PSI Scam / ಪಿಎಸ್​ಐ ನೇಮಕಾತಿ ಹಗರಣದಲ್ಲಿ ತಮ್ಮ ಹೆಸರು ಉಲ್ಲೇಖದ ಬಗ್ಗೆ ಬಿ.ವೈ.ವಿಜಯೇಂದ್ರ ಹೇಳಿದ್ದೇನು?

What did B.Y.Vijayendra say about his name being mentioned in the PSI Scam/PSI recruitment scam?

PSI Scam /  ಪಿಎಸ್​ಐ ನೇಮಕಾತಿ ಹಗರಣದಲ್ಲಿ ತಮ್ಮ ಹೆಸರು ಉಲ್ಲೇಖದ ಬಗ್ಗೆ ಬಿ.ವೈ.ವಿಜಯೇಂದ್ರ ಹೇಳಿದ್ದೇನು?

KARNATAKA NEWS/ ONLINE / Malenadu today/ Jun 6, 2023 SHIVAMOGGA NEWS

ಬಿವೈ ವಿಜಯೇಂದ್ರ/ ರವರು  ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ (PSI Recruitment Scam) ಸುಖಾ ಸುಮ್ಮನೇ ಕಾಂಗ್ರೆಸ್​​ನವರು ನನ್ನ ಹೆಸರನ್ನು ತೇಲಿಬಿಟ್ಟಿದ್ದಾರೆ ಎಂದು ಆರೋಪಿಸಿದ್ಧಾರೆ. ಅಲ್ಲದೆ ಈ ಸಂಬಂಧ  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಸ್ತಿತ್ವದಲ್ಲಿದೆ. ತನಿಖೆ ನಡೆಸಲಿ ಎಂದಿದ್ಧಾರೆ. 

ಮೈಸೂರಿನಲ್ಲಿ ಮಾತನಾಡಿದ  ಶಿಕಾರಿಪುರದ ಶಾಸಕ ವಿಜಯೇಂಧ್ರವರು, ಪಿಎಸ್​ಐ ಸ್ಕ್​ಯಾಂ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು. ಸೇಡಿನಿಂದ ತನಿಖೆ ಮಾಡುವುದು ಸರಿಯಲ್ಲ, ಪಾರದರ್ಶಕ ತನಿಖೆ ಆದರೆ ಸ್ವಾಗತ ಎಂದಿದ್ಧಾರೆ ಅಲ್ಲದೆ, ಈ ಸಂಬಂಧ ತಮ್ಮ ಹೆಸರನ್ನು ಉಲ್ಲೇಖಿಸಲಾಗುತ್ತಿದೆ. ಆ ಬಗ್ಗೆ ತನಿಖೆ ನಡೆಸಲಿ ಎಂದಿದ್ದಾರೆ. 

ಇನ್ನೂ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಹಾಕುತ್ತಿರುವುದು ಸರಿಯಲ್ಲ ಎಂದ ಅವರು, ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಹೆಚ್ಚು ತೆರಿಗೆ ವಿಧಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಒಂದು ಕಡೆ ಗ್ಯಾರಂಟಿ ಇನ್ನೊಂದು ಕಡೆ ಪೆಟ್ಟು ಎಂದು ಟೀಕಿಸಿದ್ರು. 

ಜೋರು ಮಳೆಯಲ್ಲಿ ಸ್ಕಿಡ್ ಆಗಿ ಬಿದ್ದ ಬೈಕ್​ ಸವಾರ! ತಲೆ ಮೇಲೆಯೇ ಹರಿಯಿತು ಬಸ್ ಚಕ್ರ!

ಚಿಕ್ಕಮಗಳೂರು /  ಸರ್ಕಾರಿ ಬಸ್​ನ ಚಕ್ರ ಹರಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದೆ. 

ಘಾಟಿಯ ಮೂರನೇ ತಿರುವಿನಲ್ಲಿ ಘಟನೆ ಸಂಭವಿಸಿದ್ದು, ಘಠನೆಯಲ್ಲಿ ಸ್ಕೂಟರ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಾಗುಂಡಿ ಗ್ರಾಮದ ಇರ್ಫಾನ್  ಎಂಬವರು ಮೃತಪಟ್ಟಿದ್ಧಾರೆ.  ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ (ಕೆಕೆಆರ್‌ಟಿಸಿ)  ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಬೈಕ್​ ನಿಯಂತ್ರಣ ತಪ್ಪಿದ್ದ ಅದರಲ್ಲಿ ಬರುತ್ತಿದ್ದ ಇಬ್ಬರು ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಬಸ್ನ ಹಿಂಬದಿ ಚಕ್ರ ಸವಾರನ ಮೇಲೆ ಹರಿದಿದೆ. ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಸರ್ಕಲ್​ಗಳಲ್ಲಿ ಇರಲಿ ಜಾಗ್ರತೆ! ಸಿಟಿ ಬಸ್​ ಆಕ್ಸಿಡೆಂಟ್​ಗೆ ಸಾಕ್ಷಿಯಾಯ್ತು ಸಿಸಿಟಿವಿ ದೃಶ್ಯ! ಮಹಾವೀರ್ ವೃತ್ತದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು!

ಶಿವಮೊಗ್ಗ ನಗರದ ಮಹಾವೀರ ಸರ್ಕಲ್​ನಲ್ಲಿ ಸಂಭವಿಸಿದ್ದ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.  C. S. ಇಕ್ಬಾಲ್ ಅಹ್ಮದ್  ಮೃತರು . 18 ದಿನಗಳಿಂದ ಮೆಟ್ರೋ ಹಾಸ್ಪಿಟಲ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಕಳೆದ ಶುಕ್ರವಾರ ಮೃತಪಟ್ಟಿದ್ಧಾರೆ. ಇನ್ನೂ ಘಟನೆಯ ಸಿಸಿ ಟಿವಿ ಪೂಟೇಜ್​ ಕೂಡ ದೊರೆತಿದ್ದು, ಸಿಟಿಬಸ್​ ಬೈಕ್​ಗೆ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಪೂಟೇಜ್​ನಲ್ಲಿದೆ.

ಅಂದಿನ ಸುದ್ದಿ : Accident / ಶಿವಮೊಗ್ಗ ನಗರದಲ್ಲಿ ಬೈಕ್​ಗೆ ಸಿಟಿ ಬಸ್​ ಡಿಕ್ಕಿ! ಬಸ್​ಗೆ ಕಲ್ಲು

ಏನಾಗಿತ್ತು ಅಂದು

ಘಟನೆ ನಡೆದ ದಿನ ಹೆಚ್​ಪಿಸಿ ಥಿಯೇಟರ್​ ಕಡೆಯಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್​ವೊಂದು ಮಹಾವೀರ ವೃತ್ತದಲ್ಲಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಸಿಗ್ನಲ್​ ಸ್ಟಾಪ್ ಆದ ಬಳಿಕ ಮುಂದಕ್ಕೆ ಬಂದ ಬಸ್​, ಸರ್ಕಲ್​ ದಾಟುವ ಅವಸರದಲ್ಲಿ, ಬಸ್​ಗಿಂತ ಮುಂದೆ ಹೋಗುತ್ತಿದ್ದ  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿತ್ತು.

ಘಟನೆ ಬೆನ್ನಲ್ಲೆ ಇನ್ನೊಂದು ಬದಿಯಿಂದ ಬರುತ್ತಿದ್ದ ವಾಹನ ಸವಾರರು,ವೆಹಿಕಲ್​ಗಳನ್ನ ನಿಲ್ಲಿಸಿ ಘಟನೆಯಲ್ಲಿ ಗಾಯಗೊಂಡಿದ್ದ ಇಕ್ಬಾಲ್​ರವರಿಗೆ ಆರೈಕೆ ಮಾಡಿದ್ದರು. ಬಳಿಕ ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇತ್ತ ಆಕ್ರೋಶಗೊಂಡಿದ್ದ ಸ್ಥಳೀಯರು ಬಸ್ ಮೇಲೆ ಕಲ್ಲೂ ತೂರಾಟ ನಡೆಸಿ ಅದರ ಗಾಜುಗಳನ್ನ ಒಡೆದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಟ್ರಾಫಿಕ್ ಕಂಟ್ರೋಲ್ ಮಾಡಿದ್ದರು. ಆ ಸಂದರ್ಭದಲ್ಲಿ ಟ್ರಾಫಿಕ್​ ಪೊಲೀಸರು ಸರ್ಕಲ್​​ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದರು.