ಸಿಗಂದೂರು ಪ್ರವಾಸಕ್ಕೆ ಹೊರಟಿದ್ದೀರಾ| ಲಾಂಚ್‌ಗೆ ಹತ್ತಲ್ಲ ವೆಹಿಕಲ್‌ | ಪ್ರಯಾಣಿಕರಿಗಷ್ಟೆ ಅವಕಾಶ! ವಿವರ ಇಲ್ಲಿದೆ

Sagara Taluk Kadavu Inspector's Office in Shivamogga district has issued a notice regarding the ferry service between Ambargodu and Kalasavalli.

ಸಿಗಂದೂರು ಪ್ರವಾಸಕ್ಕೆ ಹೊರಟಿದ್ದೀರಾ| ಲಾಂಚ್‌ಗೆ ಹತ್ತಲ್ಲ ವೆಹಿಕಲ್‌ | ಪ್ರಯಾಣಿಕರಿಗಷ್ಟೆ ಅವಕಾಶ! ವಿವರ ಇಲ್ಲಿದೆ
Ambargodu and Kalasavalli

SHIVAMOGGA | MALENADUTODAY NEWS | Jun 18, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಡವು ನಿರೀಕ್ಷಕರ ಕಛೇರಿಯಿಂದ ಪ್ರಕಟಣೆಯೊಂದು ಹೊರಬಿದ್ದಿದೆ. ಸಾಗರದಿಂದ- ಅಂಬಾರಗೋಡು ಕಳಸವಳ್ಳಿ ಕಡವಿನಲ್ಲಿ ಶರಾವತಿ ಹಿನ್ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಕಡವು ಸೇವೆಯನ್ನು ಪ್ರಯಾಣಿಕರಿಗೆ ಮಾತ್ರ ಒದಗಿಸುವ ಕುರಿತು ಈ ಆದೇಶ ಹೊರಡಿಸಲಾಗಿದೆ. 

ಪ್ರಕಟಣೆಯ ವಿವರ 

ಅಂಬಾರಗೋಡ್ಲು-ಕಳಸವಳ್ಳಿ ಕಡವಿನಲ್ಲಿ ಶರಾವತಿ ಹಿನ್ನೀರಿನ ಮಟ್ಟ ಬಹಳಷ್ಟು ಕಡಿಮೆ ಆಗಿರುವುದರಿಂದ ಲಾಂಚುಗಳಲ್ಲಿ ಬಸ್ಸು ಮತ್ತು ಇತರೆ ಘನ ವಾಹನಗಳ ಜೊತೆಗೆ ಪ್ರಯಾಣಿಕರನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಕೇವಲ ಪ್ರಯಾಣಿಕರನ್ನು ಮಾತ್ರ ಲಾಂಚ್ ಮೂಲಕ ಸಾಗಿಸಬಹುದಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ವೇಳೆ ತಿಳಿದುಬಂದಿರುತ್ತದೆ. 

ಆದ್ದರಿಂದ ಪ್ರಯಾಣಿಕರು ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ19-06-2024 ರಿಂದ ಅಂಬಾರಗೋಡ್ಲು- ಕಳಸವಳ್ಳಿ ಲಾಂಚ್‌ನಲ್ಲಿ ಕೇವಲ ಪ್ರಯಾಣಿಕರನ್ನು ಮಾತ್ರ ಲಾಂಚ್ ಮೂಲಕ ಸಾಗಿಸಲು ತೀರ್ಮಾನಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

Sagara Taluk Kadavu Inspector's Office in Shivamogga district has issued a notice regarding the ferry service between Ambargodu and Kalasavalli. Due to low water levels in the Sharavati backwaters, the ferry service will be restricted to passengers only, starting from June 19, 2024. This decision has been made after an inspection revealed that buses and other heavy vehicles cannot be transported along with passengers on the launches. The ferry service will resume full operations once the water levels in the Sharavati backwaters increase.