Bhadravati/ ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್

Four-member gang assaults threatened two women who were in the house and robbed them

Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್

KARNATAKA NEWS/ ONLINE / Malenadu today/ May 6, 2023 GOOGLE NEWS

ಭದ್ರಾವತಿ/ ಶಿವಮೊಗ್ಗ/ ಇಲ್ಲಿನ ಹೊಸಳ್ಳಿ ತೋಟದ ಮನೆಯ ಸಮೀಪ ಸಂಜೆ ಹೊತ್ತಿನಲ್ಲಿಯೇ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಲಾಗಿದೆ. ಕಳೆದ ಮೂರನೇ ತಾರೀಖು ನಡೆದ ಘಟನೆ ಇದಾಗಿದ್ದು, ನಾಲ್ಕರಂದು ಈ ಸಂಬಂಧ ಕೇಸ್ ದಾಖಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಆತಂಕ ಮೂಡಿಸುತ್ತಿದೆ. ಪ್ರಕರಣದ ವಿಚಾರವಾಗಿ  ಪೊಲೀಸ್ ಕೇಸ್​ ಆಗಿದ್ದು ತನಿಖೆಯು ನಡೆಯುತ್ತಿದೆ. 

ನಡೆದಿದ್ದೇನು?

ಮೂರನೇ ತಾರೀಖು ಎಳುವರೆ ಸುಮಾರಿಗೆ, ತಾಯಿ ಮಗಳು ಮೊಮ್ಮಗು ಇದ್ದ ಮನೆಯೊಂದರ ಬಾಗಿಲನ್ನ ಅಪರಿಚಿತರು ಬಡಿದಿದ್ದಾರೆ. ಯಾರು ಬಾಗಿಲು ತಟ್ಟಿದ್ದಾರೆ ಎಂದು ತೆರೆದು ನೋಡಿದಾಗ, ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ.

ಕೈಗೆ ಗ್ಲೌಸ್​ ಹಾಕಿಕೊಂಡು ಮುಖಕ್ಕೆ ಮುಸುಕು ಕಟ್ಟಿಕೊಂಡಿದ್ದ ಆರೋಪಿಗಳು, ತಾಯಿ ಹಾಗೂ ಮಗಳ ಕೈ ಕಟ್ಟಿ ಹಾಕಿ, ಬೀರುವಿನಲ್ಲಿದ್ದ ಹಣ, ಒಡವೆಯನ್ನ ದೋಚಿದ್ಧಾರೆ. ಆನಂತರ ಮಗುವಿನ ಕುತ್ತಿಗೆಗೆ ಚಾಕು ಹಿಡಿದು, ತಾಯಿ ಮಗಳ ಮೈಮೇಲಿದ್ದ ಒಡವೆಗಳನ್ನ ನೀಡುವಂತೆ ಕೇಳಿದ್ದಾರೆ. ಅಲ್ಲದೆ ಕಿರುಚಿದರೇ ಸಾಯಿಸುತ್ತೇವೆ ಎಂದು ಹೆದರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. 

ಸದ್ಯ ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಭದ್ರಾವತಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. 

 

Kichcha Sudeepa/ ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಬೆಂಗಳೂರು/ kichcha sudeep/  ನಟ ಸುದೀಪ್​ರಿಗೆ ಬಂದಿದ್ದ ಬೆದರಿಕೆ ಪತ್ರದ ಮೂಲವನ್ನ ಪೊಲೀಸರು ಭೇದಿಸಿದ್ದಾರೆ. ಸುದೀಪ್​ ಹೇಳಿದಂತೆ ಅವರ ಆಪ್ತರೇ ಈ ಕೆಲಸ ಮಾಡಿದ್ದು, ಅವರನ್ನ ಪೊಲೀಸರು ಬಂಧಿಸಿದ್ದಾರೆ. 

ಯಾರು ?

ಪ್ರಕರಣವನ್ನು ಕೈಗೆತ್ತಿಕೊಂಡಿದ್ದ,  ಸಿಸಿಬಿ ಪೊಲೀಸರು ಆರೋಪಿ ಡೈರೆಕ್ಟರ್ ರಮೇಶ್ ಕಿಟ್ಟಿಯನ್ನು ಬಂಧಿಸಿದ್ದಾರೆ. ಆರೋಪಿ ರಮೇಶ್ ಕಿಟ್ಟಿ, ಸುದೀಪ್​ ಆಪ್ತನಾಗಿದ್ದುಇ,  ಕಿಚ್ಚ ಸುದೀಪ ಚಾರಿಟೇಬಲ್​ ಟ್ರಸ್ಟ್​ನ ಅಧ್ಯಕ್ಷನಾಗಿದ್ದ.  ಹಣಕಾಸು ವಿಷಯದ ವೈಮನಸ್ಯಕ್ಕೆ ಬೆದರಿಕೆ ಪತ್ರ ಬರೆದಿದ್ದಾನೆ ಎನ್ನಲಾಗಿದೆ. 

ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಮೇಶ್ ಕಿಟ್ಟಿ, 2004 ರಲ್ಲಿ ಸಿನಿಮಾವೊಂದನ್ನ ಡೈರೆಕ್ಟ್ ಮಾಡಿದ್ದರು. ಸುದೀಪ್​ ಜೊತೆಗೆ ಇದ್ದ ಇವರು ಟ್ರಸ್ಟ್​ ಗೆ ಎರಡು ಕೋಟಿ ಹಣ ಹಾಕಿದ್ದರಂತೆ. ಅದನ್ನ ಸುದೀಪ್​ರಿಂದ ವಾಪಸ್ ಕೇಳಿದ್ದರು ಎನ್ನಲಾಗಿದೆ. ಆದರೆ ಸುದೀಪ್​ ಹಣ ನೀಡದ ಕಾರಣಕ್ಕೆ ಬೆದರಿಕೆ ಪತ್ರದ ಪ್ರಹಸನ ಮಾಡಿದ್ದಾರೆ. 

 

ಸುದೀಪ್​ರ ಆಪ್ತ, ನಿರ್ಮಾಪಕ ಜಾಕ್ ಮಂಜು ಈ ಸಂಬಂಧ ದೂರು ನೀಡಿದ್ದರು, ಅಲ್ಲದೆ ನಟ ಸುದೀಪ್​ ತಮ್ಮ ಆಪ್ತರಲ್ಲಿಯೇ ಯಾರು ಈ ಕೃತ್ಯವೆಸಗಿದ್ದಾರೆ ಎಂದು ಅನುಮಾನಿಸಿದ್ದರು. ಅವರ ಅನುಮಾನದ ಬೆನ್ನತ್ತಿದ ಸಿಸಿಬಿ ಪೊಲೀಸರು, ಆಪ್ತರನ್ನ ವಿಚಾರಣೆ ನಡೆಸುವಾಗ ರಮೇಶ್ ಕಿಟ್ಟಿ ನಡೆಸಿದ ಕೃತ್ಯ ಬೆಳಕಿಗೆ ಬಂದಿದೆ. 

ಕಾಲ್​ ಮಾಡಿ ಡಿಪಾಸಿಟ್ ಕೇಳ್ತಾರೆ  ಹುಷಾರ್ ಸಾರ್! ಗ್ರಾಮ ಲೆಕ್ಕಿಗನ ಹುದ್ದೆ ಹೆಸರಲ್ಲಿ ನಡೆದೋಯ್ತು  ₹30 ಸಾವಿರ ಮೋಸ 

ಶಿವಮೊಗ್ಗ/  ಯಾರೇನೇ ಹೇಳಿದರೂ ಒಂದ್ಸಲ ನಾಲ್ಕು ಕಡೆ ವಿಚಾರಿಸಿ ನೋಡಿ. ಏಕೆಂದರೆ ಯಾಮಾರಿಸುವವರು ಹೆಚ್ಚಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮ ಲೆಕ್ಕಿಗನ ಹುದ್ದೆಗೆ ಡಿಪಾಸಿಟ್ ಕಟ್ಬೇಕು ಅಂತಾ 30 ಸಾವಿರ ವಸೂಲಿ ಮಾಡಿ ಮೋಸ ಮಾಡಿದ ಘಟನೆಯೊಂದು ನಡೆದಿದೆ. 

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ಈ ಬಗ್ಗೆ ಕೇಸ್ ಆಗಿದೆ.  ಕಳೇದ ಮೂರನೇ ತಾರೀಖು ಘಟನೆ ಸಂಬಂಧ ದೂರುದಾಖಲಾಗಿದೆ.  ದೂರುದಾರರಿಗೆ ಕಳೆದ ಮಾರ್ಚ್​ನಲ್ಲಿ ಒಂದು ಕರೆ ಬಂದಿದೆ. ಆ ಕಾಲ್​ನಲ್ಲಿ ಮಾತಾಡಿದ ವ್ಯಕ್ತಿಯು, ದೂರುದಾರನ ಪುತ್ರನ ಫೈಲ್​ ತಮ್ಮ ಬಳಿ ಬಂದಿದ್ಧಾಗಿ, ಅವರನ್ನ ಗ್ರಾಮ ಲೆಕ್ಕಿಗ ಹುದ್ದೆಗೆ ಆಯ್ಕೆ ಮಾಡಬೇಕಾದಲ್ಲಿ ಗ್ಯಾರಂಟಿ ನೀಡಬೇಕಾಗುತ್ತದೆ. ಗ್ಯಾರಂಟಿಗೋಸ್ಕರ, ಬ್ಯಾಂಕ್​ಗೆ 30 ಸಾವಿರ ರೂಪಾಯಿ ಹಣ ಕಟ್ಟಬೇಕು ಎಂದಿದ್ದಾರೆ. 

ಇಷ್ಟೆ ಅಲ್ಲದೆ, ನೀವು ಕಟ್ಟುವುದು ತಡವಾಗುತ್ತೆ, ಫೋನ್ ಪೇ ಮಾಡಿದರೇ, ನಾವೆ ಕಟ್ಟುತ್ತೇವೆ ಎಂದಿದ್ಧಾರೆ. ಮಗನ ಭವಿಷ್ಯವನ್ನ ನೆನೆದ ತಂದೆ  ಅವರು ಹೇಳಿದಾಗೆ, ಫೋನ್ ಪೇ ಮಾಡಿದ್ಧಾರೆ. ಆನಂತರ  ಮತ್ತೆ ಅವರನ್ನ ಸಂಪರ್ಕಿಸಿ ಎನಾಯ್ತು ಎಂದು ವಿಚಾರಿಸಿದ್ದಾರೆ. ಆ ಸಂದರ್ಭದಲ್ಲಿಯು ಕರೆ ಸ್ವೀಕರಿಸಿದ ವ್ಯಕ್ತಿ ಮತ್ತೊಮ್ಮೆ ಹಣ ಜಮಾ ಮಾಡುವಂತೆ ಕೇಳಿದ್ದಾರೆ. ಆಗ ಡೌಟ್ ಬಂದು ದೊಡ್ಡಪೇಟೆ ಸ್ಟೇಷನ್​ನಲ್ಲಿ ದೂರು ದಾಖಲಿಸಿದ್ಧಾರೆ. 

election case / ಪತ್ರಿಕೆ ನಡುವೆ ಕರಪತ್ರಗಳನ್ನಿಟ್ಟು ಹಂಚಿದವರ ವಿರುದ್ಧ ಕೇಸ್/ ಪರ್ಮಿಟ್ ಇಲ್ಲದ ಪ್ರಚಾರಕ್ಕೂ ದಾಖಲಾಯ್ತು ಎಫ್​ಐಆರ್​!



ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ 2023 ಹತ್ತಿರವಾಗುತ್ತಿರುವಂತೆಯೇ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ವಿರುದ್ಧದ ಪ್ರಕರಣಗಳು ಸಹ ಹೆಚ್ಚುತ್ತಿವೆ. ಚುನಾವಣೆಯಲ್ಲಿ ಮಕ್ಕಳನ್ನು ಬಳಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ದ ಜೆಡಿಎಸ್ ಅಭ್ಯರ್ಥಿ ಹಾಗೂ ಶಿವಮೊಗ್ಗ ನಗರ ಕ್ಷೇತ್ರ ದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವಿರುದ್ಧ ಕೇಸ್ ಆಗಿತ್ತು. 

ಇದಕ್ಕೆ ಪೂರಕವಾಗಿ ಇದೀಗ ಮತ್ತೆರಡು ಕೇಸ್​ಗಳು ದಾಖಲಾಗಿವೆ.  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿಂತೆ ಜಯನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಕೇಸ್​ವೊಂದು ದಾಖಲಾಗಿದೆ. 

ಮಾದರಿ ನೀತಿ ಸಂಹಿತೆ ಜಾರಿ ನೋಡಲ್ ಅಧಿಕಾರಿ  ನಾಗರಾಜ್‌ರವರ ನಿರ್ದೇಶನದ ಮೇರೆಗೆ ಆನಂದಪ್ಪ ಎಂಬವರು ಈ ಸಂಬಂಧ ಕಂಪ್ಲೆಂಟ್ ಮಾಡಿದ್ದಾರೆ.  

ಜಯನಗರ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್​ 

 ಶಿವಮೊಗ್ಗ ನಗರದ ಮಹಾವೀರ ವೃತ್ತದಿಂದ ಗೋಪಿ ಸರ್ಕಲ್ ವರೆಗೆ  ಕೆ.ಎ. 14 ಸಿ 4846 ನಂಬರಿನ ಗೂಡ್ಸ್‌ ಕ್ಯಾರಿಯರ್ ನಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ -113 ದ ಜನಾತ ದಳ (ಜಾತ್ಯಾತೀತ) ಪಕ್ಷದ ವಿಧಾನಸಭಾ ಅಭ್ಯರ್ಥಿ ಆಯನೂರು ಮಂಜುನಾಥ ರವರ ಹಾಗೂ ಇತರರ ಪೋಟೋ ಮತ್ತು ಪಕ್ಷದ ಚಿಹ್ನೆ ಇರುವ ಫೆಕ್ಸ್ ಕಟೌಟ್ ಗಳನ್ನು ಹಾಕಿಕೊಂಡು ಪ್ರಚಾರ ಮಾಡಲಾಗುತ್ತಿತ್ತು. 

ಈ ಸಂಬಂಧ ಗೂಡ್ಸ್​ ವಾಹನಗಳ ಬಳಸಿಕೊಂಡು ಪ್ರಚಾರ ನಡೆಸಲು,  ಚುನಾವಣಾ ಅಧಿಕಾರಿಗಳಿಂದ  ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ದೂರಲಾಗಿದೆ. ಇದು  2023 ರ ವಿಧಾನ ಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲಂಘನೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. 

 

ಸಾಗರದಲ್ಲಿಯು ದಾಖಲಾಯ್ತು ಪ್ರಕರಣ

ಇನ್ನು ಕಳೆದ ಒಂದನೇ ತಾರೀಖು ಸಾಗರ ಟೌನ್​ ಸ್ಟೇಷನ್​ ನಲ್ಲಿ ಕೇಸ್​ ವೊಂದು ದಾಖಲಾಗಿದೆ. ಅದರ ಪ್ರಕಾರ,  ಸಂಘಟನೆಯೊಂದರ ಹೆಸರಲ್ಲಿ ಕರಪತ್ರಗಳನ್ನು ಪತ್ರಿಕೆಗಳ ನಡುವಲ್ಲಿ ಇಟ್ಟು ಹಂಚಲಾಗಿದ್ದು, ಇದರ ವಿರುದ್ಧ ಕ್ರಮಕ್ಕೆ ಮನವಿ ಮಾಡಲಾಗಿದೆ. 

ಬಿ.ಜೆ.ಪಿ ಅಭ್ಯರ್ಥಿಯಾದ ಹರತಾಳು ಹಾಲಪ್ಪ ರವರ ಬಗ್ಗೆ ಅಪಪ್ರಚಾರ ಮಾಡುವಂತಹ ಬರಹವಿದ್ದ ಕರಪತ್ರದಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ವಿವರಗಳು ಪತ್ತೆಯಾಗಿಲ್ಲ. ಇದನ್ನ ದುರುದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂಧು ಆರೋಪಿಸಿ ದೂರು ನೀಡಲಾಗಿದ್ದು, ಈ ಸಂಬಂಧ ಎಫ್​ಐಆರ್ ದಾಖಲಾಗಿದೆ. 

Malenadutoday.com Social media