ಶಿವಮೊಗ್ಗದಲ್ಲಿ ದುಬಾರಿ ಶಾಲೆಗಳಿವೆ ಆದರೆ ಸರ್ಕಾರಿ ಶಾಲೆಗಳೇಕೆ ತೆರೆಯಲಾಗುತ್ತಿಲ್ಲ? ಆಯನೂರು ಮಂಜುನಾಥ್ ಪ್ರಶ್ನೆ?

There are expensive schools in Shivamogga but why aren't government schools being opened? Ayanur Manjunath question?

ಶಿವಮೊಗ್ಗದಲ್ಲಿ ದುಬಾರಿ ಶಾಲೆಗಳಿವೆ  ಆದರೆ  ಸರ್ಕಾರಿ ಶಾಲೆಗಳೇಕೆ ತೆರೆಯಲಾಗುತ್ತಿಲ್ಲ? ಆಯನೂರು ಮಂಜುನಾಥ್  ಪ್ರಶ್ನೆ?

KARNATAKA NEWS/ ONLINE / Malenadu today/ May 6, 2023 GOOGLE NEWS

ಶಿವಮೊಗ್ಗ/  ಇಲ್ಲಿನ ಪತ್ರಿಕಾ ಭವನದಲ್ಲಿ ಇವತ್ತು ನಡೆದ ಸಂವಾದದಲ್ಲಿ ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್​ ಪಾಲ್ಗೊಂಡಿದ್ದರು. ಈ ವೇಳೇ ಸ್ಮಾರ್ಟ್​ ಸಿಟಿ  ಪ್ರಸ್ತಾಪಿಸಿದ ಆಯನೂರು ಮಂಜುನಾಥ್​ ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸರಿಯಾಗಿ ಜಾರಿಯಾಗಿಲ್ಲ. ಬಹುತೇಕ ಕಳಪೆಯಾಗಿದೆ. ನಿತ್ಯ ಅಗೆಯುವುದೇ  ದೊಡ್ಡ ಕಾಮಗಾರಿಯಾಗಿದೆ. ಭ್ರಷ್ಟಾಚಾರ ತಾಂಡವವಾಡಿದೆ ಎಂದು ಆರೋಪಿಸಿದ್ದಾರೆ.

ಮತ್ತೆ ಬಂತು ಬ್ಯಾರಿ ಮಾಲ್ ವಿಚಾರ

ಬಿಜೆಪಿ ಹಾಗೂ ಕಾಂಗ್ರೆಸ್​ನ ಸ್ಪರ್ಧಿಗಳಲ್ಲಿ  ಒಬ್ಬರು ಶಿವಮೊಗ್ಗ ಮಹಾ ನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾದವರು, ಇನ್ನೊಬ್ಬರು ವಿರೋಧ ಪಕ್ಷದ ಮುಖಂಡರಾದವರು. ಇಬ್ಬರು ಕಾರ್ಪೊರೇಟರ್‌ಗಳಾಗಿ ಮಾಡಿದ ಕಾರ್ಯ ನೋಡಿದಾಗ ಅವರಲ್ಲಿ ಪ್ರಬುದ್ಧತೆ ಕಂಡುಬಂದಿಲ್ಲ. ಬ್ಯಾರಿ ಮಾಲ್‌ನ್ನು 99 ವರ್ಷಕ್ಕೆ ಬರೆದು ಕೊಡುವ ಕೆಲಸವಾಯಿತು. ಕೆಲವು ನಾಯಕರ ಹಪಾಹಪಿತನದಿ೦ದ ಶಿವಮೊಗ್ಗ ಹಾಳಾಗಿದೆ ಎಂದು ದೂರಿರು. 

ಶಾಸಕ ಸ್ಥಾನ ಹೊಸದಲ್ಲ

ನಗರದಲ್ಲಿ ರೈಲು, ವಿಮಾನ ಸಹಿತ ಎಲ್ಲಾ ಮೂಲ ಸೌಕರ್ಯಗಳಿದ್ದರೂ ಕೈಗಾರಿಕೆಗಳು  ಬರುತ್ತಿಲ್ಲ ಎಂದು ಆರೋಪಿಸಿದ ಆಯನೂರು ಮಂಜುನಾಥ್​  ನನಗೆ ಶಾಸಕ ಸ್ಥಾನ ಹೊಸದಲ್ಲ. ಲೋಕಸಭೆ, ರಾಜ್ಯಸಭೆ, ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ.  ಅಗತ್ಯ ಬಿದ್ದಾಗ ಆಡಳಿತ ಪಕ್ಷದಲ್ಲಿದ್ದರೂ ಸಹ ಕಾರ್ಮಿಕರ ಸಮಸ್ಯೆ ಮತ್ತು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಂಡಿಸಿದ್ದೇನೆ. ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿ ಗಮನ ಸೆಳೆದಿದ್ದೆನೆ ಎಂದರು.

ಶಿವಮೊಗ್ಗದಲ್ಲಿ ಶಾಂತಿ ನೆಲಸಬೇಕು

ಶಿವಮೊಗ್ಗದಲ್ಲಿ ವಾತಾವರಣ ಬದಲಾಗದಿದ್ದರೆ ಬರಡು ಜಿಲ್ಲೆಯಾಗುತ್ತದೆ. ನಗರದಲ್ಲಿ ಶಾಂತಿ ತರಬೇಕು,  ಅಶಾಂತಿ ಉಂಟು ಮಾಡಿದವರ ಮೇಲೆ ವಾಗ್ದಾಳಿ ನಡೆಸಿ ಹೋರಾಟ ಮಾಡಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು. 

ದುಬಾರಿ ಶಾಲೆಗಳು 

ಶಿವಮೊಗ್ಗದಲ್ಲಿ  ಉತ್ತಮವಾದ ಮತ್ತೊಂದು ಸರ್ಕಾರಿ ಶಾಲೆಗಳು ತೆರೆಯುವುದಕ್ಕೆ ಆಗಿಲ್ಲ. ಆದರೆ ಖಾಸಗಿ ಶಾಲೆಗಳು ಪ್ರತಿವರ್ಷ ಆರಂಭವಾಗುತ್ತಲೇ ಇದೆ. ದುಬಾರಿ ಕಾಲೇಜುಗಳು ಪ್ರಾರಂಭವಾಗುತ್ತಿವೆ. ಆದರೆ ಸರ್ಕಾರಿ ಶಾಲೆಗಳೇಕೆ ತೆರೆಯಲಾಗ್ತಿಲ್ಲ ಎಂದು ಪ್ರಶ್ನಿಸಿದ್ರು. 

ಭದ್ರಾವತಿ/ ಶಿವಮೊಗ್ಗ/  ಇಲ್ಲಿನ ಸಿಂಗನಮನೆ ಗ್ರಾಮದಲ್ಲಿ ಯುವಕನೊಬ್ಬ ಮತ್ತಿನಲ್ಲಿ ಚಾಕು ಹಿಡಿದು ಸಾರ್ವಜನಿಕರಿಗೆ ಹೆದರಿಸಿದ್ದಷ್ಟೆ ಅಲ್ಲದೆ, ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಯತ್ನಿಸಿ ಇರಿಯಲು ಮುಂದಾದ ಘಟನೆ ನಡೆದಿದೆ. ಈ ಸಂಬಂ 05-05-2023 ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ಎಫ್​ಐಆರ್ ಆಗಿದೆ. 

ಬಿ.ಆರ್.ಪಿ ಪೊಲೀಸ್ ಉಪಠಾಣೆಯಲ್ಲಿ ಕೆಲಸ ಮಾಡುತ್ತಿದ್ದ   ಸುನೀಲ್​ ಎಂಬವರಿಗೆ ಕಳೆದ ನಾಲ್ಕನೇ ತಾರೀಖು ಬಿಆರ್​ಪಿ ಡ್ಯಾಂ  ಬಳಿ ಇರುವ ಚೆಕ್​ಪೋಸ್ಟ್​ನಿಂದ ಅವರ ಸಹೋದ್ಯೋಗಿ ಕರೆ ಮಾಡಿದ್ದಾರೆ. ಸಿಂಗನಮನೆ ಬಳಿ ಇರುವ ದೇವಾಲಯದ ಬಳಿಯಲ್ಲಿ ಯುವಕನೊಬ್ಬ ಸಾರ್ವಜನಿಕರಿಗೆ ಚಾಕು ತೋರಿಸಿ ಹೆದರಿಸ್ತಿದ್ದಾನೆ. ಬೇಗ ಬಾ ಎಂದು ಕರೆದಿದ್ಧಾರೆ. ಸುನೀಲ್ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಶಿವು ಎಂಬಾತ ಕೈಯಲ್ಲಿ ಡ್ರ್ಯಾಗರ್ ಹಿಡಿದು ಹೆದರಿಸ್ತಿರುವುದು ಕಂಡು ಬಂದಿದೆ. 

ತಕ್ಷಣ ಆತನ ಕೈಯಿಂದ ಡ್ರ್ಯಾಗರ್ ಕಿತ್ತುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಸುನೀಲ್​ರಿಗೆ ಹಲ್ಲೆ ಮಾಡಿದ ಶಿವು ಚಾಕುವಿನಿಂದ ಚುಚ್ಚಲು ಮುಂದಾಗಿದ್ದಾನೆ. ಈ ವೇಳೆ ತಪ್ಪಿಸಿಕೊಂಡಿದ್ದರಿಂದ ಅನಾಹುತ ತಪ್ಪಿದೆ. ಇನ್ನೂ ಘಟನೆ ಬೆನ್ನಲ್ಲೆ ಶಿವು ಅಲ್ಲಿಂದ ಪರಾರಿಯಾಗಿದ್ಧಾನೆ. ಸದ್ಯ ಈ ಸಂಬಂಧ ಪೇದೆ ನೀಡಿದ ದೂರಿನನ್ವಯ ಎಫ್​ಐಆರ್ ಆಗಿದೆ. 

ಪ್ರಯಾಣಿಕರಲ್ಲಿ ವಿನಂತಿ/ 2 ದಿನ ಸರ್ಕಾರಿ ಸಾರಿಗೆ ಬಸ್​ ಸಂಚಾರದಲ್ಲಿ ವ್ಯತ್ಯಯ!


ಶಿವಮೊಗ್ಗ Karnataka election/ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ- 09 ಮತ್ತು 10 ರಂದು ಜಿಲ್ಲೆಯಲ್ಲಿ ಸಾರಿಗೆ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು; ಸಹಕರಿಸಲು ಸಾರಿಗೆ ನಿಗಮ ಮನವಿ ಮಾಡಿದೆ. 

ಮೇ-10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ಸಿಬ್ಬಂದಿಗಳನ್ನು ಕರೆದೊಯ್ಯಲು  ಕ.ರಾ.ರ.ಸಾ.ನಿಗಮ ಶಿವಮೊಗ್ಗ ವಿಭಾಗದ ವತಿಯಿಂದ 262 ಬಸ್‍ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ. 

ಆದ್ದರಿಂದ ಮೇ-09 ಮತ್ತು 10 ರಂದು ಜಿಲ್ಲಾ ವ್ಯಾಪ್ತಿಯ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಹಾಗೂ ಶಾಲಾ/ಕಾಲೇಜು ವಿದ್ಯಾರ್ಥಿಗಳು ನಿಗಮದೊಂದಿಗೆ ಸಹಕರಿಸುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೋರಿರುತ್ತಾರೆ.

ಬಿಜೆಪಿಗೂ ತಟ್ಟಿದ ಕೇಸ್/ ಅಮಿತ್ ಶಾ ರೋಡ್​ ಶೋ ಕಾರ್ಯಕ್ರಮದ ವಿಚಾರದಲ್ಲಿ ದಾಖಲಾಯ್ತು ಎಫ್​ಐಆರ್

ಶಿವಮೊಗ್ಗ/ ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಸಾಲು ಸಾಲ ಎಫ್​ಐಆರ್​ಗಳು ರಿಜಿಸ್ಟರ್ ಆಗುತ್ತಿವೆ. ಮತಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಸಂಬಂಧ ಜೆಡಿಎಸ್​, ಉತ್ತಮ ಪ್ರಜಾಕೀಯದ ಅಭ್ಯರ್ಥಿ ವಿರುದ್ಧ ಕೇಸ್ ಆದ ಬೆನ್ನಲ್ಲೆ ಇದೀಗ ಬಿಜೆಪಿ ರಾಷ್ಟ್ರೀಯ ಮುಖಂಡ ಕೇಂದ್ರ ಗೃಹಸಚಿವ ಅಮಿತ್ ಶಾ ಪಾಲ್ಗೊಂಡಿದ್ದ ರೋಡ್​ ಶೋ ಸಂಬಂಧ ಕೇಸ್​ವೊಂದು ದಾಖಲಾಗಿದೆ. 

ದಿನಾಂಕ: 01-05-2023 ರಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಕೇಂದ್ರ ಗೃಹ ಸಚಿವ  ಅಮಿತ್ ಶಾ ರವರ  ರೋಡ್ ಶೋ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಳಾಗಿತ್ತು. 

ಬಿಹೆಚ್ ರಸ್ತೆಯ ಶಿವಪ್ಪ ನಾಯಕ ಸರ್ಕಲ್ ನಿಂದ ಲಕ್ಷ್ಮಿ ಟಾಕೀಸ್ ವೃತ್ತದವರೆಗೆ ಈ ರೋಡ್​ ಶೋ ಅದ್ದೂರಿಯಾಗಿ ನಡೆದಿತ್ತು.  ಈ ವೇಳೆ ಚುನಾವಣಾ ಪ್ರಚಾರಕ್ಕೆ 4-5 ಜನ ಮಕ್ಕಳನ್ನ ಬಳಸಿಕೊಳ್ಳಲಾಗಿದೆ ಎಂಬ ಆರೋಪದಡಿ ಎಫ್​ಐಆರ್ ದಾಖಲಾಗಿದೆ. 

ಬಿಜೆಪಿ ಪಕ್ಷದ ಬಾವುಟ ಮತ್ತು ಪಕ್ಷದ ಚಿಹ್ನೆಗಳಿರುವ ಶಾಲ್ ಗಳನ್ನು  ಮಕ್ಕಳಿಗೆ ಕೊಟ್ಟು ಅವರನ್ನು ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ರೋಡ್ ಶೋ ಕಾರ್ಯಕ್ರಮಕ್ಕೆ ಬಳಸಿಕೊಂಡಿರುವುದು ವಿಡಿಯೋ ಸರ್ವೆಲೆನ್ಸ್ ತಂಡದವರು ಮಾಡಿರುವ ವಿಡಿಯೋ ಚಿತ್ರೀಕರಣದಲ್ಲಿ ಕಂಡು ಬಂದಿದೆ. 

ಚುನಾವಣಾ ಪ್ರಚಾರದಲ್ಲಿ, ಚಿಕ್ಕ ಮಕ್ಕಳನ್ನು ಬಳಸಿಕೊಳ್ಳುವುದು CHILD LABOUR (PROHIBITION & REGULATION) ACT, 1986 (U/s-14) ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್​ ಸ್ಕ್ವ್ಯಾಡ್​ ತಂಢದ ಅಧಿಕಾರಿಗಳು  ಪರಿಶೀಲನೆ ನಡೆಸಿ ಕಾನೂನ ಕ್ರಮಕ್ಕೆ ಸೂಚಿಸಿದ್ದಾರೆ. ಪ್ರಕರಣ ಸಂಬಂಧ ಆನಂದಪ್ಪ ಎಂಬ ಅಧಿಕಾರಿ ದೂರು ನೀಡಿದ್ದು, ಬಿಜೆಪಿ ಪಕ್ಷದ ಕಾರ್ಯದರ್ಶಿ ವಿರುದ್ಧ, ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್  ಆಗಿದೆ. 

Malenadutoday.com Social media