BREAKING NEWS | ದರ್ಶನ್‌ & ಟೀಂ ವಿರುದ್ಧ ಆರೋಪ ಏನು ಗೊತ್ತಾ? ರೇಣುಕಾ ಕೊಲೆ ಬಗ್ಗೆ ನಟ ಪೊಲೀಸರಿಗೆ ಹೇಳಿದ್ದೇನು?

actor Darshan and Pavitra Gowda, along with ten other individuals, have been arrested or detained by the police.

BREAKING NEWS | ದರ್ಶನ್‌ & ಟೀಂ ವಿರುದ್ಧ ಆರೋಪ ಏನು ಗೊತ್ತಾ? ರೇಣುಕಾ ಕೊಲೆ ಬಗ್ಗೆ ನಟ ಪೊಲೀಸರಿಗೆ ಹೇಳಿದ್ದೇನು?
Actor Darshan Arrested , Challenging Star Darshan, Renukaswamy, Pavitra Gowda, Vinay

SHIVAMOGGA | MALENADUTODAY NEWS | Jun 11, 2024 ಮಲೆನಾಡು ಟುಡೆ 

ನಟ ದರ್ಶನ್‌ ಅರೆಸ್ಟ್‌ ವಿಚಾರದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಸದ್ಯ ದರ್ಶನ್‌ ಹಾಗೂ ಪವಿತ್ರಾಗೌಡ ಸೇರಿದಂತೆ  10 ಕ್ಕೂ  ಹೆಚ್ಚು ಮಂದಿಯನ್ನ ಪೊಲೀಸರು ವಶಕ್ಕೆ ಅಥವಾ ಅರೆಸ್ಟ್‌ ಮಾಡಿದ್ದಾರೆ. ಸದ್ಯ ಲಭ್ಯ ಮೂಲಗಳ ಪ್ರಕಾರ, ರೇಣುಕಾಸ್ವಾಮಿಯ ಕಿಡ್ನಾಪ್‌ ಮಾಡಿದ ಆರೋಪ, ಅಪಹರಿಸಿ ಕೂಡಿಹಾಕಿ ಹಲ್ಲೆ ಮಾಡಿದ ಆರೋಪ, ಹಾಗೂ ಆತನನ್ನ ಕೊಲೆ ಮಾಡಿದ ಆರೋಪ ಮತ್ತು ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ ಆರೋಪಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಕೇಸ್ದ ದಾಖಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.  

ಪಾಯಿಂಟ್ಸ್‌ ಒಂದು

ಇಷ್ಟಕ್ಕೂ ನಡೆದ ಘಟನೆಗಳನ್ನ ನೋಡುವುದಾದರೆ ಜೂನ್‌9 ರಂದು ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿಕೊಂಡು ಬಂದ ಟೀಂ ಅವರ ಮೇಲೆ ಅಂದೇ ಬೆಂಗಳೂರು ಪಟ್ಟಣಗೆರೆಯ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಆತನ ಮೇಲೇ ಹಲ್ಲೆ ನಡೆಸಲಾಗಿದೆ ಮಾರಣಾಂತಿಕ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳಾಗುತ್ತಿದೆ. ಆತನ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ದರ್ಶನ್‌ ಅಲ್ಲಿಯೇ ಇದ್ರು ಎಂದು ಆರೋಪಿಸಲಾಗಿದೆ. ಇನ್ನೂ ಹಲ್ಲೆಯಿಂದ ಆತ ಸಾವನ್ನಪ್ಪಿದ ಬಳಿಕ ಮೃತದೇಹವನ್ನು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಚರಂಡಿಯೊಂದರಲ್ಲಿ ಬಿಸಾಕಿ ಹೋಗಿದ್ದರು. 

ಪಾಯಿಂಟ್ಸ್‌ ಎರಡು

ಇದಿಷ್ಟು ಘಟನೆಗಳಿಗೆ ಸಂಬಂಧಿಸಿದಂತೆ ತಂಡವೊಂದು ಪೊಲೀಸರ ಮುಂದೆ ಶರಣಾಗಿತ್ತು. ಶರಣಾದ ತಂಡದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಪ್ರಕರಣವನ್ನು ಬೇರೆಯದ್ದೆ ಆಯಾಮದಲ್ಲಿ ತನಿಖೆ ನಡೆಸಿದೆ. ಮೃತನ ಗುರುತು ಪತ್ತೆ ಹಚ್ಚಿ, ಸಿಸಿ ಕ್ಯಾಮಾರಾ , ಮೊಬೈಲ್‌ ಲೋಕೆಷನ್‌ ಹಾಗೂ ಚಾಟ್ಸ್‌ಗಳನ್ನ ಪಡೆದುಕೊಂಡ ಪೊಲೀಸ್‌ ಇಲಾಖೆ ಶರಣಾದ ಆರೋಪಿ ತಂಡವನ್ನು ವಿಚಾರಿಸಿದೆ. ತೀವ್ರ ತನಿಖೆ ಬಳಿಕ ಪ್ರಕರಣದಲ್ಲಿ ದರ್ಶನ್‌ ಮತ್ತಾತನ ಟೀಂ ಶಾಮೀಲಾಗಿರುವ ವಿಚಾರ ಗೊತ್ತಾಗಿದೆ. ಹೀಗಾಗಿ ಸೀಕ್ರೆಟ್‌ ಆಪರೇಷನ್‌ ಆರಂಭಿಸಿದ ಪೊಲೀಸರು ಗೌಪ್ಯವಾಗಿ ತಂಡಗಳಾಗಿ ದರ್ಶನ್‌ ಹಾಗೂ ಆತನ ಜೊತೆಗಿದ್ದವರನ್ನ ಅರೆಸ್ಟ್‌ ಮಾಡಿದ್ದಾರೆ. 

ಪಾಯಿಂಟ್ಸ್‌ ಮೂರು

ಈ ನಡುವೆ ನಟ ದರ್ಶನ್‌ ಪೊಲೀಸರ ವಿಚಾರಣೆ ವೇಳೆ ನಾನು ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿದೆ ಎನ್ನಲಾದ ಹಲ್ಲೆ ಸಂದರ್ಭದಲ್ಲಿ ಇರಲಿಲ್ಲ ಎಂದು ಹೇಳಿದ್ದಾರಂತೆ. ಆದಾಗ್ಯು ಪೊಲೀಸ್ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. 

The actor Darshan and Pavitra Gowda, along with ten other individuals, have been arrested or detained by the police. The charges against the accused include the kidnapping of Renukaswamy, assault, murder, and attempted destruction of evidence.