಾಡ್‌ ಕಾಸ್ಟರ್‌ ವೆಲ್‌ಫೇರ್‌ ಅಸೋಶಿಯೇಷನ್‌ ಆಫ್‌ ಕರ್ನಾಟಕದಿಂದ ಆರಂಭಿಸಿ, ಶಿವಮೊಗ್ಗ ಪ್ರಮುಖ ಪತ್ರಿಕೆಗಳಾದ ನಮ್ಮನಾಡು, ಶಿವಮೊಗ್ಗ ಟೈಮ್ಸ್‌ ಎಚ್ಚರಿಕೆ ಪತ್ರಿಕೆ ಹಾಗೂ ಯೂಟ್ಯೂಬ್‌, ವಾಟ್ಸಾಪ್‌, ಮೆಸೆಂಜರ್‌ ಆಪ್‌ಗಳನ್ನು ಪಾರ್ಟಿ ಮಾಡಿ ಸಮನ್ಸ್‌ ನೀಡಲಾಗಿದೆ. 

 

ಇನ್ನೂ ವಿಚಾರಣೆ ವೇಳೇ ಕೋರ್ಟ್‌ ಮುಂದೆ ಮಾನಹಾನಕಾರಿ ವಿಚಾರದ ಕೆಲವು ರಿಪೋರ್ಟ್‌ಗಳನ್ನು ಸಹ ಇಡಲಾಗಿದ್ದು, ಎಂಪಿ ಚುನಾವಣೆಯಂತಹ ಸಂದರ್ಭದಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿದ್ದು, ಇದರ ವಿರುದ್ಧ ತಡೆ ನೀಡುವಂತೆ ಕಾಂತೇಶ್‌ ಪರವಾಗಿ ವಕೀಲರು ಕೋರಿದ್ದರು. 

 

 Shimoga newspapers, Kantesh KE, defamation news