ಹೊಸನಗರ 766 ಸಿ ಹೆದ್ದಾರಿಯಲ್ಲಿ ಕಂದಕಕ್ಕೆ ಬಿದ್ದ ಕೆಎಸ್‌ಆರ್‌ಟಿಸಿ ಬಸ್‌

KSRTC bus traveling from Bengaluru to Bhatkal overturned near Samagodu in Hosanagar taluk, Shivamogga district.

ಹೊಸನಗರ 766 ಸಿ ಹೆದ್ದಾರಿಯಲ್ಲಿ ಕಂದಕಕ್ಕೆ ಬಿದ್ದ ಕೆಎಸ್‌ಆರ್‌ಟಿಸಿ ಬಸ್‌
Samagodu in Hosanagar taluk, Shivamogga district, KSRTC bus

SHIVAMOGGA | MALENADUTODAY NEWS | Jul 1, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಲ್ಲಿ ಬಸ್‌ವೊಂದು ಪಲ್ಟಿಯಾಗಿ ರಸ್ತೆ ಬದಿಗೆ ಬಿದ್ದಿರುವ ಬಗ್ಗೆ ಇಂದು ವರದಿಯಾಗಿದೆ. ಹೊಸನಗರ ತಾಲ್ಲೂಕು ನಗರದ ಸಮೀಪದ ಸಮಗೋಡುವಿನ 766 ಸಿ ಹೆದ್ದಾರಿಯ ತಿರುವಿನಲ್ಲಿ ಬೆಂಗಳೂರಿನಿಂದ ಭಟ್ಕಳದ ಕಡೆಗೆ ತೆರಳುತ್ತಿದ್ದ KSRTC ಬಸ್ಸು ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. 

ಭಾರಿ ಮಳೆಯು ಸುರಿಯುತ್ತಿರುವ ಸಮಯದಲ್ಲಿ ಬಸ್ ಸಂಪೂರ್ಣ ಮಗುಚಿ ಕೆಳಕ್ಕೆ ಉರುಳಿ ಮಾವಿನ ಮರಕ್ಕೆ ಒರಗಿ ನಿಂತಿದ್ದ ರಿಂದ  ಅದೃಷ್ಟವಶಾತ್  ಯಾವುದೇ ಪ್ರಾಣ ಹಾನಿಯಾಗಲಿಲ್ಲ. ಬಸ್ ಉರುಳಿರುವ ಸಮಗೋಡು ಹಳ್ಳದಲ್ಲಿ ಭಾರಿ ನೀರು ಹರಿಯುತ್ತಿದ್ದು ಮಾವಿನ ಮರದ ತಡೆ ಇರುವುದರಿಂದ ಸುಮಾರು 80 ಅಡಿ ಆಳಕ್ಕೆ ಬಸ್ ಬೀಳದೆ ಮೇಲೆಯೇ ಸಿಕ್ಕಿ ಬಿದ್ದಿದೆ. ಸ್ಥಳೀಯರು ಸ್ಥಳಕ್ಕೆ ಕೂಡಲೇ ಆಗಮಿಸಿ ಬಸ್ ನಾ ಹಿಂದಿನ ಗಾಜನ್ನು ಒಡೆದು ಏಣಿಯನ್ನು ಇಟ್ಟು ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ದಾಟಿಸುವಲ್ಲಿ ಯಶಸ್ವಿಯಾದರು.

ಬಸ್ ನಲ್ಲಿ 60 ಜನ ಪ್ರಯಾಣಿಸುತ್ತಿದ್ದರು. ಹೆಚ್ಚಿನ ಪ್ರಯಾಣಿಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಬಸ್ ಎದುರಿನಲ್ಲಿ ಬರುತ್ತಿದ್ದ ಬ್ಯಾಂಕ್ ಗಳಿಗೆ ಹಣ ಸಾಗಣೆ ಮಾಡುವ ಶಿವಮೊಗ್ಗದ ಖಾಸಗಿ ಕಂಪೆನಿಯ ಟಾಟಾ ಯೋಧ ವಾಹನವಾಗಿದ್ದು ನಿಟ್ಟೂರು ಕೆನರಾ ಬ್ಯಾಂಕ್ ಗೆ ಹಣ ಪೂರೈಕೆ ಮಾಡಿ ವಾಪಸ್ ಆಗುತ್ತಿತ್ತು. ಟಾಟಾ ವಾಹನದ ಚಾಲಕ ಮಂಜುನಾಥ್ ರವರಿಗೆ ಹಣೆಗೆ ಪೆಟ್ಟಾಗಿದ್ದು ಬಸ್ ನಲ್ಲಿದ್ದ ಗಾಯಾಳು ಗಳಿಗೆ ನಗರದ ಸಂಯುಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

A KSRTC bus traveling from Bengaluru to Bhatkal overturned near Samagodu in Hosanagar taluk, Shivamogga district.